ವಿಶ್ವ ಹಾಕಿ ಲೀಗ್ ಸೆಮಿಫೈನಲ್: ಪಾಕಿಸ್ತಾನವನ್ನು ಮಣಿಸಿದ ಭಾರತ

ಲಂಡನ್, ಜೂ.24: ವಿಶ್ವ ಹಾಕಿ ಲೀಗ್ ಸೆಮಿಫೈನಲ್ ಪಂದ್ಯದಲ್ಲಿ ಭಾರತ ಇಂದು ಪಾಕಿಸ್ತಾನ ವಿರುದ್ಧ 6-1 ಅಂತರದಲ್ಲಿ ಜಯ ಗಳಿಸಿದೆ. ಈ ಗೆಲುವಿನೊಂದಿಗೆ ಭಾರತ ರವಿವಾರ ಕೆನಡಾ ವಿರುದ್ಧ 5ರಿಂದ 6ನೆ ಸ್ಥಾನಕ್ಕಾಗಿ ಸೆಣಸಾಡಲಿದೆ.
ಗ್ರೂಪ್ ಹಂತದ ಮೊದಲ ಮೂರು ಪಂದ್ಯಗಳಲ್ಲಿ ಜಯ ಗಳಿಸಿದ್ದ ಭಾರತ ಗ್ರೂಪ್ ಹಂತದ ಕೊನೆಯ ಪಂದ್ಯದಲ್ಲಿ ಹಾಲೆಂಡ್ ವಿರುದ್ಧ 1-3 ಅಂತರದಲ್ಲಿ ಸೋಲು ಅನುಭವಿಸಿತ್ತು. ಪಾಕಿಸ್ತಾನ ವಿರುದ್ಧ ಗ್ರೂಪ್ ಹಂತದಲ್ಲಿ 7-1 ಅಂತರದಲ್ಲಿ ಜಯ ಗಳಿಸಿದ್ದ ಭಾರತ 5ರಿಂದ 8ರ ತನಕದ ಸ್ಥಾನಕ್ಕಾಗಿ ನಡೆದ ಪಂದ್ಯದಲ್ಲಿ ಮತ್ತೆ ಪಾಕಿಸ್ತಾನ ವಿರುದ್ಧ ಮೇಲುಗೈ ಸಾಧಿಸಿದೆ .ಕ್ವಾರ್ಟರ್ ಫೈನಲ್‌ನಲ್ಲಿ ಮಲೇಷ್ಯ ವಿರುದ್ಧ ಭಾರತ ಸೋತು ಮುಖಭಂಗ ಅನುಭವಿಸಿತ್ತು.
ಭಾರತದ ರಮಣದೀಪ್ ಸಿಂಗ್(8ನೆ, 28ನೆ ನಿಮಿಷ), ಆಕಾಶ್‌ದೀಪ್ ಸಿಂಗ್(12ನೆ ಮತ್ತು 27ನೆ ನಿ.), ತಲ್ವಿಂದರ್ (25ನೆ), ಹರ್ಮನ್‌ಪ್ರೀತ್ (36ನೆ ನಿ) ತಲಾ ಒಂದು ಗೋಲು ದಾಖಲಿಸಿದರು. ಪಾಕಿಸ್ತಾನ ತಂಡದ ಪರ ಅಯಾಝ್ ಅಹ್ಮದ್ (41ನೆ) ಏಕೈಕ ಗೋಲು ದಾಖಲಿಸಿದರು.
Next Story





