Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಸುದ್ದಿಗಳು
  3. ಗಲ್ಫ್
  4. ಕತರ್‌ಗೆ 13 ಅಂಶಗಳ ಬೇಡಿಕೆ ಪಟ್ಟಿ

ಕತರ್‌ಗೆ 13 ಅಂಶಗಳ ಬೇಡಿಕೆ ಪಟ್ಟಿ

ಕೊಲ್ಲಿ ಬಿಕ್ಕಟ್ಟು ನಿವಾರಣೆಗೆ ಅರಬ್ ದೇಶಗಳ ಶರತ್ತುಗಳು

ವಾರ್ತಾಭಾರತಿವಾರ್ತಾಭಾರತಿ23 Jun 2017 7:51 PM IST
share
ಕತರ್‌ಗೆ 13 ಅಂಶಗಳ ಬೇಡಿಕೆ ಪಟ್ಟಿ

ಕುವೈತ್ ಸಿಟಿ, ಜೂ. 23: ಕೊಲ್ಲಿ ಬಿಕ್ಕಟ್ಟಿನ ಪರಿಹಾರಕ್ಕೆ ಸಂಬಂಧಿಸಿ, ಸೌದಿ ಅರೇಬಿಯ, ಬಹರೈನ್, ಯುನೈಟೆಡ್ ಅರಬ್ ಎಮಿರೇಟ್ಸ್ (ಯುಎಇ) ಮತ್ತು ಈಜಿಪ್ಟ್‌ಗಳು ಮುಂದಿಟ್ಟಿರುವ 13 ಅಂಶಗಳ ಬೇಡಿಕೆಯ ಪಟ್ಟಿಯನ್ನು ಮಧ್ಯಸ್ಥಿಕೆದಾರ ಕುವೈತ್ ಕತರ್‌ಗೆ ಸಲ್ಲಿಸಿದೆ.

ಕತರ್ ಭಯೋತ್ಪಾದನೆಗೆ ಬೆಂಬಲ ನೀಡುತ್ತಿದೆ ಎಂಬುದಾಗಿ ಆರೋಪಿಸಿ ಕೊಲ್ಲಿಯ ಈ ಅರಬ್ ದೇಶಗಳು ತಿಂಗಳ ಆದಿ ಭಾಗದಲ್ಲಿ ಕತರ್‌ನೊಂದಿಗಿನ ಎಲ್ಲ ರಾಜತಾಂತ್ರಿಕ ಸಂಬಂಧಗಳನ್ನು ಕಡಿದುಕೊಂಡಿರುವುದನ್ನು ಇಲ್ಲಿ ಸ್ಮರಿಸಬಹುದಾಗಿದೆ.

ಮುಸ್ಲಿಮ್ ಬ್ರದರ್‌ಹುಡ್, ಹಿಝ್ಬುಲ್ಲಾ, ಅಲ್-ಖಾಯಿದ ಮತ್ತು ಡೇಯಿಶ್ (ಐಸಿಸ್) ಮುಂತಾದ ಗುಂಪುಗಳೊಂದಿಗಿನ ಎಲ್ಲ ಸಂಪರ್ಕಗಳನ್ನು ಕತರ್ ಕಡಿದುಕೊಳ್ಳಬೇಕು ಎಂಬುದಾಗಿ ಕೊಲ್ಲಿ ದೇಶಗಳು ಕತರನ್ನು ಒತ್ತಾಯಿಸಿವೆ.

ಇರಾನ್‌ನೊಂದಿಗಿನ ರಾಜತಾಂತ್ರಿಕ ಸಂಬಂಧಗಳನ್ನು ಕತರ್ ಕಡಿದುಕೊಳ್ಳಬೇಕು ಹಾಗೂ ಇರಾನ್‌ನಲ್ಲಿರುವ ರಾಜತಾಂತ್ರಿಕ ಕಚೇರಿಗಳನ್ನು ಮುಚ್ಚಬೇಕು, ಇರಾನ್‌ನ ರೆವಲೂಶನರಿ ಗಾರ್ಡ್ಸ್‌ನ ಸದಸ್ಯರನ್ನು ಉಚ್ಚಾಟಿಸಬೇಕು ಮತ್ತು ಇರಾನ್‌ನೊಂದಿಗಿನ ಯಾವುದೇ ಜಂಟಿ ಸೇನಾ ಸಹಕಾರವನ್ನು ಕೈಬಿಡಬೇಕು ಎನ್ನುವುದು ಅರಬ್ ದೇಶಗಳ ಪ್ರಮುಖ ಬೇಡಿಕೆಯಾಗಿದೆ.

 ಅಲ್-ಜಝೀರ ಟಿವಿ ಚಾನೆಲ್ ಮತ್ತು ಅದಕ್ಕೆ ಸಂಬಂಧಿಸಿದ ಎಲ್ಲ ನಿಲಯಗಳನ್ನು ಮುಚ್ಚಬೇಕು ಎನ್ನುವುದು ಇನ್ನೊಂದು ಮಹತ್ವದ ಬೇಡಿಕೆಯಾಗಿದೆ.

