ಮಹಿಳಾ ವಿಶ್ವಕಪ್: 2 ಹೊಸ ವಿಶ್ವದಾಖಲೆ ಬರೆದ ಮಿಥಾಲಿ ರಾಜ್

ಕ್ರಿಕೆಟ್ ಲಂಡನ್, ಜೂ.24: ಭಾರತದ ಮಹಿಳಾ ಕ್ರಿಕೆಟ್ ತಂಡದ ನಾಯಕಿ ಮಿಥಾಲಿ ರಾಜ್ ಅವರು ಇಂಗ್ಲೆಂಡ್ ವಿರುದ್ಧದ ವಿಶ್ವಕಪ್‌ನ ಮೊದಲ ಪಂದ್ಯದಲ್ಲಿ ಎರಡು ಹೊಸ ದಾಖಲೆಗಳನ್ನು ನಿರ್ಮಿಸಿದ್ದಾರೆ.
ಮಿಥಾಲಿ ರಾಜ್ ಅವರು ಅರ್ಧಶತಕ ದಾಖಲಿಸುವ ಮೂಲಕ ಏಕದಿನ ಕ್ರಿಕೆಟ್‌ನಲ್ಲಿ ಸತತ ಏಳು ಅರ್ಧಶತಕ ದಾಖಲಿಸಿದ ಮೊದಲ ಮಹಿಳಾ ಕ್ರಿಕೆಟ್ ಪಟು ಎನಿಸಿಕೊಂಡರು. ಮಿಥಾಲಿ ರಾಜ್ ಕೇವಲ 56 ಎಸೆತಗಳಲ್ಲಿ ಅರ್ಧಶತಕ ದಾಖಲಿಸಿದರು. ಅವರು 84 ನಿಮಿಷಗಳ ಬ್ಯಾಟಿಂಗ್‌ನಲ್ಲಿ 73 ಎಸೆತಗಳನ್ನು ಎದುರಿಸಿದರು. 8 ಬೌಂಡರಿಗಳ ನೆರವಿನಿಂದ 71 ರನ್ ಗಳಿಸಿ ಔಟಾದರು.
ಮಿಥಾಲಿ ರಾಜ್ ಏಕದಿನ ಕ್ರಿಕೆಟ್‌ನಲ್ಲಿ ಅರ್ಧಶತಕಗಳ ಸಂಖ್ಯೆಯನ್ನು 47ಕ್ಕೆ ಏರಿಸುವ ಮೂಲಕ ಗರಿಷ್ಠ ಅರ್ಧಶತಕ ದಾಖಲಿಸಿದ ಕ್ರಿಕೆಟ್ ಆಟಗಾರ್ತಿಯಾಗಿ ಹೊಸ ದಾಖಲೆ ಬರೆದಿದ್ದಾರೆ.
ಮಿಥಾಲಿ ರಾಜ್ 178 ಏಕದಿನ ಪಂದ್ಯಗಳಲ್ಲಿ 5,852 ರನ್ ದಾಖಲಿಸಿದ್ದಾರೆ. ಇವುಗಳಲ್ಲಿ ಶತಕ 5 ಮತ್ತು ಅರ್ಧಶತಕ 47.
ಭಾರತ 281/3: ಭಾರತ ಆರಂಭಿಕ ಜೋಡಿ ಪೂನಮ್ ರಾವತ್(86), ಸ್ಮತಿ ಮಂಧಾನ(90), ಮಿಥಾಲಿ ರಾಜ್(71) ಮತ್ತು ಎಚ್.ಕೌರ್(24) ಇವರ ಉಪಯುಕ್ತ ಬ್ಯಾಟಿಂಗ್ ನೆರವಿನಿಂದ 50 ಓವರ್‌ಗಳಲ್ಲಿ 3 ವಿಕೆಟ್ ನಷ್ಟದಲ್ಲಿ 281 ರನ್ ಗಳಿಸಿದೆ.







