ಪಿಣರಾಯಿ ವಿಜಯನ್ ರಿಂದ ಸನ್ಮಾನ ಸ್ವೀಕರಿಸಿದ ಬೆಳ್ತಂಗಡಿಯ ಸುಂದರ ಮಲೆಕುಡಿಯ
ಬೆಳ್ತಂಗಡಿ, ಜೂ.21: ಆಂಧ್ರ ಪ್ರದೇಶದ ವಿಶಾಖ ಪಟ್ಟಣದಲ್ಲಿ ನಡೆಯುತ್ತಿರುವ ಆದಿವಾಸಿ ಅಧಿಕಾರ್ ಮಂಚ್‌ನ ರಾಷ್ಟ್ರೀಯ ಸಮ್ಮೇಳನದಲ್ಲಿ ಭೂ ಮಾಲಕರ ವಿರುದ್ಧದ ಹೋರಾಟದಲ್ಲಿ ತನ್ನ ಎರಡೂ ಕೈಗಳನ್ನು ಕಳೆದುಕೊಂಡ ಬೆಳ್ತಂಗಡಿ ತಾಲೂಕು ನೆರಿಯ ಗ್ರಾಮದ ಕಾಟಾಜೆ ನಿವಾಸಿ ಸುಂದರ ಮಲೆಕುಡಿಯ ಅವರನ್ನು ಕೇರಳದ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಸನ್ಮಾನಿಸಿದರು.
ಸಮ್ಮೇಳನದಲ್ಲಿ ಬೆಳ್ತಂಗಡಿಯ ಪ್ರತಿನಿಧಿಗಳಾಗಿ ಆದಿವಾಸಿ ಹಕ್ಕುಗಳ ಸಮನ್ವಯ ಸಮಿತಿಯ ಮುಖಂಡರುಗಳಾದ ವಿಠಲ ಮಲೆಕುಡಿಯ, ವಸಂತ ನಡ, ಭಾಗವಹಿಸಿದ್ದಾರೆ.
Next Story





