ಮೊದಲ ಮಹಿಳಾ ಕಾರಾಗೃಹ ಉಪನೀರಿಕ್ಷಕರಾಗಿ ಡಿ.ರೂಪ ಅಧಿಕಾರ ಸ್ವೀಕಾರ
ಬೆಂಗಳೂರು, ಜೂ.23: ಕರ್ನಾಟಕ ರಾಜ್ಯ ಕಾರಾಗೃಹ ಇಲಾಖೆಯ ನೂತನ ಪೊಲೀಸ್ ಉಪನೀರಿಕ್ಷಕರಾಗಿ ಐಪಿಎಸ್ ಅಧಿಕಾರಿ ಡಿ. ರೂಪ ಅಧಿಕಾರ ಸ್ವೀಕರಿಸಿದರು. ಕಾರಾಗೃಹ ಇಲಾಖೆಗೆ ಮಹಿಳಾ ಉಪ ನಿರೀಕ್ಷಕರಾಗಿದ್ದು ಇದೇ ಮೊದಲು.
ಫ್ರೀಡಂ ಪಾರ್ಕ್ ಬಳಿ ಇರುವ ಕಾರಾಗೃಹ ಇಲಾಖೆ ಕಚೇರಿಯಲ್ಲಿ ಬೆಳಗ್ಗೆ ಅಧಿಕಾರ ಸ್ವೀಕರಿಸಿ ಮಾತನಾಡಿದ ಅವರು, ಕಾರಾಗೃಹ ಇಲಾಖೆಯಲ್ಲಿರುವ ಸಮಸ್ಯೆಗಳ ಬಗ್ಗೆ ಗಮನ ಹರಿಸಲಾಗುವುದು ಎಂದರು. ಅಲ್ಲದೆ, ಪರಪ್ಪನ ಅಗ್ರಹಾರ ಅತಿ ದೊಡ್ಡ ಜೈಲು. ಅಲ್ಲಿ ಸಾಕಷ್ಟು ಕಾನೂನು ಸುಧಾರಣೆಯ ಅಗತ್ಯವಿದೆ. ಮುಖ್ಯವಾಗಿ ಡ್ರಗ್ಸ್ ಹಾಗೂ ಮೊಬೈಲ್ ಬಳಕೆಗೆ ಕಡಿವಾಣ ಹಾಕುವ ಅಗತ್ಯವಿದೆ ಎಂದು ತಿಳಿಸಿದರು.
ಡಿ.ರೂಪ ಅವರು ಈ ಹಿಂದೆ ಸಿಐಡಿ ಸೈಬರ್ ಕ್ರೈಂ ವಿಭಾಗ ಹಾಗೂ ಸರಕಾರದ ಮಹತ್ವಾಕಾಂಕ್ಷೆಯ ಸಕಾಲ ಯೋಜನೆಯಲ್ಲೂ ಕಾರ್ಯನಿರ್ವಹಿಸಿದ್ದರು.
Next Story