ಹಸಿಮೀನಿಗೆ ಜಿರಳೆ ಮದ್ದು ಸಿಂಪಡಣೆ: ವೀಡಿಯೊ ವೈರಲ್

ತೊಡುಪುಝ,ಜೂ. 21: ಇಡುಕ್ಕಿ ವಣ್ಣಪುರಂನಲ್ಲಿ ಮಾರಾಟಕ್ಕಿರಿಸಿದ್ದ ಹಸಿಮೀನಿಗೆ ಜಿರಳೆ ನಾಶಕ್ಕೆ ಪ್ರಯೋಗಿಸುವ ವಿಷಮದ್ದು ಹಿಟ್‌ನ್ನು ಸಿಂಪಡಿಸುವ ದೃಶ್ಯ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದ್ದು, ನಂತರ ಸೂಪರ್‌ಮಾರ್ಕೆಟ್‌ನ್ನು ಮುಚ್ಚಲಾಗಿದೆ. ಆಹಾರಭದ್ರತಾ ಅಧಿಕಾರಿಗಳು ತಪಾಸಣೆ ನಡೆಸಿದ್ದಾರೆ. ತಪಾಸಣೆಯ ವೇಳೆ ಜಿರಳೆ ಮದ್ದಿನ ಪ್ಯಾಕೆಟ್ ಕಂಡು ಬಂದಿದೆ.
ವೀಡಿಯೊ ಪ್ರಸಾರಣಾ ನಂತರ ಅಂಗಡಿಯನ್ನು ಮುಚ್ಚಲಾಗಿತ್ತು. ಈ ಹಿಂದೆ ಮಾರಾಟಕ್ಕೆ ಇಟ್ಟಿದ್ದ ಮೀನಿನ ಮೇಲೆ ಮದ್ದು ಸಿಂಪಡಿಸುವ ದೃಶ್ಯ ಸಾಮಾಜಿಕ ಮಾದ್ಯಮಗಳಲ್ಲಿ ಪ್ರಸಾರವಾಗಿದೆ. ಫೇಸ್‌ಬುಕ್‌ನಲ್ಲಿ ವೈರಲ್ ಆದ ವೀಡಿಯೋ ಇದೋ ಇಲ್ಲಿದೆ-
Next Story





