ಮಹಾ ಸರಕಾರದಿಂದ 34,000 ಕೋಟಿ ರೂ. ಕೃಷಿ ಸಾಲ ಮನ್ನಾ

ಮಹಾರಾಷ್ಟ್ರ, ಜೂ.24: ಸುಮಾರು 34,000 ಕೋಟಿ ರೂ. ಕೃಷಿ ಸಾಲ ಮನ್ನಾ ಮಾಡಿ ಮಹಾರಾಷ್ಟ್ರ ಸರಕಾರ ಆದೇಶ ಹೊರಡಿಸಿದೆ. ರಾಜ್ಯ ಸಚಿವ ಸಂಪುಟದೊಂದಿಗೆ ನಡೆದ ದಿಢೀರ್ ಸಭೆಯ ಬಳಿಕ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಈ ಬಗ್ಗೆ ಘೋಷಿಸಿದರು.
“ಪ್ರತಿಯೊಬ್ಬ ರೈತನ 1.5 ಲಕ್ಷ ರೂ. ಸಾಲವನ್ನು ಮನ್ನಾ ಮಾಡಲು ನಾವು ನಿರ್ಧರಿಸಿದ್ದೇವೆ” ಫಡ್ನವೀಸ್ ಹೇಳಿದರು. ಇದರಿಂದಾಗಿ ಸುಮಾರು 40 ಲಕ್ಷ ರೈತರಿಗೆ ಸಹಕಾರಿಯಾಗಲಿದೆ. 2016ರ ಜೂನ್ ವರೆಗೆ ಪಡೆದುಕೊಂಡ ಸುಮಾರು 1.5 ಲಕ್ಷ ರೂ.ವರೆಗಿನ ಸಾಲ ಮನ್ನಾಗೊಳ್ಳಲಿದೆ.
Next Story





