ರೈತರ ಪ್ರತಿಭಟನೆ:ಪೊಲೀಸರಿಂದ ದಾಂಧಲೆ

ಮುಂಬೈ, ಜು. 24: ಕಲ್ಯಾಣ್ ಸಮೀಪದ ನೇವಲಿ ಗ್ರಾಮದಲ್ಲಿ ಪೊಲೀಸರೊಂದಿಗೆ ರೈತರ ಘರ್ಷಣೆ ಸಂಭವಿಸಿದ ಒಂದು ದಿನದ ಬಳಿಕ ಇಲ್ಲಿನ ನಿವಾಸಿಗಳು, ಪೊಲೀಸ್ ಸಿಬಂದಿ ಗಸ್ತು ನಡೆಸುತ್ತಿದ್ದ ಸಂದರ್ಭ ನಮ್ಮ ವಾಹನಗಳನ್ನು ಜಖಂಗೊಳಿಸಿದ್ದಾರೆ ಹಾಗೂ ಮನೆಗಳ ಕಿಟಕಿ ಒಡೆದಿದ್ದಾರೆ ಎಂದು ದೂರಿದ್ದಾರೆ.
ಇಂತಹ ವದಂತಿಗಳನ್ನು ಕೆಲವು ಗ್ರಾಮ ನಿವಾಸಿಗಳು ಹಬ್ಬಿಸುತ್ತಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ. ಆದರೆ, ಶುಕ್ರವಾರ ಬೆಳಗ್ಗೆ ಪೊಲೀಸರು ನಡೆಸಿದ ದಾಂಧಲೆ ಸಿಸಿಟಿವಿ ಕೆಮರಾದಲ್ಲಿ ದಾಖಲಾಗಿದೆ. ಪೊಲೀಸರು ಸೊತ್ತು, ಬೈಕ್, ಕಾರುಗಳಿಗೆ ಹಾನಿ ಮಾಡಿದ್ದಾರೆ. ಇದರಿಂದ ನಮಗೆ ಮನೆಯಲ್ಲಿ ವಾಸಿಸಲು ಭಯವಾಗುತ್ತಿದೆ. ಅಂಗಡಿಗಳು ಮುಚ್ಚಿವೆ, ಮಕ್ಕಳು ಶಾಲೆಗೆ ತೆರಳುತ್ತಿಲ್ಲ ಎಂದು ಇಲ್ಲಿನ ನಿವಾಸಿಗಳು ಹೇಳಿದ್ದಾರೆ.
Next Story





