ದೇಶದ 14 ರಾಜ್ಯಪಾಲರಿಗೆ ಆರೆಸ್ಸೆಸ್ ಸಂಬಂಧ

ಮುಂಬೈ,ಜೂ. 22: ದೇಶದ 29 ರಾಜ್ಯಪಾಲರುಗಳಲ್ಲಿ ಹನ್ನೆರಡು ರಾಜ್ಯಪಾಲರು ಮತ್ತು ಕೇಂದ್ರಾಡಳಿತದ ಇಬ್ಬರು ಲೆಫ್ಟಿನೆಂಟ್ ಗವರ್ನರ್‌ಗಳು ಆರೆಸ್ಸೆಸ್‌ನೊಂದಿಗೆ ನೇರ ಸಂಬಂಧ ಇರುವವರು ಆಗಿದ್ದಾರೆ. ಇವರು ಒಂದೋ ಆರೆಸ್ಸೆಸ್‌ನ ಸ್ವಯಂಸೇವಕ್ ಅಥವಾ ಪ್ರಚಾರಕರಾಗಿದ್ದವರು ಎಂದುಬಿಸಿನೆಸ್ ಸ್ಟಾಂಡರ್ಡ್ ವರದಿ ಮಾಡಿದೆ. ರಾಮ್‌ನಾಥ್ ಕೋವಿಂದ್ ಎನ್‌ಡಿಎಯ ರಾಷ್ಟ್ರಪತಿಯಾಗಿ ಸೂಚಿಸಲಾದ ಹಿನ್ನೆಲೆಯಲ್ಲಿ ಪತ್ರಿಕೆ ಈ ವರದಿಯನ್ನು ಪ್ರಕಟಿಸಿದೆ.
ಅರುಣಾಚಲ ಪ್ರದೇಶದ ಹೆಚ್ಚುವರಿ ಹೊಣೆಯಿರುವ ನಾಗಲ್ಯಾಂಡ್ ಪದ್ಮನಾಭ ಆಚಾರ್ಯ, ರಾಮನಾಥ್ ಕೋವಿಂದ್‌ರ ರಾಜಿನಾಮೆಯಿಂದ ಹೆಚ್ಚುವರಿ ಹೊಣೆ ವಹಿಸಿಕೊಂಡಿರುವ ಪಶ್ಚಿಮ ಬಂಗಾಳದ ಕೇಸರಿನಾಥ್ ತ್ರಿಪಾಠಿ, ಛತ್ತೀಸ್ ಗಡದ ಬಲ್‌ರಾಂ ದಾಸ್ ಟಂಡನ್, ಮಧ್ಯಪ್ರದೇಶದ ಹೆಚ್ಚುವರಿ ಹೊಣೆಯಿರುವ ಗುಜರಾರತ್‌ನ ಓಂಪ್ರಕಾಶ್ ಕೊಹ್ಲಿ, ಹರಿಯಾಣದ ಕಪ್ತಾನಸಿಂಗ್ ಸೋಳಂಕಿ, ಹಿಮಾಚಲ ಪ್ರದೇಶದ ಆಚಾರ್ಯದೇವ್ ವ್ರತ್, ಕರ್ನಾಟಕದ ವಜೂಭಾಯಿವಾಲ, ತಮಿಳ್ನಾಡಿನ ಹೆಚ್ಚುವರಿ ಹೊಣೆಯಿರುವ ಮಹಾರಾಷ್ಟ್ರದ ಸಿ. ವಿದ್ಯಾಸಾಗರ್ ರಾವ್, ರಾಜಸ್ಥಾನದ ಕಲ್ಯಾಣ್ ಸಿಂಗ್, ತ್ರಿಪುರದ ತಥಾಗತ ರಾಯ್, ಉತ್ತರ ಪ್ರದೇಶದ ರಾಂ ನಾಯಿಕ್ ಆರೆಸ್ಸೆಸ್ ಹಿನ್ನೆಲೆಯ ರಾಜ್ಯಪಾಲರು ಆಗಿದ್ದಾರೆ.
ಗೋವಾ ರಾಜ್ಯಪಾಲ ಮೃದುಲಾ ಸಿನ್ಹ ಆರೆಸ್ಸೆಸ್ ಸಂಬಂಧವಿರುವ ಸಂಘಟನೆಯಲ್ಲಿ ಕೆಲಸ ಮಾಡಿದವರು. ಅಂಡಮಾನ್ ನಿಕೋಬರ್‌ನ ಜಗದೀಶ್ ಮುಖಿ, ದಮನ್ ಡಿಯುವಿನ ಪ್ರಫುಲ್ ಖೋ ಪಟೇಲ್ ಆರೆಸ್ಸೆಸ್ ಸಂಬಂಧ ಇರುವ ಲೆಪ್ಟಿನೆಂಟ್ ಗವರ್ನರ್‌ಗಳು, ಇವರಲ್ಲದೆ ಆರೆಸ್ಸೆಸ್‌ನೊಂದಿಗೆ ನೇರ ಸಂಬಂಧ ಇಲ್ಲದಿದ್ದರೂ ದ್ರೌಪದಿ ಮುರ್ಮು(ಝಾರ್ಖಂಡ್). ವಿಪಿಸಿಂಗ್ ಬಡ್ನೋರಾ(ಪಂಜಾಬ್) , ಬನ್ವಾರಿಲಾಲ್ ಪುರೋಹಿತ್(ಅಸ್ಸಾಂ) ಬಿಜೆಪಿ ನಾಯಕರಾದ ರಾಜ್ಯಪಾಲರು ಆಗಿದ್ದಾರೆ.





