ಉತ್ತರ ಪ್ರದೇಶ: ಅತ್ಯಾಚಾರ ಸಂತ್ರಸ್ತೆಯನ್ನೇ ಜೈಲಿಗಟ್ಟಿದ ಪೊಲೀಸರು!

ರಾಂಪುರ, ಜೂ.24: ತನ್ನ ಮೇಲೆ ಸಾಮೂಹಿಕ ಅತ್ಯಾಚಾರಗೈದವರ ಬಗ್ಗೆ ದೂರು ನೀಡಲು ಪೊಲೀಸ್ ಠಾಣೆಗೆ ತೆರಳಿದ್ದ ಮಹಿಳೆಗೆ “ತನ್ನೊಂದಿಗೆ ಸಹಕರಿಸುವಂತೆ” ಪೊಲೀಸ್ ಅಧಿಕಾರಿಯೇ ಹೇಳಿದ್ದ ಪ್ರಕರಣವೀಗ ತಿರುವು ಪಡೆದುಕೊಂಡಿದ್ದು, ಅತ್ಯಾಚಾರ ಸಂತ್ರಸ್ತೆಯನ್ನೇ “ವಂಚನೆ” ಆರೋಪದಲ್ಲಿ ಜೈಲಿಗಟ್ಟಲಾಗಿದೆ.
37 ವರ್ಷದ ಮಹಿಳೆ ಹಾಗೂ ಆಕೆಯ ಪ್ರಿಯಕರನನ್ನು ಜೈಲಿಗೆ ಕಳುಹಿಸಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ. ಪ್ರಕರಣದ ಆರೋಪಿಗಳನ್ನು ಬಂಧಿಸಬೇಕಾದರೆ ತನ್ನೊಂದಿಗೆ ಸಹಕರಿಸಬೇಕು ಎಂದು ತನಿಖಾಧಿಕಾರಿ ಹೇಳಿರುವುದಾಗಿ ಮಹಿಳೆ ರಾಂಪುರ ಪೊಲೀಸ್ ಅಧೀಕ್ಷಕರಿಗೆ ಸಿಡಿ ಕ್ಯಾಸೆಟ್ ಸಹಿತ ಸಾಕ್ಷಿ ಒದಗಿಸಿದ್ದರು.
ಇದುವರೆಗೂ ಫೋರೆನ್ಸಿಕ್ ಲ್ಯಾಬ್ ಗೆ ಸಿಡಿಯನ್ನು ಕಳುಹಿಸದ ಪೊಲೀಸರು ಕ್ಯಾಸೆಟ್ ನಲ್ಲಿರುವ ಧ್ವನಿ ಮಹಿಳೆಯ ಪ್ರಿಯಕರನದ್ದು. ಪೊಲೀಸ್ ಅಧಿಕಾರಿಯದ್ದಲ್ಲ ಎಂದು ಹೇಳಿದ್ದಾರೆ.
Next Story