 ಕತರ್‌ನಲ್ಲಿ ಇರುವ ಟರ್ಕೀ ಸೇನಾ ಉಪಸ್ಥಿತಿಯನ್ನು ತಕ್ಷಣ ರದ್ದುಪಡಿಸಬೇಕು ಹಾಗೂ ಕತರ್‌ನೊಳಗೆ ಟರ್ಕಿಯೊಂದಿಗಿನ ಎಲ್ಲ ಜಂಟಿ ಸೇನಾ ಸಹಕಾರವನ್ನು ಕೊನೆಗೊಳಿಸಬೇಕು ಎಂಬುದಾಗಿಯೂ ಅರಬ್ ದೇಶಗಳು ಒತ್ತಾಯಿಸಿವೆ.

ಸೇನಾ ನೆಲೆ ಮುಚ್ಚುವುದಿಲ್ಲ: ಟರ್ಕಿ

ಕತರ್‌ನಲ್ಲಿನ ತನ್ನ ಸೇನಾ ನೆಲೆಯನ್ನು ಮುಚ್ಚುವಂತೆ ನಾಲ್ಕು ಅರಬ್ ದೇಶಗಳು ನೀಡಿರುವ ಕರೆಯನ್ನು ಟರ್ಕಿ ತಿರಸ್ಕರಿಸಿದೆ. ಕೊಲ್ಲಿ ವಲಯದಲ್ಲಿ ಭದ್ರತೆಯನ್ನು ಖಾತರಿಪಡಿಸುವುದಕ್ಕಾಗಿ ನೆಲೆಯನ್ನು ಸ್ಥಾಪಿಸಲಾಗಿದೆ ಹಾಗೂ ಅದನ್ನು ಮುಚ್ಚುವ ಬೇಡಿಕೆಯು ಕತರ್ ಜೊತೆಗಿನ ತನ್ನ ಸಂಬಂಧದಲ್ಲಿ ಮಾಡಿರುವ ಹಸ್ತಕ್ಷೇಪವಾಗಿದೆ ಎಂದು ಅದು ಹೇಳಿದೆ.

ಕತರ್‌ನಲ್ಲಿನ ಸೇನಾ ನೆಲೆಯನ್ನು ಮುಚ್ಚುವಂತೆ ಮಾಡಿರುವ ಮನವಿಯನ್ನು ತಾನು ನೋಡಿಲ್ಲ ಎಂದು ಟರ್ಕಿಯ ರಕ್ಷಣಾ ಸಚಿವ ಫಿಕ್ರಿ ಇಸಿಕ್ ಟರ್ಕಿಯ ಸುದ್ದಿ ಚಾನೆಲ್ ಎನ್‌ಟಿವಿಗೆ ಹೇಳಿದರು. ಆದರೆ, ಈ ನೆಲೆಯ ಸ್ಥಾಪನೆಗೆ ಕಾರಣವಾದ ಕತರ್ ಜೊತೆಗಿನ 2014ರ ಒಪ್ಪಂದವನ್ನು ಮರುಪರಿಶೀಲನೆ ನಡೆಸುವ ಉದ್ದೇಶ ತನ್ನ ದೇಶಕ್ಕಿಲ್ಲ ಎಂದು ಅವರು ಸ್ಪಷ್ಟಪಡಿಸಿದರು.

 ಮಧ್ಯಪ್ರಾಚ್ಯ ಬಿಕ್ಕಟ್ಟು ನಿವಾರಣೆಯ ನಿಟ್ಟಿನಲ್ಲಿ ಸೌದಿ ಅರೇಬಿಯ, ಯುಎಇ, ಬಹರೈನ್ ಮತ್ತು ಈಜಿಪ್ಟ್ ದೇಶಗಳು ಕತರ್‌ಗೆ ಸಲ್ಲಿಸಿವೆ ಎಂದು ಹೇಳಲಾದ 13 ಅಂಶಗಳ ಬೇಡಿಕೆ ಪಟ್ಟಿಯ ಹಿನ್ನೆಲೆಯಲ್ಲಿ ಟರ್ಕಿ ರಕ್ಷಣಾ ಸಚಿವರು ಈ ಹೇಳಿಕೆ ನೀಡಿದ್ದಾರೆ.

ಕತರ್‌ನಲ್ಲಿರುವ ಟರ್ಕಿಯ ಸೇನಾ ನೆಲೆಯನ್ನು ಬರ್ಖಾಸ್ತುಗೊಳಿಸಬೇಕೆಂದು ಈ ದೇಶಗಳು ಕತರನ್ನು ಒತ್ತಾಯಿಸಿವೆ.

share
ವಾರ್ತಾಭಾರತಿ
ವಾರ್ತಾಭಾರತಿ
Next Story
X