ಎಮ್ಮೆ ಅಕ್ರಮ ಸಾಗಣೆ ಆರೋಪ :ಮೂವರಿಗೆ ಥಳಿತ
ಇಟ(ಉ.ಪ್ರ), ಜೂ.20: ಎಮ್ಮೆಯನ್ನು ಕದ್ದು ಅಕ್ರಮವಾಗಿ ಸಾಗಣೆ ಮಾಡುತ್ತಿದ್ದ ಶಂಕೆಯಲ್ಲಿ ಮೂವರ ಮೇಲೆ ಗುಂಪೊಂದು ಮಾರಣಾಂತಿಕವಾಗಿ ಹಲ್ಲೆ ನಡೆಸಿದ ಘಟನೆ ಉ.ಪ್ರದೇಶದ ಇಟ ಜಿಲ್ಲೆಯಲ್ಲಿ ನಡೆದಿದೆ
ಮೂವರು ವ್ಯಕ್ತಿಗಳು ಮೂರು ಎಮ್ಮೆಗಳನ್ನು ಕದ್ದು ಮಿನಿ ಟ್ರಕ್ ಒಂದರಲ್ಲಿ ಅಕ್ರಮವಾಗಿ ಸಾಗಿಸುತ್ತಿದ್ದಾಗ ಗುಂಪೊಂದು ಅವರನ್ನು ತಡೆದಿದೆ. ಆಗ ಅವರು ಗುಂಪಿನತ್ತ ಗುಂಡು ಹಾರಿಸಿದ್ದಾರೆ. ಈ ಸಂದರ್ಭ ಅವರ ಮೇಲೆ ಗುಂಪು ಮುಗಿಬಿದ್ದಾಗ ಇಬ್ಬರು ತಪ್ಪಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ . ಉಳಿದ ಒಬ್ಬನ ಮೇಲೆ ಮಾರಣಾಂತಿಕವಾಗಿ ಹಲ್ಲೆ ನಡೆಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಎರಡು ಎಮ್ಮೆ ಮತ್ತು ಅವುಗಳನ್ನು ಸಾಗಿಸಲು ಬಳಸಲಾಗುತ್ತಿದ್ದ ವಾಹನವನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
Next Story