ಪತ್ರಕರ್ತರಿಗಾಗಿ ಜಿಲ್ಲಾ ಮಟ್ಟದಕಾರ್ಯಗಾರ
ಭಟ್ಕಳ, ಜೂ.21: ತಾಲೂಕು ಕಾರ್ಯನಿರತ ಪತ್ರರ್ತರ ಸಂಘದ ಬೆಳ್ಳಿಹಬ್ಬದ ಪ್ರಯುಕ್ತ ಜು.8ರಂದು ಇಲ್ಲಿನ ಶ್ರೀ ನಾಗಯಕ್ಷೆಧರ್ಮಾರ್ಥ ಸಭಾ ಭವನದಲ್ಲಿ ಪತ್ರಿಕಾ ದಿನಾಚರಣೆ ಹಾಗೂ ಜಿಲ್ಲೆಯ ವಕೀಲರು ಹಾಗೂ ಪತ್ರಕರ್ತರಿಗಾಗಿ ಜಿಲ್ಲಾ ಮಟ್ಟದಕಾರ್ಯಾಗಾರ ಹಮ್ಮಿಕೊಳ್ಳಲಾಗಿದೆ.
ಕಾರ್ಯಾಗಾರವನ್ನು ಮಾಜಿ ಲೋಕಾಯುಕ್ತ ಹಾಗೂ ನಿವೃತ್ತ ಸುಪ್ರೀಂಕೋರ್ಟ ನ್ಯಾಯಮೂರ್ತಿ ಸಂತೋಷ ಹೆಗ್ಡೆ ಉದ್ಘಾಟಿಸುವರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಾಸಕ ಮಂಕಾಳ ಎಸ್. ವೈದ್ಯ ವಹಿಸುವರು. ಕಾರ್ಯನಿರತ ಪತ್ರಕರ್ತರ ಸಂಘ ಬೆಳ್ಳಿಹಬ್ಬದ ಸವಿನೆನಪಿಗಾಗಿ ಹೊರತರಲು ಉದ್ದೇಶಿಸಿರುವ ಸ್ಮರಣ ಸಂಚಿಕೆಯ ಮನವಿ ಪತ್ರ ಬಿಡುಗಡೆಯನ್ನುಜಿಲ್ಲೆಯ ಹಿರಿಯ ಪತ್ರಕರ್ತ ಜಿ.ಯು.ಭಟ್ಟ ನೆರವೇರಿಸುವರು.
ಮುಖ್ಯ ಅತಿಥಿಗಳಾಗಿ ಖಾಜಿಯಾ ಬಿಲ್ಡರ್ಸನ ಮುಹಮ್ಮದ್ ಯುನುಸ್ ಖಾಜಿಯಾ, ಕಾರ್ಯನಿರತ ಪತ್ರಕರ್ತರ ಸಂಘದ ರಾಜ್ಯಾಧ್ಯಕ್ಷ ಎನ್. ರಾಜು, ಜಿಲ್ಲಾಧ್ಯಕ್ಷ ಸುಬ್ರಾಯ ಭಟ್ಟ ಬಕ್ಕಳ, ಶ್ರೀ ನಾಗಯಕ್ಷೆಧರ್ಮದೇವಿ ಸಂಸ್ಥಾನದ ಅಧ್ಯಕ್ಷ ರಾಮದಾಸ ಪ್ರಭು ಉಪಸ್ಥಿತರಿರುವರು ಎಂದೂ ತಿಳಿಸಲಾಗಿದೆ.
ಕಾರ್ಯಕ್ರಮದಲ್ಲಿ ಮೊಹರೆ ಹಣಮಂತರಾವ್ ರಾಜ್ಯ ಪ್ರಶಸ್ತಿಗೆ ಭಾಜನರಾಗಿರುವ ಕರಾವಳಿ ಮುಂಜಾವು ವ್ಯವಸ್ಥಾಪಕ ಸಂಪಾದಕಗಂಗಾಧರ ಹಿರೇಗುತ್ತಿಯವರನ್ನುಗೌರವಿಸಲಾಗುವುದು. ಪ್ರತಿ ವರ್ಷದಂತೆ ಪತ್ರಿಕಾ ದಿನಾಚರಣೆಯ ಅಂಗವಾಗಿ ಸಮಾಜ ಸೇವಕರು, ವಿಜಯಾ ಬ್ಯಾಂಕ್ ನಿವೃತ್ತ ಹಿರಿಯ ಶಾಖಾಧಿಕಾರಿ ಎಂ.ಆರ್.ನಾಯ್ಕಅವರನ್ನು ಹಾಗೂ ಹಿರಿಯ ಪತ್ರಿಕಾ ವಿತರಕರಾದ ಹನುಮಂತ ಪ್ರಭುಅವರನ್ನು ಸನ್ಮಾನಿಸಲಾಗುವುದು.







