ಗ್ರಾಪಂ ಚುನಾವಣೆ: 12 ನಾಮಪತ್ರ ಸಲ್ಲಿಕೆ
ಉಡುಪಿ, ಜೂ.20: ಜಿಲ್ಲೆಯ ಉಡುಪಿ ಮತ್ತು ಕುಂದಾಪುರ ತಾಲೂಕಿನ 4 ಗ್ರಾಪಂ ಸ್ಥಾನಗಳಿಗೆ ಒಟ್ಟು 12 ನಾಮಪತ್ರ ಸಲ್ಲಿಕೆಯಾಗಿವೆ. ಚೇರ್ಕಾಡಿ ಗ್ರಾಪಂ ಒಂದು ಸ್ಥಾನಕ್ಕೆ ಒಂದೇ ನಾಮಪತ್ರ ಸಲ್ಲಿಕೆಯಾಗಿದ್ದು, ಅವಿರೋಧ ವಾಗಿ ಆಯ್ಕೆಯಾಗುವ ಸಾಧ್ಯತೆ ಇದೆ.
ಕುಂದಾಪುರ ತಾಲೂಕಿನ ಜಡ್ಕಲ್ ಗ್ರಾಪಂನ ಒಂದು ಸ್ಥಾನಕ್ಕೆ 4, ಹೊಸಂಗಡಿ ಗ್ರಾಪಂನ ಒಂದು ಸ್ಥಾನಕ್ಕೆ 4, ಉಡುಪಿ ತಾಲೂಕಿನ ಚೇರ್ಕಾಡಿ ಗ್ರಾಪಂನ ಒಂದು ಸ್ಥಾನಕೆ ಒಂದು ಹಾಗೂ ಕೋಟೆ ಗ್ರಾಪಂ ಒಂದು ಸ್ಥಾನಕ್ಕೆ 3 ನಾಮಪತ್ರಗಳು ಸಲ್ಲಿಕೆಯಾಗಿವೆ.
ನಾಮಪತ್ರಗಳ ಪರಿಶೀಲನೆ ನಾಳೆ ನಡೆಯಲಿದೆ. ಜೂ.23 ನಾಮಪತ್ರ ಹಿಂದೆಗೆಯಲು ಕೊನೆಯ ದಿನವಾಗಿದೆ. ಜು.2ರಂದು ಮತದಾನ ನಡೆಯಲಿದೆ.
Next Story





