ಕಲ್ಲಡ್ಕ : ಮುನೀರುಲ್ ಇಸ್ಲಾಂ ಮದ್ರಸ ಶೇ. 100 ಫಲಿತಾಂಶ
ವಿಟ್ಲ, ಜೂ. 23: ಸಮಸ್ತ ಕೇರಳ ಇಸ್ಲಾಂ ಮತ ವಿದ್ಯಾಭ್ಯಾಸ ಬೋರ್ಡ್ ವತಿಯಿಂದ ನಡೆಸಲಾದ 5,7 ಹಾಗೂ 10ನೇ ತರಗತಿಯ ಪಬ್ಲಿಕ್ ಪರೀಕ್ಷೆಯಲ್ಲಿ ಕಲ್ಲಡ್ಕದ ಮುನೀರುಲ್ ಇಸ್ಲಾಂ ಮದ್ರಸ ಶೇಕಡಾ 100 ಫಲಿತಾಂಶ ದಾಖಲಿಸಿದೆ.
5ನೇ ತರಗತಿಗೆ ಪರೀಕ್ಷೆಗೆ ಒಟ್ಟು 12 ಮಂದಿ ವಿದ್ಯಾರ್ಥಿಗಳು ಹಾಜರಾಗಿದ್ದು, ಈ ಪೈಕಿ ಹಾಜಿ ಅಬ್ದುಲ್ ಹಮೀದ್ ಗೋಲ್ಡನ್ ಮತ್ತು ಝೀನತ್ ದಂಪತಿಯ ಪುತ್ರ ಮುಹಮ್ಮದ್ ಇಸ್ಮಾಯಿಲ್ ಸಹಲ್ ಪ್ರಥಮ ಶ್ರೇಣಿಯಲ್ಲಿ ತೇರ್ಗಡೆ ಹೊಂದಿರುತ್ತಾನೆ.
ಸಯ್ಯಿದ್ ಇಶಾದ್, ಅಬ್ದುಲ್ ಮಾಹಿರ್, ಸಫಾ ಮರ್ಯಮ್, ಫಾತಿಮಾ ಸನಾ ದ್ವಿತೀಯ ಶ್ರೇಣಿಯಲ್ಲಿ ತೇರ್ಗಡೆಗೊಂಡಿದ್ದಾರೆ. 7ನೇ ತರಗತಿಗೆ 15 ಮಂದಿ ವಿದ್ಯಾರ್ಥಿಗಳು ಹಾಜರಾಗಿದ್ದು, ಈ ಪೈಕಿ ಇಸ್ಮಾಯಿಲ್ ಅಫ್ತಾಬ್, ಬೀಬಿ ಸುಹಾನಾ, ರಮ್ಸೀನಾ, ಬೀಫಾತಿಮಾ, ಅಝೀಮಾ, ಫಾತಿಮಾ ಅಸ್ನಾ, ಆಯಿಷಾ ಸಫ್‌ರೀನಾ, ಮರಿಯಂ ಅಫ್ರಾ ಹಾಗೂ ಫಿದಾ ನಹೀಮಾ ನೇರಳಕಟ್ಟೆ ಪ್ರಥಮ ಶ್ರೇಣಿಯಲ್ಲಿ ಹಾಗೂ ಅಬೂಬಕ್ಕರ್ ಶಾಹಿಲ್, ಮುಹಮ್ಮದ್ ಅಝ್ಮೆನ್, ಉಮ್ಮು ಹಫೀಫಾ ದ್ವಿತೀಯ ಶ್ರೇಣಿಯಲ್ಲಿ ತೇರ್ಗಡೆಗೊಂಡಿದ್ದಾರೆ.
10ನೇ ತರಗತಿಗೆ 12 ಮಂದಿ ವಿದ್ಯಾರ್ಥಿಗಳು ಹಾಜರಾಗಿದ್ದು, ಈ ಪೈಕಿ ಅಬೂಬಕ್ಕರ್ ಸಿದ್ದೀಕ್, ಅಮೀರುಲ್ ಮುಹ್‌ಮಿನೀನ್, ಯೂಸುಫ್ ನಜೀಬ್, ಝೈನುಲ್ ಆಬಿದ್ ದ್ವಿತೀಯ ಶೆ್ರೀಣಿಯಲ್ಲಿ ತೇರ್ಗಡೆ ಹೊಂದಿದ್ದಾರೆ.