ಪಾಕ್ ಸ್ಫೋಟಗಳಲ್ಲಿ ಮೃತರ ಸಂಖ್ಯೆ 63ಕ್ಕೆ

ಇಸ್ಲಾಮಾಬಾದ್, ಜೂ. 24: ಪಾಕಿಸ್ತಾನದ ಕ್ವೆಟ್ಟಾ ಮತ್ತು ಪರಚಿನಾರ್ ಪ್ರದೇಶಗಳಲ್ಲಿ ಶುಕ್ರವಾರ ನಾಗರಿಕರು ಮತ್ತು ಭದ್ರತಾ ಸಿಬ್ಬಂದಿಯನ್ನು ಗುರಿಯಾಗಿಸಿ ನಡೆಸಲಾದ ಸ್ಫೋಟಗಳಲ್ಲಿ ಮೃತಪಟ್ಟವರ ಸಂಖ್ಯೆ 63ಕ್ಕೇರಿದೆ.
ಪರಚಿನಾರ್‌ನಲ್ಲಿ ಸಂಭವಿಸಿದ ಅವಳಿ ಸ್ಫೋಟಗಳಲ್ಲಿ ಗಾಯಗೊಂಡ ಒಂಬತ್ತು ಮಂದಿ ಮೃತಪಟ್ಟಿದ್ದಾರೆ ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ.
ಸ್ಫೋಟಗಳಲ್ಲಿ ಗಾಯಗೊಂಡ 200ಕ್ಕೂ ಅಧಿಕ ಮಂದಿ ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
Next Story





