ಹರಿಣ ಪಡೆಗೆ ರೋಚಕ ಜಯ
ಇಂಗ್ಲೆಂಡ್ ವಿರುದ್ಧ ಎರಡನೆ ಟ್ವೆಂಟಿ-20 ಪಂದ್ಯ

ಟೌಂಟನ್, ಜೂ.24: ಇಲ್ಲಿ ನಡೆದ ಎರಡನೆ ಟ್ವೆಂಟಿ-20 ಪಂದ್ಯದಲ್ಲಿ ಇಂಗ್ಲೆಂಡ್ ವಿರುದ್ಧ ದಕ್ಷಿಣ ಆಫ್ರಿಕ 3 ರನ್‌ಗಳ ರೋಚಕ ಜಯ ದಾಖಲಿಸಿದೆ.
ಇದರೊಂದಿಗೆ ಮೂರು ಪಂದ್ಯಗಳಲ ಸರಣಿಯಲ್ಲಿ 1-1 ಸಮಬಲ ಸಾಧಿಸಿದೆ.
ಕೌಂಟಿ ಗ್ರೌಂಡ್‌ನಲ್ಲಿ ನಡೆದ ಪಂದ್ಯದಲ್ಲಿ ಗೆಲುವಿಗೆ 175 ರನ್‌ಗಳ ಸವಾಲನ್ನು ಪಡೆದ ಇಂಗ್ಲೆಂಡ್ ತಂಡ 20 ಓವರ್‌ಗಳಲ್ಲಿ 6 ವಿಕೆಟ್ ನಷ್ಟದಲ್ಲಿ 171 ರನ್ ಗಳಿಸಿತು.
ಒಂದು ಹಂತದಲ್ಲಿ ಇಂಗ್ಲೆಂಡ್ ಸ್ಥಿತಿ ಚೆನ್ನಾಗಿತ್ತು. 13 ಓವರ್‌ಗಳಲ್ಲಿ 1 ವಿಕೆಟ್ ನಷ್ಟದಲ್ಲಿ 124 ರನ್ ಗಳಿಸಿದ್ದ ಇಂಗ್ಲೆಂಡ್ ಬಳಿಕ 6.4 ಓವರ್‌ಗಳಳ್ಲಿ 43 ರನ್ ಸೇರಿಸುವಷ್ಟರಲ್ಲಿ ದಿಢೀರನೆ ಕುಸಿತಕ್ಕೊಳಗಾಯಿತು.
ಕೊನೆಯ ಓವರ್‌ನಲ್ಲಿ ಗೆಲುವಿಗೆ 12 ರನ್ ಗಳಿಸಬೇಕಿತ್ತು. ಆದರೆ 8 ರನ್ ಗಳಿಷಲಷ್ಟೇ ಶಕ್ತವಾಗಿದೆ.
2 ಓವರ್‌ಗಳಳ್ಲಿ 15 ರನ್ ಗಳಿಸುವಷ್ಟರಲ್ಲಿ ಇಂಗ್ಲೆಂಡ್ ಮೊದಲ ವಿಕೆಟ್ ಕಳೆದುಕೊಂಡಿತ್ತು. ತಂಡದ ಆರಂಭಿಕ ದಾಂಡಿಗ ಬಿಲ್ಲಿಂಗ್ಸ್ 3 ರನ್ ಗಳಿಸಿ ಔಟಾದರು. ಎರಡನೆ ವಿಕೆಟ್‌ಗೆ ಜೇಸನ್ ರಾಯ್ ಮತ್ತು ಬೈರ್‌ಸ್ಟೋವ್ 110 ರನ್‌ಗಳ ಜೊತೆಯಾಟ ನೀಡಿದರು.
ಬೈರಿಸ್ಟೋವ್ 3 ರನ್‌ಗಳಿಂದ ಅರ್ಧಶತಕ ವಂಚಿತಗೊಂಡರು, ಅವರು 53 ಎಸೆತಗಳಲ್ಲಿ 37 ಎಸೆತಗಳನ್ನು ಎದುರಿಸಿ 8 ಬೌಂಡರಿ ಮತ್ತು 1 ಸಿಕ್ಸರ್ ನೆರವಿನಿಂದ 47 ರನ್ ಗಳಿಸಿ ಔಟಾದರು.
