ಇಂದು ಉಡುಪಿ ಶ್ರೀಕೃಷ್ಣ ಮಠದಲ್ಲಿ ಇಫ್ತಾರ್ ಕೂಟ

ಉಡುಪಿ, ಜೂ.24: ಉಡುಪಿ ಶ್ರೀಕೃಷ್ಣ ಮಠ ಪರ್ಯಾಯ ಪೇಜಾವರ ಮಠದ ವತಿಯಿಂದ ಇಂದು ಸಂಜೆ 6:30ಕ್ಕೆ ಉಡುಪಿ ಶ್ರೀಕೃಷ್ಣ ಮಠದಲ್ಲಿ ಇಫ್ತಾರ್ ಕೂಟವನ್ನು ಆಯೋಜಿಸಲಾಗಿದೆ.
ಪರ್ಯಾಯ ಪೇಜಾವರ ಮಠಾಧೀಶ ಶ್ರೀವಿಶ್ವೇಶ ತೀರ್ಥ ಸ್ವಾಮೀಜಿಯ ಇಚ್ಛೆಯಂತೆ ಈ ಇಫ್ತಾರ್ ಕೂಟವನ್ನು ಮಠದ ಅನ್ನಬ್ರಹ್ಮ ಹಾಲ್‌ನಲ್ಲಿ ಹಮ್ಮಿ ಕೊಳ್ಳಲಾಗಿದೆ. ಇದರಲ್ಲಿ ಪೇಜಾವರ ಸ್ವಾಮೀಜಿ ಕೂಡ ಭಾಗವಹಿಸಲಿದ್ದಾರೆ.
ಇಫ್ತಾರ್ ಬಳಿಕ ಅಲ್ಲೇ ನಮಾಝ್ ನಿರ್ವಹಿಸುವಂತೆ ಸ್ವಾಮೀಜಿ ತಿಳಿಸಿದ್ದಾರೆ. ಇಫ್ತಾರ್‌ಗೆ ಫಲಾಹಾರ ಮತ್ತು ಉಪಹಾರದ ವ್ಯವಸ್ಥೆಯನ್ನು ಮಾಡಲಾಗಿದೆ. ಇದರಲ್ಲಿ ನೂರಕ್ಕೂ ಅಧಿಕ ಹಿಂದೂ ಹಾಗೂ ಮುಸ್ಲಿಮರು ಭಾಗವಹಿಸಲಿರುವರು ಎಂದು ಕರವೇ ಜಿಲ್ಲಾಧ್ಯಕ್ಷ ಅನ್ಸಾರ್ ಅಹ್ಮದ್ ಪತ್ರಿಕೆಗೆ ತಿಳಿಸಿದ್ದಾರೆ.
Next Story





