ಹಳೇಕೋಟೆ: ಸೌಹಾರ್ದ ಇಪ್ತಾರ್ ಕೂಟ ಕಾರ್ಯಕ್ರಮ

ಉಳ್ಳಾಲ, ಜೂ.24: ಉಳ್ಳಾಲ ಅಳೇಕಲ ನುಸ್ರತುಲ್ ಮಸಾಕೀನ್ ಚಾರಿಟೇಬಲ್ ಟ್ರಸ್ಟ್ ಇದರ ಆಶ್ರಯದಲ್ಲಿ ಪೊಸಕುರಲ್ ಬಳಗದ ಸಹಕಾರದಲ್ಲಿ ಸೌಹಾರ್ದ ಇಫ್ತಾರ್ ಕೂಟ ಅನುದಾನಿತ ಸಯ್ಯದ್ ಮದನಿ ಉರ್ದು ಹಿರಿಯ ಪ್ರಾಥಮಿಕ ಮತ್ತು ಪ್ರೌಢ ಶಾಲೆ ಹಳೆಕೋಟೆಯಲ್ಲಿ ನಡೆಯಿತು.
ಪೆರ್ಮನ್ನೂರು ಸಂತ ಸಬೆಸ್ಟಿಯನ್ ಚರ್ಚಿನ ಪ್ರಧಾನ ಧರ್ಮಗುರು ವಂದನೀಯ ಫಾದರ್ ಡಾ .ಜೆ.ಬಿ ಸಲ್ದಾನಾ ಮಾತನಾಡಿ ದೇವರನ್ನು ಪ್ರೀತಿ ಮಾಡುವವರು ತಮ್ಮ ಶರೀರವನ್ನು ದಂಡಿಸುವ ಮೂಲಕ ದೇವರಿಗೆ ಇನ್ನಷ್ಟು ಹತ್ತಿರವಾಗುತ್ತಾರೆ,ಉಪವಾಸ ಮಾಡಿ ತಮ್ಮ ಜೀವನ ಕೂಡ ಪರಿವರ್ತನೆ ಮಾಡಬೇಕು ಎಂದು ಸೌಹಾರ್ದ ಸಂದೇಶ ನೀಡಿದರು.
ಹರೇಕಳ ಶ್ರೀರಾಮಕೃಷ್ಣ ಪ್ರೌಢಶಾಲೆಯ ದೈಹಿಕ ಶಿಕ್ಷಕ ತ್ಯಾಗಂ ಹರೇಕಳ ಮಾತನಾಡಿ ಧರ್ಮ ಎಂಬುದು ಒಂದು ಜೀವನ ಪದ್ದತಿ,ಮಾರ್ಗದರ್ಶಕರು ಎಷ್ಟು ಜನ ಇದ್ದರೂ ಅದನ್ನು ಅನುಸರಿಸುವವರ ಸಂಖ್ಯೆ ಕಮ್ಮಿಯಾಗಿದೆ ಎಂದು ಹೇಳಿದರು.
ಜನಾಬ್ ಹಾಫಿಲ್ ಸಖಾಫಿ ಬೆಳ್ಮ ಮಾತನಾಡಿ ಮಕ್ಕಳು,ಯುವಕರು ಮಾದಕ ವ್ಯಸನಗಳಿಗೆ ಬಲಿಯಾಗದೆ ಧರ್ಮವನ್ನು ಅನುಸರಿಸಿ ನಡೆಯಬೇಕೆಂದು ತಿಳಿಸಿದರು.
ಉಸ್ತಾದ್ ಉಸ್ಮಾನ್ ಫಲಿಲಿ ದುಆ ನೆರವೇರಿಸಿದರು, ಉಳ್ಳಾಲ ಅಳೇಕಲ ನುಸ್ರತುಲ್ ಮಸಾಕೀನ್ ಚಾರಿಟೇಬಲ್ ಟ್ರಸ್ಟ್‌ಅಧ್ಯಕ್ಷ ತ್ವಾಹಾ ಹಾಜಿ ಅಧ್ಯಕ್ಷತೆ ವಹಿಸಿದ್ದರು.
ಉಳ್ಳಾಲ ಸಯ್ಯದ್ ಮದನಿ ದರ್ಗಾ ಅಧ್ಯಕ್ಷ ಅಬ್ದುಲ್ ರಶೀದ್ ಹಾಜಿ ,ಜಿಲ್ಲಾ ಧಾರ್ಮಿಕ ಪರಿಷತ್ ಸದಸ್ಯ ಕೃಷ್ಣ ಗಟ್ಟಿ, ನಗರಸಭೆ ಸದಸ್ಯ ಫಾರೂಕ್ ಉಳ್ಳಾಲ್, ಜಿಲ್ಲಾ ಪಂಚಾಯತ್ ಮಾಜಿ ಉಪಾಧ್ಯಕ್ಷ ಸತೀಶ್ ಕುಂಪಲ, ದೇರಳೆಕಟ್ಟೆ ವಿದ್ಯಾರತ್ನ ವಿದ್ಯಾ ಸಂಸ್ಥೆಯ ಅಧ್ಯಕ್ಷ ರವೀಂದ್ರ ಶೆಟ್ಟಿ ಉಳಿದೊಟ್ಟು,ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಯೋಜನಾಧಿಕಾರಿ ಉಮ್ಮರಬ್ಬ,ಸಂತ ಸಬೆಸ್ಟಿಯನ್ ಧರ್ಮ ಕೇಂದ್ರದ ಸಹಾಯಕ ಧರ್ಮಗುರು ವಂದನೀಯ ಫಾದರ್ ಸ್ಟಾನಿ ಪಿಂಟೋ,ವಂದನೀಯ ಫಾದರ್ ಲೈಜಿಲ್,ಸೋಮೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ವಿಶ್ವನಾಥ ಗಟ್ಟಿ ವಗ್ಗ, ಅಕ್ಷರ ಸಂತ ಹರೇಕಳ ಹಾಜಬ್ಬ, ವಿನ್ಸೆಂಟ್ ನಝ್ರತ್,ಹಳೆಕೋಟೆ ಅನುದಾನಿತ ಸಯ್ಯದ್ ಮದನಿ ಉರ್ದು ಹಿರಿಯ ಪ್ರಾಥಮಿಕ ಮತ್ತು ಪ್ರೌಢ ಶಾಲೆಯ ಆಡಳಿತ ಸಮಿತಿಯ ಯು.ಎಚ್.ಮೊಹಮ್ಮದ್, ಯು.ಎನ್.ಇಬ್ರಾಹಿಂ, ಇಸ್ಮಾಯಿಲ್ ಹಾಜಬ್ಬ, ಕೆ.ಎಮ್.ಮಹಮ್ಮದ್,,ಎನ್.ಕೆ.ಅಹ್ಮದ್,ಎಸ್.ಪಿ.ಸಿದ್ದೀಕ್,ಯು.ಪಿ.ಹಮೀದ್ ಉಪಸ್ಥಿತರಿದ್ದರು.
ಹಳೆಕೋಟೆ ಶಾಲೆ ಮುಖ್ಯ ಶಿಕ್ಷಕ ಕೆ.ಎಮ್.ಕೆ.ಮಂಜನಾಡಿ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು. ಪೊಸಕುರಲಿನ ಆಡಳಿತ ನಿರ್ದೇಶಕ ವಿದ್ಯಾಧರ್ ಶೆಟ್ಟಿ ಪ್ರಾಸ್ತವಿಕವಾಗಿ ಮಾತನಾಡಿದರು.







