ಟಾಗೂರ್ ನೋಬೆಲ್ ಪ್ರಶಸ್ತಿ ಕಳವು: ಪ.ಬಂಗಾಳ ಸರಕಾರಕ್ಕೆ ಪ್ರಕರಣ ಹಸ್ತಾಂತರಿಸಲು ಸಿಬಿಐ ನಿರಾಕರಣೆ

ಕೋಲ್ಕತಾ, ಜೂ. 22: 2004ರಲ್ಲಿ ಕಳವಾದ ರವೀಂದ್ರನಾಥ್ ಟಾಗೂರ್ ಅವರ ನೋಬೆಲ್ ಪ್ರಶಸ್ತಿಯ ಬಗ್ಗೆ ಮತ್ತೆ ಗದ್ದಲ ಆರಂಭವಾಗಿದ್ದು, ಈ ಪ್ರಕರಣವನ್ನು ಪಶ್ಚಿಮ ಬಂಗಾಳ ಸರಕಾರಕ್ಕೆ ಹಸ್ತಾಂತರಿಸಲು ಸಿಬಿಐ ನಿರಾಕರಿಸಿದೆ.
ಪ್ರಕರಣವನ್ನು ಹಸ್ತಾಂತರಿಸಲು ಸಿಬಿಐ ನಿರಾಕರಿಸುತ್ತಿದೆ ಎಂದು ಸಿಬಿಐಯನ್ನು ನಿಯಂತ್ರಿಸುತ್ತಿರುವ ಡಿಒಪಿಟಿ ರಾಜ್ಯ ಗೃಹ ಇಲಾಖೆಗೆ ತಿಳಿಸಿದೆ. ತನಿಖೆಗೆ ಸಂಬಂಧಿಸಿದ ದಾಖಲೆಗಳಿಗೆ ಸಿಬಿಐ ಪಾಲುದಾರನಾಗಲಾರದು ಎಂದು ಸರಕಾರಕ್ಕೆ ಡಿಒಪಿಟಿ ಮಾಹಿತಿ ನೀಡಿರುವುದಾಗಿ ರಾಜ್ಯ ಸರಕಾರದ ಅಧಿಕಾರಿಗಳು ತಿಳಿಸಿದ್ದಾರೆ.
Next Story





