ವಿಕಾಸ್ ಕಾಲೇಜಿನಲ್ಲಿ ಯೋಗ ದಿನಾಚರಣೆ

ಮಂಗಳೂರು, ಜೂ.21: ನಗರದ ವಿಕಾಸ್ ಕಾಲೇಜಿನಲ್ಲಿ ವಿಶ್ವ ಯೋಗಾ ದಿನಾಚರಣೆ ಹಾಗೂ ಯೋಗ ಕ್ಲಬ್‌ನ್ನು ಉದ್ಘಾಟಿಸಲಾಯಿತು.
ಈ ಸಂದರ್ಭ ಅಂತಾರಾಷ್ಟ್ರೀಯ ಯೋಗ ತೀರ್ಪುಗಾರ ಗೋಪಾಲಕೃಷ್ಣ ದೇಲಂಪಾಡಿಯವರನ್ನು ಸನ್ಮಾನಿಸಲಾಯಿತು.
ಬಳಿಕ ಮಾತನಾಡಿದ ಅವರು ವ್ಯಕ್ತಿಯ ಶಾರೀರಿಕ ಹಾಗೂ ಮಾನಸಿಕ ದೃಢತೆಗೆ ಯೋಗ ಸಹಕಾರಿಯಾಗುತ್ತದೆ. ವಿದ್ಯಾರ್ಥಿಗಳ ಓದುವಿಕೆಗೆ ಏಕಾಗ್ರತೆ ಬಹಳ ಮುಖ್ಯ. ‘ಯೋಗ’ ಪದದ ಅರ್ಥವೇ ಏಕಾಗ್ರತೆ ಎಂದರು.
ಪ್ರಾಂಶುಪಾಲ ಟಿ. ರಾಜಾರಾಮ್ ರಾವ್ ಸ್ವಾಗತಿಸಿದರು. ವೇದಿಕೆಯಲ್ಲಿ ಕಾಸ್ ಎಜುಸೊಲ್ಯುಶನ್‌ನ ನಿರ್ದೇಶಕ ಡಾ.ಅನಂತಪ್ರಭು ಜಿ, ಟ್ರಸ್ಟಿಗಳಾದ ಜೆ. ಕೊರಗಪ್ಪಉಪಸ್ಥಿತರಿದ್ದರು.
ಯೋಗದ ಮಹತ್ವದ ಬಗ್ಗೆ ಸಂಸ್ಕೃತ ಉಪನ್ಯಾಸಕ ಲಕ್ಷ್ಮೀಶ್ ಭಟ್ ಮಾತನಾಡಿದರು. ಉಪನ್ಯಾಸಕಿ ಶೋಭಾ ಪಿ. ಕಾರ್ಯಕ್ರಮ ನಿರೂಪಿಸಿದರು. ಅಜಿತ್ ರೈ ವಂದಿಸಿದರು.
Next Story





