ಅಶ್ರಫ್ ಕೊಲೆ: ಯುನಿವೆಫ್ ಖಂಡನೆ
ಮಂಗಳೂರು, ಜೂ. 21: ಅಶ್ರಫ್ ಕಲಾಯಿಯ ಹತ್ಯೆ ಜಿಲ್ಲೆಯ ಶಾಂತಿಪ್ರಿಯರಲ್ಲಿ ಮತ್ತೆ ಆತಂಕವನ್ನು ಮೂಡಿಸಿದೆ. ರಮಝಾನ್ ನ ಆರಂಭದಲ್ಲೇ ಇಂತಹ ಒಂದು ಅನುಮಾನ ಸಮುದಾಯಕ್ಕಿತ್ತು, ಅದು ಈಗ ನಿಜವಾಗಿದೆ. ರಮಝಾನ್ ಆರಂಭದಲ್ಲಿ ಅಲ್ಲಲ್ಲಿ ಅಹಿತಕರ ಘಟನೆಗಳು ನಡೆಯುವಾಗಲೇ ಅದು ಒಂದು ದೊಡ್ಡ ಘಟನೆಯ ಮುನ್ಸೂಚನೆಯಾಗಿತ್ತು ಆದರೆ ಪೊಲೀಸ್ ಇಲಾಖೆ ಈ ಬಗ್ಗೆ ಹೆಚ್ವು ಆಸಕ್ತಿ ವಹಿಸಿ ಕ್ರಿಮಿನಲ್ ಗಳ ಮೇಲೆ ನಿಗಾ ವಹಿಸುತ್ತಿದ್ದರೆ ಇಂದಿನ ಘಟನೆ ನಡೆಯುತ್ತಿರಲಿಲ್ಲ. ಈ ಕೃತ್ಯವನ್ನು 'ಯುನಿವೆಫ್' ಖಂಡಿಸುತ್ತದೆ ಎಂದು ಪ್ರಕಟನೆ ತಿಳಿಸಿದೆ.
ಘಟನೆಯ ಹಿಂದಿರುವ ಶಕ್ತಿಯನ್ನು ಯಾವುದೇ ಒತ್ತಡಗಳಿಗೆ ಮಣಿಯದೆ ಬಂಧಿಸಿ ಕಾನೂನಿಗೊಪ್ಪಿಸಿ ಉಗ್ರ ಶಿಕ್ಷೆಯಾಗಬೇಕೆಂದು ಆಗ್ರಹಿಸುವುದಾಗಿ ಯುನಿವೆಫ್ ಕರ್ನಾಟಕ ಅಧ್ಯಕ್ಷ ರಫೀಉದ್ದೀನ್ ಕುದ್ರೋಳಿ ಪ್ರಕಟನೆಯಲ್ಲಿ ತಿಳಿಸಿದ್ದಾರೆ.
Next Story





