ಮಧ್ಯಪ್ರದೇಶ: ಸಚಿವ ಮಿಶ್ರಾಗೆ 3 ವರ್ಷ ಚುನಾವಣೆ ನಿಷೇಧ

ಭೋಪಾಲ್, ಜೂ. 24: ವಿಧಾನ ಸಭಾ ಚುನಾವಣೆ-2008ರಲ್ಲಿ ಕಾಸಿಗಾಗಿ ಸುದ್ದಿ ಪ್ರಕಟಿಸಿದ ಮಧ್ಯಪ್ರದೇಶದ ಸಚಿವ ನಾರೋತ್ತಮ್ ಮಿಶ್ರಾ ಮುಂದಿನ ಮೂರು ವರ್ಷ ಚುನಾವಣೆಯಲ್ಲಿ ಸ್ಪರ್ಧಿಸದಂತೆ ಚುನಾವಣಾ ಆಯೋಗ ನಿಷೇಧ ಹೇರಿದೆ.
2008ರ ಚುನಾವಣೆಯಲ್ಲಿ ಸ್ಪರ್ಧಿಸಿದ ಬಿಎಸ್‌ಪಿ ಅಭ್ಯರ್ಥಿ ಹಾಗೂ ಈಗ ಕಾಂಗ್ರೆಸ್‌ನಲ್ಲಿರುವ ರಾಜೇಂದ್ರ ಭಾರತಿ ದೂರು ನೀಡಿದ ಹಿನ್ನೆಲೆಯಲ್ಲಿ ಚುನಾವಣಾ ಆಯೋಗ ಈ ನಿರ್ಧಾರ ತೆಗೆದುಕೊಂಡಿದೆ. ಚುನಾವಣಾ ಆಯೋಗದ ನಿರ್ಧಾರ ಪ್ರಶ್ನಿಸಿ ತಾನು ಉಚ್ಚ ನ್ಯಾಯಾಲಯದ ಮೊರೆ ಹೋಗುವುದಾಗಿ ಮಿಶ್ರಾ ತಿಳಿಸಿದ್ದಾರೆ.
ಮಾಧ್ಯಮಗಳಿಗೆ ಯಾವುದೇ ಹಣ ನೀಡಿಲ್ಲ ಎಂದು ತಾನು ಹೇಳಿದ್ದೇನೆ. ತನ್ನಿಂದ ಹಣ ತೆಗೆದುಕೊಂಡಿಲ್ಲ ಎಂದು ಮಾಧ್ಯಮ ಹೇಳಿದೆ. ಇದರ ಹೊರತಾಗಿಯೂ ಚುನಾವಣೆ ಆಯೋಗ ಸಾಧ್ಯತೆ ಹಾಗೂ ಕಲ್ಪನೆಯಲ್ಲಿ ಈ ನಿರ್ಧಾರ ತೆಗೆದುಕೊಂಡಿದೆ. ನಾವು ಉಚ್ಚ ನ್ಯಾಯಾಲಯಕ್ಕೆ ಮೊರೆ ಹೋಗಲಿದ್ದೇನೆ. ಮಿಶ್ರಾ ಅವರು ರಾಜ್ಯ ಸರಕಾರದಲ್ಲಿ ಎರಡನೇ ಸ್ಥಾನದಲ್ಲಿದ್ದಾರೆ. ಚುನಾವಣಾ ಆಯೋಗದ ಈ ನಿರ್ಧಾರ ರೈತರ ಆತ್ಮಹತ್ಯೆ ಹಾಗೂ ಬೆಳೆಗೆ ಬೆಂಬಲ ಬೆಲೆ ನೀಡುವಂತೆ ರೈತರು ನಡೆಸುತ್ತಿರುವ ಪ್ರತಿಭಟನೆ ಎದುರಿಸುತ್ತಿರುವ ಮುಖ್ಯಮಂತ್ರಿ ಚೌಹಾಣ್ ಸಿಂಗ್ ಅತೀ ದೊಡ್ಡ ಆಘಾತ ನೀಡಿದೆ







