ಉಳ್ಳಾಲ: ಈದ್ ಕಿಟ್ ವಿತರಣೆ

ಉಳ್ಳಾಲ, ಜೂ. 24: ಎಸೆಸೆಫ್ ಉಳ್ಳಾಲ ಸೆಕ್ಟರ್ ವತಿಯಿಂದ ಈದ್ ಕಿಟ್ ವಿತರಣಾ ಕಾರ್ಯಕ್ರಮ ಉಳ್ಳಾಲ ಆಝಾದ್ ನಗರದ ಎಸೆಸೆಫ್ ಕಚೇರಿಯಲ್ಲಿ ನಡೆಯಿತು.
ಉಳ್ಳಾಲ ಎಸೆಸೆಫ್ ಡಿವಿಸನ್ ಅಧ್ಯಕ್ಷ ಮುನೀರ್ ಅಹ್ಮದ್ ಕಾಮಿಲ್ ಸಖಾಫಿ ಈದ್ ಕಿಟ್ ವಿತರಿಸಿದರು. ಬಳಿಕ ಮಾತನಾಡಿದ ಅವರು ಇಸ್ಲಾಮಿನ ನಿಯಮದಂತೆ ಖಡ್ಡಾಯವಾಗಿ ಝಕಾತನ್ನು ನೀಡ ಬೇಕಾದ ರೂಪದಲ್ಲಿ ನೀಡಿರುತ್ತಿದ್ದರೆ ನಮ್ಮ ಸಮುದಾಯದ ಬಡವರನ್ನು ಉತ್ತುಂಗಕ್ಕೆ ಏರಿಸಿ, ಸಮಾಜದ ಮುಖ್ಯವಾಹಿನಿಗೆ ತರಲು ಸಾದ್ಯವಿರುತ್ತಿತ್ತು ಎಂದರು.
ಎಸೆಸೆಫ್ ಉಳ್ಳಾಲ ಸೆಕ್ಟರ್ ಅಧ್ಯಕ್ಷ ಸಯ್ಯದ್ ಕುಬೈಬ್ ತಂಙಳ್, ಎಸೆಸೆಫ್ ಉಳ್ಳಾಲ ಸೆಕ್ಟರ್ ಉಸ್ತುವಾರಿ ತೌಸೀಫ್ ಸಅದಿ ಹರೇಕಳ, ಉಳ್ಳಾಲ ಎಸೆಸೆಫ್ ಡಿವಿಸನ್ ಕೋಶಾಧಿಕಾರಿ ಹಮೀದ್ ತಲಪಾಡಿ, ಎಸ್. ವೈ.ಎಸ್. ಉಳ್ಳಾಲ ಸೆಕ್ಟರ್ ಕಾರ್ಯದರ್ಶಿ ಹನೀಫ್ ಹಾಜಿ, ಮಾಧ್ಯಮ ಕಾರ್ಯದರ್ಶಿ ನವಾಝ್ ಸಖಾಫಿ, ಎಸೆಸೆಫ್ ಮೇಲಂಗಡಿ ಯುನಿಟ್ ಕಾರ್ಯದರ್ಶಿ ಜಮಾಲುದ್ದೀನ್ ಮುಸ್ಲಿಯಾರ್, ಸಿರಾಜ್ ಮುಸ್ಲಿಯಾರ್, ಎಸೆಸೆಫ್ ಮತ್ತು ಎಸ್.ವೈ.ಎಸ್ ಸಾಂತ್ವನ ವಿಭಾಗದ ಕಾರ್ಯದರ್ಶಿ ತಾಹೀರ್ ಹಾಜಿ, ಸಾದಾತ್ ಅಸೋಸಿಯೇಶನ್ ಸಂಯೋಜಕರಾದ ದಾವೂದ್ ತಂಙಳ್ ಉಪಸ್ಥಿತರಿದ್ದರು.
ಎಸೆಸೆಫ್ ಉಳ್ಳಾಲ ಸೆಕ್ಟರ್ ಜೊತೆ ಕಾರ್ಯದರ್ಶಿ ಮುಝಮ್ಮಿಲ್ ಕಾರ್ಯಕ್ರಮ ನಿರೂಪಿಸಿದರು. ಹಫೀರ್ ಬೊಟ್ಟು ವಂದಿಸಿದರು.





