ಜೂ.27ರಂದು ಜಿಎಸ್‌ಟಿ ಮತ್ತು ಚಲನಚಿತ್ರೋದ್ಯಮ ಒಂದು ವಿಶ್ಲೇಷಣೆ

ಬೆಂಗಳೂರು, ಜೂ.24: ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ, ವಾಣಿಜ್ಯ ತೆರಿಗೆ ಇಲಾಖೆ, ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಹಾಗೂ ಕರ್ನಾಟಕ ವಾಣಿಜ್ಯ ಮತ್ತು ಕೈಗಾರಿಕಾ ಮಹಾಸಂಸ್ಥೆ (ಎಫ್‌ಕೆಸಿಸಿಐ) ಇವರ ಸಂಯುಕ್ತಾಶ್ರಯದಲ್ಲಿ ಜಿಎಸ್‌ಟಿ ಮತ್ತು ಚಲನಚಿತ್ರೋದ್ಯಮ ಒಂದು ವಿಶ್ಲೇಷಣೆ ಎಂಬ ಕಾರ್ಯಕ್ರಮವನ್ನು ಜೂ.27ರಂದು ಬೆಳಗ್ಗೆ 10.30 ಗಂಟೆಗೆ ನಗರದ ಕುಮಾರ ಪಾರ್ಕ್ ರಸ್ತೆಯಲ್ಲಿರುವ ಗಾಂಧಿ ಭವನದ ಮಹಾದೇವ ದೇಸಾಯಿ ಸಭಾಂಗಣದಲ್ಲಿ ಹಮ್ಮಿಕೊಂಡಿದೆ.
ಈ ಸಮಾರಂಭದ ಅಧ್ಯಕ್ಷತೆಯನ್ನು ರಾಜ್ಯ ಚಲನಚಿತ್ರ ಅಕಾಡಮಿ ಅಧ್ಯಕ್ಷ ಎಸ್.ವಿ.ರಾಜೇಂದ್ರಸಿಂಗ್ ಬಾಬು ವಹಿಸಲಿದ್ದಾರೆ. ವಾರ್ತಾ ಇಲಾಖೆ ನಿರ್ದೇಶಕ ಎನ್.ಆರ್.ವಿಶುಕುಮಾರ್ ಪ್ರಾಸ್ತಾವಿಕ ಮಾತುಗಳನ್ನಾಡಲಿದ್ದಾರೆ.
ರಾಜ್ಯ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಸಾ.ರಾ.ಗೋವಿಂದು ‘ಚಿತ್ರೋದ್ಯಮದ ದೃಷ್ಠಿಯಲ್ಲಿ ಜಿಎಸ್‌ಟಿ’ ಕುರಿತು ಮಾತನಾಡಲಿದ್ದಾರೆ. ವಾಣಿಜ್ಯ ತೆರಿಗೆ ಇಲಾಖೆ ಜಂಟಿ ಆಯಕ್ತ ಕೆ.ಎಸ್.ಬಸವರಾಜ್, ಡಾ.ಬಿ.ವಿ.ಮುರಳಿಕೃಷ್ಣ, ಕೆ. ರಾಮನ್ ಹಾಗೂ ಲೆಕ್ಕಪರಿಶೋಧಕ ಹಾಗೂ ವಿಷಯ ತಜ್ಞ ವಿವೇಕ್‌ಮಲ್ಯ ಈ ವಿಶ್ಲೇಷಣೆಯಲ್ಲಿ ಪಾಲ್ಗೊಳ್ಳಲಿದ್ದಾರೆ.
ರಾಜ್ಯ ಚಲನಚಿತ್ರ ನಿರ್ಮಾಪಕರ ಸಂಘ, ರಾಜ್ಯ ಚಲನಚಿತ್ರ ನಿರ್ದೇಶಕರ ಸಂಘ ಹಾಗೂ ರಾಜ್ಯ ಚಲನಚಿತ್ರ ಕಲಾವಿದರ ಸಂಘಗಳು ಈ ವಿಶ್ಲೇಷಣೆಯಲ್ಲಿ ಪಾಲ್ಗೊಳ್ಳಲಿವೆ ಎಂದು ಪ್ರಕಟಣೆ ತಿಳಿಸಿದೆ.





