Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ವಿಶೇಷ-ವರದಿಗಳು
  4. ಇಟ್ಟಿಗೆ ಒಡೆಯುವ ಅದೇ ಕೈಯ್ಯಿಂದ ನಾನು...

ಇಟ್ಟಿಗೆ ಒಡೆಯುವ ಅದೇ ಕೈಯ್ಯಿಂದ ನಾನು ಚೆನ್ನಾಗಿ ಬರೆಯಬಲ್ಲೆ : ಚಡ್ನಿ

ನನ್ನ ಕತೆ

ಜಿಎಂಬಿ ಆಕಾಶ್ಜಿಎಂಬಿ ಆಕಾಶ್24 Jun 2017 10:55 AM IST
share
ಇಟ್ಟಿಗೆ ಒಡೆಯುವ ಅದೇ ಕೈಯ್ಯಿಂದ ನಾನು ಚೆನ್ನಾಗಿ ಬರೆಯಬಲ್ಲೆ : ಚಡ್ನಿ

ಸುಮಾರು ಒಂದು ವರ್ಷಗಳ ಹಿಂದೆ ನಾನು ಕೆಲಸ ಮಾಡಲು ಆರಂಭಿಸಿದೆ. ನಾನು ಕೆಲಸ ಮಾಡಲು ಆರಂಭಿಸಿದ ಮೊದಲ ದಿನ ನನ್ನ ಅಕ್ಕನ 13ನೇ ಹುಟ್ಟುಹಬ್ಬವಾಗಿತ್ತು. ಆಕೆ ಒಂಬತ್ತನೇ ತರಗತಿಯಲ್ಲಿದ್ದರೆ ನಾನು ಐದನೇ ತರಗತಿಯಲ್ಲಿದ್ದೆ. ಕಳೆದ ವರ್ಷ ನನ್ನ ಅಕ್ಕ ಸೋನಿಯಾಳಿಗೆ ವಿವಾಹ ಪ್ರಸ್ತಾಪವೊಂದು ಬಂದಿತ್ತು. 

ಆಕೆಗೆ ದುಃಖವಾಗಿತ್ತು ಹಾಗೂ ತನ್ನ ಡೈರಿಯನ್ನು ಕೈಯ್ಯಲ್ಲಿ ಹಿಡಿದುಕೊಂಡು ಆಕೆ ತುಂಬಾ ಅತ್ತು ಬಿಟ್ಟಳು. ಅದನ್ನು ಆಕೆಯ ಕೈಯ್ಯಿಂದ ನಾನು ಸೆಳೆದಾಗ ಅದರೊಳಗೆ ಪ್ರಬಂಧವೊಂದು ಇತ್ತು ಅದರ ಹೆಸರು ‘‘ನನ್ನ ಕನಸು’’ ಆಗಿತ್ತು. ಆಕೆಯ ಕನಸು ವಿಶ್ವವಿದ್ಯಾಲಯಕ್ಕೆ ಹೋಗುವುದಾಗಿತ್ತು. ಆಕೆ ಅಳುತ್ತಾ ತನಗೆ ವಿವಾಹ ಮಾಡದಂತೆ ತಾಯಿಯಲ್ಲಿ ಅಲವತ್ತುಕೊಂಡಿದ್ದಳು.

ಆ ದಿನ ನಮ್ಮ ತಾಯಿ ನಮ್ಮ ಜೊತೆ ಮಾತನಾಡಲಿಲ್ಲ. ಆಕೆಯ ಕಣ್ಣಲ್ಲಿ ನೀರು ನೋಡಿದೆ. ಸಾಮಾನ್ಯವಾಗಿ ನನಗೆ ನಿದ್ದೆ ಮಾಡುವುದೆಂದರೆ ತುಂಬಾ ಇಷ್ಟ. ಆದರೆ ಆ ರಾತ್ರಿ ನನಗೆ ನಿದ್ದೆ ಸುಳಿಯಲಿಲ್ಲ. ನನ್ನ ಅಕ್ಕನನ್ನು ಹೇಗೆ ಬಚಾವ್ ಮಾಡುವುದು ಎಂದು ಯೋಚಿಸುತ್ತಿದ್ದೆ. ನನ್ನ ತಾಯಿ ಕೂಡ ನಿದ್ದೆ ಮಾಡಿರಲಿಲ್ಲವೆಂದು ನಾನು ನೋಡಿದೆ. ಆಕೆಯೊಂದಿಗೆ ನಾನು ಕೂಡ ಇಟ್ಟಿಗೆ ಒಡೆಯುವ ಕೆಲಸ ಮಾಡಿ ನಮ್ಮ ಶಿಕ್ಷಣಕ್ಕಾಗಿ ಸಂಪಾದಿಸಬಲ್ಲೆ ಎಂದು ತಾಯಿಗೆ ಹೇಳಿದೆ.

