ಆದಿತ್ಯನಾಥ್ ಕಚೇರಿಯ ಗೇಟ್ ಕೆಳಗಡೆ ಸಿಲುಕಿ ಬಾಲಕಿ ಮೃತ್ಯು

ಲಕ್ನೋ, ಜೂ.21: ಉತ್ತರ ಪ್ರದೇಶ ಮುಖ್ಯಮಂತ್ರಿ ಆದಿತ್ಯನಾಥ್ ಕಚೇರಿ ಲೋಕಭವನದ ಗೇಟ್ ಕೆಳಗಡೆ ಸಿಲುಕಿ 9 ವರ್ಷದ ಬಾಲಕಿಯೊಬ್ಬಳು ಮೃತಪಟ್ಟ ಘಟನೆ ನಡೆದಿದೆ.
ಕಾಮಗಾರಿ ನಡೆಯುತ್ತಿದ್ದ ಸಂದರ್ಭ ಈ ಘಟನೆ ಸಂಭವಿಸಿದ್ದು, ಲಖಿಂಪುರ ನಿವಾಸಿಯಾಗಿದ್ದ ಬಾಲಕಿ ತನ್ನ ತಾಯಿಯೊಂದಿಗೆ ಲೋಕಭವನಕ್ಕೆ ಆಗಮಿಸಿದ್ದಳು. ಇಲ್ಲಿ ಕಾಮಗಾರಿ ನಡೆಯುತ್ತಿದ್ದು, ಆಕೆಯ ತಾಯಿ ದಿನಗೂಲಿ ಕಾರ್ಮಿಕೆಯಾಗಿ ದುಡಿಯುತ್ತಿದ್ದರು. ಕಾಮಗಾರಿ ನಡೆಯುತ್ತಿದ್ದ ಸಂದರ್ಭ ಗೇಟ್ ನ ಕೆಳಗೆ ಸಿಲುಕಿ ಬಾಲಕಿ ಗಂಭೀರವಾಗಿ ಗಾಯಗೊಂಡಿದ್ದಳು. ಕೂಡಲೇ ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಆಕೆ ಅದಾಗಲೇ ಮೃತಪಟ್ಟಿದ್ದಳು.
Next Story





