ಮಂಗಳೂರು ಎನ್ ಎಂ ಪಿ ಟಿ ಯಲ್ಲಿ ಬೆಂಕಿ ಅವಘಡ

ಮಂಗಳೂರು, ಜೂ. 23: ಮಂಗಳೂರು ಎನ್ ಎಂ ಪಿ ಟಿ ಯಲ್ಲಿ ಇಂದು ಮುಂಜಾನೆ ಸುಮಾರು 4:20ಕ್ಕೆ ಬೆಂಕಿ ಅವಘಡ ಸಂಭವಿಸಿದೆ.
ಎನ್ ಎಂ ಪಿ ಟಿ ಯ ಒಳಗಿದ್ದ ಕ್ರೇನ್ ಗೆ ಬೆಂಕಿ ತಗಲಿ ಈ ಅವಘಡ ಸಂಭವಿಸಿದರುವುದಾಗಿ ತಿಳಿದುಬಂದಿದೆ.
ಹಡಗಿನಲ್ಲಿದ್ದ ಸಾಮಗ್ರಿಗಳನ್ನು ಕ್ರೇನ್ ಮೂಲಕ ಇಳಿಸುತ್ತಿದ್ದ ಸಂದರ್ಭ ಬೆಂಕಿ ಕಾಣಿಸಿಕೊಂಡಿರುವುದಾಗಿ ಮಾಹಿತಿ ದೊರಕಿದೆ. ಎಂಜಿನ್ ನಲ್ಲಿ ಶಾರ್ಟ್ ಸರ್ಕ್ಯೂಟ್ ಉಂಟಾದ ಪರಿಣಾಮ ಬೆಂಕಿ ಕಾಣಿಸಿಕೊಂಡಿದ್ದು, ಇದರಿಂದ ಕ್ರೇನ್ ಯಂತ್ರ ಭಾಗಕ್ಕೆ ಹಾನಿಯಾಗಿದೆ. ಘಟನೆಯಿಂದ ಸುಮಾರು ಒಂದು ಕೋಟಿ ರೂ. ಮೌಲ್ಯದ ನಷ್ಟ ಉಂಟಾಗಿರುವುದಾಗಿ ಮೂಲಗಳು ತಿಳಿಸಿವೆ.
ಘಟನೆಯ ಬಗ್ಗೆ ಮಾಹಿತಿ ಅರಿತ ಕದ್ರಿ ಅಗ್ನಿಶಾಮಕ ದಳದ 2 ವಾಹನ ಹಾಗೂ ಎನ್ ಎಂ ಪಿ ಟಿ ಯ ಎರಡು ವಾಹನಗಳು ಬೆಂಕಿ ನಂದಿಸುವಲ್ಲಿ ಯಶ್ವಸಿಯಾಯಿತೆಂದು ತಿಳಿದುಬಂದಿದೆ.
Next Story