ಆಕೆ ತನ್ನ ಕೈಯ್ಯನ್ನು ತೋರಿಸಿ ನನಗೆ ಈ ಕೆಲಸ ಯಾವತ್ತೂ ಮಾಡಲು ಸಾಧ್ಯವಿಲ್ಲ ಎಂದಳು. ನಾನು ಮಾಡಬಲ್ಲೆ ಎಂದು ಆಕೆಗೆ ಹೇಳಿದೆ. ನಮಗಾಗಿ ನಮ್ಮ ತಾಯಿ ಕಳೆದ 10 ವರ್ಷಗಳಿಂದ ಪ್ರತಿ ದಿನ 300 ಇಟ್ಟಿಗೆಗಳನ್ನು ಒಡೆಯುತ್ತಿದ್ದಾಳೆ. ಹಾಗಿರುವಾಗ ನಾನೇಕೆ ನಮಗಾಗಿ ದಿನವೊಂದಕ್ಕೆ 100 ಇಟ್ಟಿಗೆಗಳನ್ನು ಒಡೆಯಬಾರದು ? ನನ್ನ ಅಕ್ಕನ ವಿವಾಹ ಪ್ರಸ್ತಾಪ ಮುರಿಯುವಂತೆ ಅಮ್ಮನನ್ನು ಒತ್ತಾಯಿಸಿದೆ. ನನ್ನ ಅಕ್ಕ ಮತ್ತೆ ಶಾಲೆಗೆ ಹೋಗಲಾರಂಭಿಸಿದಳು. ಈಗ ನಾನು ಪ್ರತಿ ವಾರ 600 ಟಕಾ ಸಂಪಾದಿಸಿ ಆಕೆಯ ಶಿಕ್ಷಣಕ್ಕಾಗಿ ನೀಡುತ್ತೇನೆ.

ಪ್ರತಿ ದಿನ ಶಾಲೆ ಮುಗಿಸಿ ಕೆಲಸಕ್ಕೆ ಬರುತ್ತೇನೆ. ಮನೆಗೆ ಹಿಂದಿರುಗಿದ ನಂತರ ಓದಲು ಕುಳಿತುಕೊಳ್ಳುತ್ತೇನೆ. ನಾನು ಕೆಲಸಕ್ಕೆ ಹೋಗುವುದನ್ನು ತಡೆಯಲು ನನ್ನ ಅಕ್ಕ ಹಲವಾರು ಬಾರಿ ಪ್ರಯತ್ನಿಸಿದ್ದಳು. ಬಹಳ ಬೇಗನೇ ಆಕೆ ಉದ್ಯೋಗಕ್ಕೆ ಸೇರಿದ ಮೇಲೆ ನಾನು ಶಾಲೆಗೆ ಮಾತ್ರ ಹೋಗುತ್ತೇನೆ ಎಂದು ಹೇಳಿದೆ. ಆದರೆ ಕೆಲವೊಮ್ಮೆ ಕೈಯ್ಯಲ್ಲಿ ಪೆನ್ನು ಹಿಡಿಯುವಾಗ ಬಹಳಷ್ಟು ನೋವಾಗುತ್ತದೆ. ಆದರೆ ಹೇಗೋ ಸುಧಾರಿಸಬಲ್ಲೆ. ಇಟ್ಟಿಗೆಗಳನ್ನು ಒಡೆಯುವ ಅದೇ ಕೈಯ್ಯಿಂದ ನಾನು ಚೆನ್ನಾಗಿ ಬರೆಯಬಲ್ಲೆ.

-ಚಡ್ನಿ (9)

share
ಜಿಎಂಬಿ ಆಕಾಶ್
ಜಿಎಂಬಿ ಆಕಾಶ್
Next Story
X