ಶಾಸಕ ದತ್ತ ಅವರಿಂದ 1 ಸಾವಿರ ಕಿ.ಮೀ. ಪಾದಯಾತ್ರೆಗೆ ಚಾಲನೆ

ಕಡೂರು, ಜೂ.24: ಕಡೂರು ವಿಧಾನಸಭಾ ಕ್ಷೇತ್ರದ 224 ಗ್ರಾಮಗಳಿಗೆ ಭೇಟಿ ನೀಡುವ ಉದ್ದೇಶದಿಂದ 1 ಸಾವಿರ ಕಿ.ಮೀ. ಪಾದಯಾತ್ರೆಗೆ ಜಿ.ಯರದಕೆರೆ ಗ್ರಾಮದ ಹಾಲೋಕುಳಿ ರಂಗನಾಥಸ್ವಾಮಿ ದೇವಾಲಯದಲ್ಲಿ ಪೂಜೆ ಸಲ್ಲಿಸುವ ಮೂಲಕ ಶಾಸಕ ವೈಎಸ್‌ವಿ ದತ್ತ ಚಾಲನೆ ನೀಡಿದರು.
ದೇವಾಲಯದ ಆವರಣದಲ್ಲಿ ಶಾಸಕ ವೈ.ಎಸ್.ವಿ.ದತ್ತ 64ನೇ ಜನ್ಮ ದಿನಾಚರಣೆ ಕಾರ್ಯವನ್ನು ಅವರ ಅಭಿಮಾನಿಗಳಿಂದ ಹಮ್ಮಿಕೊಳ್ಳಲಾಗಿತ್ತು. ಶಾಸಕರು ಕೇಕ್ ಕತ್ತರಿಸುವ ಮೂಲಕ ತಮ್ಮ ಹುಟ್ಟು ಹಬ್ಬವನ್ನು ಆಚರಿಸಿಕೊಂಡರು. ನಂತರ ಜೆಡಿಎಸ್ ಪಕ್ಷದ ಕಾರ್ಯಕರ್ತರ ಸಭೆಯಲ್ಲಿ ಶಾಸಕ ವೈಎಸ್‌ವಿ ದತ್ತ ಮಾತನಾಡಿ, 2006 ರಿಂದ ಕಡೂರು ಕ್ಷೇತ್ರದ ಅಭಿವೃದ್ದಿ ಉದ್ದೇಶಕ್ಕಾಗಿ ಹಲವು ಬಾರಿ ಪಾದಯಾತ್ರೆಗಳನ್ನು ಮಾಡಲಾಗಿದೆ. ಪಾದಯಾತ್ರೆಗಳಿಂದ ನಮ್ಮ ಉದ್ದೇಶಗಳು ಯಶಸ್ವಿಯಾಗಿವೆ. ತಾಲೂಕನ್ನು ಬರಪೀಡಿತ ಎಂಬ ಘೋಷಣೆಗಾಗಿ ಚೌಳಹಿರಿಯೂರಿನಿಂದ ಪಾದಯಾತ್ರೆ ನಡೆಸಲಾಗಿತ್ತು. ಕ್ಷೇತ್ರದಲ್ಲಿ ವಿದ್ಯುತ್ ಸಮಸ್ಯೆ ತಲೆದೋರಿದಾಗ ಕಡೂರು-ಚಿಕ್ಕಮಗಳೂರು ಪಾದಯಾತ್ರೆ ನಡೆಸಲಾಗಿತ್ತು ಎಂದರು.
