ರಾಝಿ ಚಿತ್ರದಲ್ಲಿ ಆಲಿಯಾ ಭಟ್ ಕಾಶ್ಮೀರ ಹುಡುಗಿ

ಗುಳಿಕೆನ್ನೆಯ ಹುಡುಗಿ ಆಲಿಯಾ ಭಟ್ ಸದ್ಯಕ್ಕೆ ಬಾಲಿವುಡ್ ನಲ್ಲಿ ಭಾರಿ ಬೇಡಿಕೆ ನಟಿಯರ ಸಾಲಿನಲ್ಲಿ ಇದ್ದಾರೆ. ಉಡ್ತಾ ಪಂಜಾಬ್ ಚಿತ್ರದಲ್ಲಿ ಡಿ ಗ್ಲಾಮರ್ ಆಗಿ ಮಿಂಚಿದ್ದ ಈ ಚೆಲುವೆಗೆ ಇದೀಗ ಮತ್ತೊಂದು ಚಾಲೆಂಜಿಂಗ್ ಪಾತ್ರ ಅರಸಿಕೊಂಡು ಬಂದಿದೆ. ಮೇಘನ್ ಗುಜ್ಜಾರ್ ಅವರ ಮುಂದಿನ ಚಿತ್ರ ರಾಝಿಯಲ್ಲಿ ಆಲಿಯ ನಟಿಸಲಿದ್ದಾರೆ.
ಚಿತ್ರದಲ್ಲಿ ಪಾಕ್ ಆರ್ಮಿ ಅಧಿಕಾರಿಯನ್ನು ಮದುವೆಯಾಗುವ ಕಾಶ್ಮೀರಿ ಹುಡುಗಿಯಾಗಿ ಆಲಿಯಾ ಕಾಣಿಸಿಕೊಳ್ಳಲಿದ್ದಾರೆ. ಹರಿಂದರ್ ಸಿಖ್ ಅವರ ಕಾಂದಬರಿಯಾಧರಿತ ಕಥೆಯನ್ನು ಹೊಂದಿರುವ ರಾಝಿಯಲ್ಲಿ ಆಲಿಯಾಗೆ ಜೊತೆಯಾಗಿ ವಿಕ್ಕಿ ಕೌಶಲ್ ನಟಿಸಲಿದ್ದಾರೆ.
ಜಂಗ್ಲೀ ಪಿಕ್ಟರ್ಸ್ ಮತ್ತು ಧರ್ಮ್ ಪ್ರೊಡಕ್ಷನ್ಸ್ ಅಡಿಯಲ್ಲಿ ಚಿತ್ರ ನಿರ್ಮಾಣವಾಗಲಿದ್ದು, ಈ ಬಗ್ಗೆ ಈಗಾಗಲೇ ಖಚಿತಪಡಿಸಿರುವ ಕರಣ್ ಜೋಹರ್, ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದಾರೆ. ರಾಝಿ ಚಿತ್ರ ಶೀಘ್ರವೇ ಆರಂಭವಾಗಲಿದ್ದು, ಆಲಿಯಾ ಹಾಗೂ ವಿಕ್ಕಿ ಕೌಶಾ ಚಿತ್ರದಲ್ಲಿ ಅಭಿನಯಿಸಿದ್ದಾರೆ, ಜಂಗ್ಲೀ ಪಿಕ್ಚರ್ಸ್ ಮತ್ತು ಧರ್ಮ್ಪ್ರೊಡಕ್ಷನ್ಸ್ ಚಿತ್ರ ನಿರ್ಮಾಣ ಮಾಡುತ್ತಿದೆ ಎಂದು ಸಂತಸ ಹಂಚಿಕೊಂಡಿದ್ದಾರೆ.
70ರ ದಶಕದ ಕಥಾವಸ್ತುವನ್ನು ಹೊಂದಿರುವ ಚಿತ್ರದ ಶೂಟಿಂಗ್ ಗಾಗಿ ಕೆಲವೊಂದು ರಿಯಲ್ ಲೋಕೇಷನ್ ಗಳನ್ನು ಹುಡುಕಾಡುತ್ತಿರುವುದಾಗಿ ಹೇಳಿಕೊಂಡಿರುವ ಕರಣ್, ಚಿತ್ರದ ಹೋಮ್ ವರ್ಕ್ ಈಗಾಗಲೇ ಆರಂಭವಾಗಿದೆ ಎಂಬ ಸುಳಿವು ನೀಡಿದ್ದಾರೆ.
ಪಾಕಿಸ್ತಾನಿ ಆರ್ಮಿ ಆಫೀಸರ್ ಅನ್ನು ಮದುವೆಯಾದ ಒಬ್ಬ ಕಾಶ್ಮೀರಿ ಹುಡುಗಿಯ ಸ್ಥಿತಿ ಹೇಗಿರುತ್ತದೆ ಅವಳು ಎದುರಿಸುವ ಕಷ್ಟಗಳು, ಚಾಲೆಂಜ್ ಗಳ ಕುರಿತಂತೆ ಚಿತ್ರದಲ್ಲಿ ಹೆಚ್ಚಿನ ಫೋಕಸ್ ಮಾಡಲಾಗಿದ್ದು , ಪಾಕ್ ಅಧಿಕಾರಿ ಹೇಳುವ ರಹಸ್ಯಗಳನ್ನು ಆಕೆ ಬಹಿರಂಗಪಡಿಸುವುದರ ಮೂಲಕ ಭಾರತೀಯ ಸೇನೆಗೆ 1971ರ ಯುದ್ಧ ಸಂದರ್ಭದಲ್ಲಿ ಸಹಾಯ ಮಾಡುವ ರೀತಿಯನ್ನು ಚಿತ್ರದಲ್ಲಿ ಮನಮುಟ್ಟುವಂತೆ ಚಿತ್ರಸಲಿದ್ದೇವೆ ಎಂದು ಕರಣ್ ಹೇಳಿಕೊಂಡಿದ್ದಾರೆ.







