ರಾಜಧಾನಿಯಲ್ಲಿ ಜಗತ್ತಿನ ಹಿರಿಯ ಯೋಗ ಶಿಕ್ಷಕಿ, ಭಾರತದ ಹಿರಿಯ ಯೋಗ ಗುರುವಿನಿಂದ ಯೋಗಾಭ್ಯಾಸ ಪ್ರದರ್ಶನ

ಬೆಂಗಳೂರು, ಜೂ.21: ನಗರದ ಕಂಠೀರವ ಕ್ರೀಡಾಂಗಣದಲ್ಲಿ ನಡೆದ 3ನೆ ಅಂತಾರಾಷ್ಟ್ರೀಯ ಯೋಗ ದಿನಾಚರಣೆ ಕಾರ್ಯಕ್ರಮದಲ್ಲಿ ಜಗತ್ತಿನ ಹಿರಿಯ ಯೋಗ ಶಿಕ್ಷಕಿ ತಾವೋ ಪೋರ್ಚೋನ್-ಲಿಂಚ್ ಹಾಗೂ ಭಾರತದ ಹಿರಿಯ ಯೋಗ ಗುರು ಅಮ್ಮಾ ನನ್ನಮಲ್ ವಿವಿಧ ಆಸನಗಳನ್ನು ಪ್ರದರ್ಶಿಸಿದರು.
ಈ ಇಬ್ಬರು ದಿಗ್ಗಜರೊಂದಿಗೆ ಸಾಮಾಜಿಕ ಕಾರ್ಯಕರ್ತ ಅಣ್ಣಾ ಹಝಾರೆ ಹಾಗೂ ಕೇಂದ್ರ ಸಚಿವ ಅನಂತ್ ಕುಮಾರ್ ಭಾಗವಹಿಸಿದ್ದರು. ಲಕ್ನೋ, ದಿಲ್ಲಿ ಸೇರಿದಂತೆ ದೇಶದ ವಿವಿಧ ಭಾಗಗಳಲ್ಲಿ ಅಲ್ಪಸ್ವಲ್ಪ ಮಳೆಯಾದರೂ ಈ ನಡುವೆಯೂ ಯೋಗ ಪ್ರದರ್ಶನ ನಡೆಯಿತು. ಲಕ್ನೋದಲ್ಲಿ ನಡೆದ ಅಂತಾರಾಷ್ಟ್ರೀಯ ಯೋಗ ದಿನಾಚರಣೆಗೆ ಪ್ರಧಾನಿ ನರೇಂದ್ರ ಮೋದಿ ನೇತೃತ್ವ ನೀಡಿದರು.
Next Story