ಈಗ 1 ಸಾವಿರ ಕಿ.ಮೀ ಪಾದಯಾತ್ರೆ ಹಮ್ಮಿಕೊಂಡಿರುವ ಉದ್ದೇಶ ಈಗಾಗಲೇ ಮುಂಗಾರು ಕೈಕೊಟ್ಟಿದೆ. ಮುಂದಿನ ದಿನಗಳಲ್ಲಿ ಕುಡಿಯುವ ನೀರಿಗೆ ಜಾನುವಾರುಗಳ ಮೇವಿಗೆ ಹಾಹಾಕಾರವಾಗಬಹುದು. ಸರ್ಕಾರ ಕೊಡುವ ಅನುದಾನ ಯಾವುದಕ್ಕೂ ಸಾಲದಾಗಿದ್ದು, ಈಗಾಗಲೇ ಬರಕ್ಕಾಗಿ ಕೊಳವೆಬಾಯಿ, ಪೈಪ್‌ಲೈನ್ ಅಳವಡಿಕೆ ಕಾರ್ಯ ನಡೆದಿದ್ದರು. ರೂ. 1.60 ಕೋಟಿ ಹಣ ಬಾಕಿ ಉಳಿದಿದೆ, ಸರ್ಕಾಕ ಅನುದಾನ ನೀಡಬಹುದು. ನೀರನ್ನು ತರುವುದು ಕಷ್ಟಕರ ಮಳೆಗಾಗಿ ಪ್ರಾರ್ಥಿಸಿ ಇಂದು ಬೆಳಗ್ಗೆ 7 ಮಸೀದಿ ಮತ್ತು ಚರ್ಚ್‌ಗಳಿಗೆ ಭೆಟಿ ನೀಡಿ ಪ್ರಾರ್ಥನೆ ಸಲ್ಲಿಸಲಾಗಿದೆ ಎಂದು ತಿಳಿಸಿದರು.
ಕ್ಷೇತ್ರದಲ್ಲಿ 49 ಜನ ರೈತರ ಆತ್ಮಹತ್ಯೆಗಳು ನಡೆದಿದೆ. ಭವಿಷ್ಯದಲ್ಲಿ ಇನ್ನಷ್ಟು ಭೀಕರತೆ ಕಾಡುವ ಮುನ್ಸೂಚನೆ ಇದೆ. ರೈತರಲ್ಲಿ ಆತ್ಮಸ್ಥರ್ಯ ತುಂಬಲು ಗ್ರಾಮಗಳ ಸಮಸ್ಯೆ ತಿಳಿಯಲು ಈಗಾಗಲೇ ಗ್ರಾಮಾಂತರ ಪ್ರದೇಶಗಳಲ್ಲಿ ನಡೆಯುತ್ತಿರುವ ಅಭಿವೃದ್ದಿ ಕಾರ್ಯಕ್ರಮಗಳನ್ನು ವೀಕ್ಷಿಸಲು ಈ ಪಾದಯಾತ್ರೆ ನಡೆಸಲಾಗುತ್ತಿದೆ. 49 ಗ್ರಾ.ಪಂ ಗಳ ಮುಖ್ಯ ಗ್ರಾಮಗಳಿಗೆ ಭೇಟಿ ನೀಡುವ ಮೂಲಕ ಶೆ.90 ಗ್ರಾಮಗಳ ವೀಕ್ಷಣೆ ಕಾರ್ಯ ನಡೆಯಲಿದೆ. ಸಮಸ್ಯೆಗಳಿಗೆ ಗ್ರಾಮಗಳಲ್ಲೇ ಕೂತು ಚರ್ಚಿಸಿ ಅಲ್ಲಿಯೇ ಪರಿಹಾರ ಕಂಡುಕೊಳ್ಳಲಾಗುವುದು ಎಂದು ಹೇಳಿದರು.
ಈ ವೇಳೆ ಜೆಡಿಎಸ್ ತಾಲೂಕು ಅಧ್ಯಕ್ಷ ಕೋಡಿಹಳ್ಳಿ ಮಹೇಶ್, ಭಂಡಾರಿಶ್ರೀನಿವಾಸ್, ಎಂ. ರಾಜಪ್ಪ, ವೈ.ಎಸ್. ರವಿಪ್ರಕಾಶ್, ಸೀಗೇಹಡ್ಲು ಹರೀಶ್, ಶೂದ್ರಶ್ರೀನಿವಾಸ್, ಎನ್.ಇಮಾಮ್, ಯಾಸಿನ್, ಅಬ್ಬು, ಶಂಕರಪ್ಪ, ಚೌಡಪ್ಪ ಉಪಸ್ಥಿತರಿದ್ದರು.