ಜೇಸನ್ ರಾಯ್ ಅವರು ದಕ್ಷಿಣ ಆಫ್ರಿಕದ ಫೀಲ್ಡರ್‌ಗೆ ಫೀಲ್ಡಿಂಗ್‌ಗೆ ಅಡ್ಡಿಪಡಿಸಿದ ಆರೋಪದಲ್ಲಿ ಹೊರದಬ್ಬಲ್ಪಟ್ಟರು. ಅವರು ಪೆವಿಲಿಯನ್ ಸೇರುವ ಮೊದಲು 72 ನಿಮಿಷಗಳ ಬ್ಯಾಟಿಂಗ್‌ನಲ್ಲಿ 45 ಎಸೆತಗಳಲ್ಲಿ 9 ಬೌಂಡರಿ ಮತ್ತು 1 ಸಿಕ್ಸರ್ ನೆರವಿನಿಂದ 67 ರನ್ ಗಳಿಸಿದರು.
ಬಟ್ಲರ್ 10ರನ್, ಲಿವಿಂಗ್‌ಸ್ಟೋನ್ 16ರನ್, ಮೊರ್ಗನ್ ರನ್ ಗಳಿಸಿ ಔಟಾದರು. ಡಾವ್ಸಿನ್ ಔಟಾಗದೆ 7 ರನ್ ಗಳಿಸಿದರು.
ದಕ್ಷಿಣ ಆಫ್ರಿಕ 174/8: ಟಾಸ್ ಸೋತ ದಕ್ಷಿಣ ಆಫ್ರಿಕ ತಂಡ ನಿಗದಿತ 20 ಓವರ್‌ಗಳಲ್ಲಿ 8 ವಿಕೆಟ್ ನಷ್ಟದಲ್ಲಿ 174 ರನ್ ಗಳಿಸಿತ್ತು.
ಇಂಗ್ಲೆಂಡ್ ಸಂಘಟಿತ ದಾಳಿಗೆ ಸಿಲುಕಿದರೂ ದಕ್ಷಿಣ ಆಫ್ರಿಕ ಸ್ಪರ್ಧಾತ್ಮಕ ಮೊತ್ತ ದಾಖಲಿಸಿತು.
ಸ್ಮಟ್ಸ್ 45ರನ್, ನಾಯಕ ಎಬಿಡಿವಿಲಿಯರ್ಸ್ 46ರನ್, ಬೆಹರ್ದಿನ್ 32ರನ್, ಹೆಂಡ್ರಿಕ್ಸ್ 7ರನ್, ಮೊಸೆಹ್ಲೆ 15ರನ್, ಡೇವಿಡ್ ಮಿಲ್ಲರ್ 8ರನ್, ಕ್ರಿಸ್ ಮೊರಿಸ್ 12ರನ್ ಗಳಿಸಿದರು.
ಇಂಗ್ಲೆಂಡ್‌ನ ಕುರ್ರನ್ 33ಕ್ಕೆ 4 ವಿಕೆಟ್, ಪ್ಲೆಂಕೆಟ್ 36ಕ್ಕೆ 2 ವಿಕೆಟ್, ವಿಲ್ಲೈ , ಜೋರ್ಡನ್ ಮತ್ತು ಡಾವ್ಸನ್ ತಲಾ 1 ವಿಕೆಟ್ ಹಂಚಿಕೊಂಡರು.
ಸಂಕ್ಷಿಪ್ತ ಸ್ಕೋರ್ ವಿವರ
ದಕ್ಷಿಣ ಆಫ್ರಿಕ 20 ಓವರ್‌ಗಳಲ್ಲಿ 174/8( ಸ್ಮಟ್ಸ್ 45, ಡಿವಿಲಿಯರ್ಸ್ 46, ಬೆಹರ್ದಿನ್ 32; ಕುರ್ರನ್ 33ಕ್ಕೆ 3, ಪ್ಲಂಕೆಟ್ 36ಕ್ಕೆ 2).
ಇಂಗ್ಲೆಂಡ್ 20 ಓವರ್‌ಗಳಲ್ಲಿ 171/6(ರಾಯ್ 67, ಬೈರ್‌ಸ್ಟೋವ್ 47; ಮೊರೀಸ್ 18ಕ್ಕೆ 2).







