ಕೇಕ್ ರೂಪದಲ್ಲಿ ತಂದ ಚಿನ್ನ ವಶ
.jpg)
ನೆಡುಂಬಶ್ಶೇರಿ(ಕೇರಳ), ಜೂ. 24: ಭಾರತಕ್ಕೆ ಚಿನ್ನಕಳ್ಳಸಾಗಾಟ ಪುನಃ ಹೆಚ್ಚಳವಾಗುತ್ತಿದೆ. ನೋಟು ಅಮಾನ್ಯದಿಂದಾಗಿ ಚಿನ್ನ ಕಳ್ಳಸಾಗಾಟ ಕಡಿಮೆಯಾಗಿತ್ತು. ಆದರೆ ಎರಡು ವಾರಗಳಿಂದ ಅದು ಪುನಃ ಹೆಚ್ಚಳವಾಗಿದೆ. ಆದ್ದರಿಂದ ಅಬಕಾರಿ ಜಾಗೃತಿದಳ ವಿಭಾಗಗಳ ಜೊತೆಗೆ ಕಂದಾಯ ಇಲಾಖಾ ಜಾಗೃತಿ ದಳದ ನಿರ್ದೇಶಕರು ನಿಗಾವಿರಿಸುತ್ತಾರೆ. ಆರು ತಿಂಗಳಲ್ಲಿ ನೆಡುಂಬಶ್ಶೇರಿಯಲ್ಲಿ ಏಳುಕೋಟಿರೂ.ಗೂ ಹೆಚ್ಚು ಮೌಲ್ಯದ 23 ಕೆಜಿ ಗೂ ಅಧಿಕ ಚಿನ್ನ ಪತ್ತೆಯಾಗಿದೆ.
ಈ ಹಿಂದೆ ಶಾರ್ಜಾದಿಂದ 37 ಲಕ್ಷ ರೂಪಾಯಿಯ ಚಿನ್ನವನ್ನು ಕೇಕ್‌ನ ರೂಪದಲ್ಲಿ ಸಾಗಾಟ ನಡೆಸಲು ಯತ್ನಿಸಿದ ಕಲ್ಲಿಕೋಟೆಯ ಅಬ್ದುಲ್ ಸಲೀಮ್‌ನನ್ನು ಅಬಕಾರಿ ಜಾಗೃತಿದಳ ಬಂಧಿಸಿದೆ. 1,269 ಗ್ರಾಂ ಚಿನ್ನವನ್ನು ಕೇಕ್‌ನ ರೂಪದಲ್ಲಿ ಮಾಡಿ ಪ್ಲಾಸ್ಟಿಕ್ ಕವರ್‌ನಲ್ಲಿ ಹಾಕಿ ಆತ ಸೊಂಟದಲ್ಲಿ ಅಡಗಿಸಿಟ್ಟು ಆತ ಚಿನ್ನ ಕಳ್ಳಸಾಗಾಟಕ್ಕೆ ಯತ್ನಿಸಿದ್ದಾನೆ. ಈತ ಶಾರ್ಜಾದಲ್ಲಿ ಒಂದು ಅಂಗಡಿಯಲ್ಲಿ ಕೆಲಸಗಾರನಾಗಿದ್ದಾನೆ ಎಂದು ತಿಳಿಸಿದ್ದಾನೆ. ಆದರೆ ಆಗಾಗ ಪ್ರಯಾಣ ಮಾಡುತ್ತಿರುವ ಈತ ಕಳ್ಳಸಾಗಾಟದ ದಲ್ಲಾಳಿ ಎಂದು ಪೊಲೀಸರು ಶಂಕಿಸಿದ್ದಾರೆ.





