ಮೂಡುಬಿದಿರೆ: ವೃಕ್ಷಾರೋಪಣ

ಮೂಡುಬಿದಿರೆ, ಜೂ. 22: ಪ್ರಧಾನಿ ನರೇಂದ್ರ ಮೋದಿಯವರ ಕರೆಯಂತೆ ವೃಕ್ಷಾರೋಪಣ ಕಾರ್ಯಕ್ರಮವನ್ನು ಮೂಡುಬಿದಿರೆಯ ಜೈನ ಪೇಟೆಯಲ್ಲಿ ನಡೆಸಲಾಯಿತು.
ಪ್ರಸಿದ್ಧ ಸಾಕ್ಸೋಫೋನ್ ವಾದಕ, ಪರಿಸರ ಪ್ರೇಮಿ ಎಂ. ಎಸ್. ಗೋಪಾಲ ಕೃಷ್ಣ ಗಿಡ ನೆಡುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಈ ಸಂದರ್ಭ ಪುರಸಭಾ ಸದಸ್ಯ ಎಂ. ಬಾಹುಬಲಿ ಪ್ರಸಾದ್, ಬಿ.ಜೆ.ಪಿ ಮಹಿಳಾ ಮೋರ್ಚದ ಅಧ್ಯಕ್ಷೆ ವಿದ್ಯಾ. ಆರ್. ಗೌರಿ, ಪ್ರಧಾನ ಕಾರ್ಯದರ್ಶಿ ಜಯಶ್ರೀ ಎಸ್. ಶೆಟ್ಟಿ, ಮೂಡುಬಿದಿರೆ ಬಿ.ಜೆ.ಪಿ ನಗರ ಪ್ರಧಾನ ಕಾರ್ಯದರ್ಶಿ ಹರೀಶ್ ಎಂ. ಕೆ, ಗಣೇಶ್ ಪಡುಬಿದ್ರಿ, ಮಾಲತಿ, ಗೋಪಾಲ ಎಂ., ಅಶ್ವತ್ಥಮ್ ಆಚಾರ್ಯ, ಚಂದ್ರಹಾಸ್ ಆಚಾರ್ಯ, ಶ್ರೀಮತಿ ಗೀತಾ ಆಚಾರ್ಯ, ಮಮತಾ ಉಪಸ್ಥಿತರಿದ್ದರು.
Next Story





