ನಾನು ಬಡವ, ನಾನು ಸರಕಾರದ ಫಲಾನುಭವಿ: ಬಡವರ ಮನೆಗೆ ರಾಜಸ್ಥಾನ ಸರಕಾರದ ಬೋರ್ಡ್

ದೌಸಾ, ಜೂ. 18: ನಾನು ಬಡವ. ನಾವು ಸರಕಾರದ ಸೌಲಭ್ಯ ಪಡೆದುಕೊಳ್ಳುತ್ತಿದ್ದೇನೆ. ಇದು ರಾಜಸ್ಥಾನ ಸರಕಾರ ದೌಸಾ ಜಿಲ್ಲೆಯ ಬಡವರ ಮನೆಯ ಗೋಡೆಯಲ್ಲಿ ಅಳವಡಿಸಲಾದ ಬೋರ್ಡ್‌ನಲ್ಲಿ ಪೈಂಟ್‌ನಲ್ಲಿ ಬರೆದಿರುವ ವಾಕ್ಯಗಳು.
ಸರಕಾರದ ಕಲ್ಯಾಣ ಯೋಜನೆ ಬಳಸಿಕೊಳ್ಳುವ ರಾಜಸ್ಥಾನದ ದೌಸಾ ಜಿಲ್ಲೆಯ ಬಡ ಜನರು ಇದರಿಂದ ತೀವ್ರ ಮುಖಭಂಗಕ್ಕೆ ಒಳಗಾಗಿದ್ದಾರೆ. ದೌಸಾ ಜಿಲ್ಲೆಯ ಸ್ಥಳೀಯಾಡಳಿತ ರಾಷ್ಟ್ರೀಯ ಆಹಾರ ಭದ್ರತೆ ಕಾಯ್ದೆ ಅಡಿಯಲ್ಲಿ ಪಡಿತರ ಸೌಲಭ್ಯ ಪಡೆಯುವ ಬಡ ಜನರ ಮನೆಗಳ ಗೋಡೆಗೆ ಬೋರ್ಡ್ ಅಳವಡಿಸಿದೆ. ಈ ಗ್ರಾಮದಲ್ಲಿರುವ ಪ್ರತಿ ಬಡ ಕುಟುಂಬದ ಮನೆಗಳ ಹೊರಗೆ ನಾನು ಬಡವ. ನಾನು ಸರಕಾರದ ಸೌಲಭ್ಯ ಪಡೆದುಕೊಳ್ಳುತ್ತಿದ್ದೇನೆ ಎಂದು ಪೈಂಟ್‌ನಲ್ಲಿ ಬರೆಯಲಾದ ಹಾಗೂ ಸಹಿ ಉಳ್ಳ ಹಳದಿ ಬೋರ್ಡ್ ಕಂಡುಬಂದಿದೆ.
ದೌಸಾ ಜಿಲ್ಲೆಯ ಸಿಕ್ರಾಯಿ ಹಾಗೂ ಬಂಡಿಕುಯಿ ತಾಲೂಕಿನಲ್ಲಿ ಸುಮಾರು 50 ಸಾವಿರ ಮನೆಗಳಿವೆ. ಸರಕಾರದ ಯೋಜನೆಗಳನ್ನು ದುರ್ಬಳಕೆ ಮಾಡಿಕೊಳ್ಳದಿರಲು ಈ ಕ್ರಮ ಕೈಗೊಳ್ಳಲಾಗಿದೆ ಎಂದು ಸ್ಥಳೀಯಾಡಳಿತ ತಿಳಿಸಿದೆ.
Next Story





