ಮೂಡುಬಿದಿರೆ: ಶಾಲಾ ಸಂಸತ್ತು, ವಿದ್ಯಾರ್ಥಿ ಸಂಘದ ಉದ್ಘಾಟನೆ

ಮೂಡುಬಿದಿರೆ, ಜೂ. 22: ದಿಗಂಬರ ಜೈನ ಅನುದಾನಿತ ಹಿರಿಯ ಪ್ರಾಥಮಿಕ ಶಾಲಾ ಸಂಸತ್ತು ಹಾಗೂ ವಿವಿಧ ಸಂಘಗಳ ಉದ್ಘಾಟನಾ ಸಮಾರಂಭ ಹಾಗೂ ವಿಶ್ವ ಯೋಗ ದಿನಾಚರಣೆ ಶಾಲಾ ಅಮೃತ ಮಾಹೋತ್ಸವ ಕಟ್ಟಡದಲ್ಲಿ ನೆರವೇರಿತು.
ಕಾರ್ಯಕ್ರಮವನ್ನು ಉದ್ಘಾಟಿಸಿದ ಕಲ್ಲಬೆಟ್ಟು ಸೇವಾ ಸರಕಾರಿ ಬ್ಯಾಂಕ್ ಅಧ್ಯಕ್ಷ ಕೆ. ಕೃಷ್ಣರಾಜ್ ಹೆಗ್ಡೆ ಮಾತನಾಡಿ, ಮಗು ತನ್ನ ಪ್ರತಿಭೆಯನ್ನು ವಿವಿಧ ರಂಗದಲ್ಲಿ ತೋರ್ಪಡಿಸಲು ಶಾಲಾ ಹಂತದ ವಿವಿಧ ಸಂಘಗಳು ಸಹಕಾರಿಯಾಗುತ್ತವೆ. ದೇಶದ ಆಡಳಿತ ವ್ಯವಸ್ಥೆಯ ಬಗ್ಗೆ ಮಕ್ಕಳಿಗೆ ತಿಳಿ ಹೇಳುತ್ತಾ ವಿವಿಧ ಸಂಘಗಳ ಜವಾಬ್ದಾರಿಯನ್ನು ಅರಿತಿರಬೇಕು ಎಂದರು. ಸಭೆಯ ಅಧ್ಯಕ್ಷತೆ ವಹಿಸಿದ್ದ ಮೂಡುಬಿದಿರೆ ಶ್ರೀ ದಿಗಂಬರ ಜೈನ ವಿದ್ಯಾವರ್ಧಕ ಸಂಘ ಕಾರ್ಯದರ್ಶಿ ಅಭಿಜಿತ್ ಎಂ. ಮಾತನಾಡಿ ಮಕ್ಕಳು ತಮಗೆ ಆಗುವ ತೊಂದರೆಯನ್ನು ಸ್ವಪ್ರೇರಣೆಯಿಂದ ಧೈರ್ಯವಾಗಿ ಹೇಳುವ ಮನೋಭಾವನೆಯನ್ನು ಬೆಳೆಸಲು ಶಿಕ್ಷಕರು ಪ್ರೋತ್ಸಾಹಿಸಬೇಕು ಎಂದರು.
ಶಾಲಾ ಸಂಚಾಲಕ ಬಿ. ಪ್ರತಾಪ್ ಕುಮಾರ್ ಶಾಲಾ ಸಂಸತ್ತಿನ ಎಲ್ಲಾ ಮಂತ್ರಿಗಳಿಗೆ ಪದಕ ಧಾರಣೆ ನಡೆಸಿ ವಿವಿಧ ಸಂಘಗಳ ಕಾರ್ಯದರ್ಶಿಗಳಿಗೆ ಕಡತಗಳನ್ನು ಹಸ್ತಾಂತರಿಸಿದರು. ದಿಗಂಬರ ಜೈನ ವಿದ್ಯಾವರ್ಧಕ ಸಂಘದ ಸದಸ್ಯ ಬಿ. ಜಯರಾಜ್, ಶಾಲಾ ಮುಖ್ಯೋಪಾದ್ಯಾಯ ಶಶಿಕಾಂತ್ ವೈ, ಶಾಲಾಭಿವೃದ್ಧಿ ಹಾಗೂ ಮೇಲುಸ್ತುವಾರಿ ಸಮಿತಿಯ ಅಧ್ಯಕ್ಷ ರವಿಪ್ರಸಾದ್ ಶೆಟ್ಟಿ, ತಾಯಂದಿರ ಸಮಿತಿಯ ಉಪಾಧ್ಯಕ್ಷೆ ನಂದಾ, ಶಾಲಾ ನೂತನ ನಾಯಕಿ ಕುಮಾರಿ ದೀಕ್ಷಾ ಆಚಾರ್ಯ ಉಪಸ್ಥಿತರಿದ್ದರು.
ಸಹಶಿಕ್ಷಕಿ ಮಂಜುಳಾ ನಿರೂಪಿಸಿದರು. ದೈಹಿಕ ಶಿಕ್ಷಣ ಶಿಕ್ಷಕ ಜಗದೀಶ್ ಅಜ್ರಿ ವಂದಿಸಿದರು.







