ವಿಂಡೀಸ್ ವಿರುದ್ಧದ ಮೊದಲ ಏಕದಿನ ಮಳೆಗಾಹುತಿ ನಾಳೆ ಎರಡನೆ ಏಕದಿನ ಪಂದ್ಯ

ಪೋರ್ಟ್ ಆಫ್ ಸ್ಪೈನ್ ,ಜೂ.25: ವೆಸ್ಟ್‌ಇಂಡಿಸ್ ವಿರುದ್ಧದ ಮೊದಲ ಏಕದಿನ ಪಂದ್ಯ ಮಳೆಗಾಹುತಿಯಾಗಿದೆ. ರವಿವಾರ ಎರಡನೆ ಏಕದಿನ ಪಂದ್ಯ ನಡೆಯಲಿದೆ.
ಎರಡನೆ ಏಕದಿನ ಪಂದ್ಯದಲ್ಲಿ ಆಲ್‌ರೌಂಡರ್ ಯುವರಾಜ್ ಸಿಂಗ್ ಸ್ಥಾನ ಕಳೆದುಕೊಳ್ಳುವ ಭೀತಿ ಎದುರಾಗಿದೆ.
ಮೊದಲ ಏಕದಿನ ಪಂದ್ಯದಲ್ಲಿ ಭಾರತ 39.2 ಓವರ್‌ಗಳಲ್ಲಿ 3 ವಿಕೆಟ್ ನಷ್ಟದಲ್ಲಿ 199 ರನ್ ಗಳಿಸುವಷ್ಟರಲ್ಲಿ ಮಳೆ ಕಾಣಿಸಿಕೊಂಡು ಆಟ ಸ್ಥಗಿತಗೊಂಡಿತ್ತು, ಆರಂಭಿಕ ದಾಂಡಿಗ ಶಿಖರ್ ಧವನ್ (87) ಮತ್ತು ಅಜಿಂಕ್ಯರಹಾನೆ 62 ರನ್ ಗಳಿಸಿ ಔಟಾಗಿದ್ದರು.
ಯುವರಾಜ್ ಸಿಂಗ್ ಫಾರ್ಮ್ ಕಳೆದುಕೊಂಡಿರುವುದು ನಾಯಕ ವಿರಾಟ್ ಕೊಹ್ಲಿಗೆ ಚಿಂತೆಗೀಡು ಮಾಡಿದೆ.
ಚಾಂಪಿಯನ್ಸ್ ಟ್ರೋಫಿಯಲ್ಲಿ ಯುವರಾಜ್ ಸಿಂಗ್ ಅವರು ಪಾಕಿಸ್ಥಾನ ವಿರುದ್ಧ ಅರ್ಧಶತಕ, ಶ್ರೀಲಂಕಾ ವಿರುದ್ಧ 7ರನ್, ದಕ್ಷಿಣ ಆಫ್ರಿಕ ವಿರುದ್ಧ ಔಟಾಗದೆ 23ರನ್, ಪಾಕಸ್ತಾನ ವಿರುದ್ಧ ಫೈನಲ್‌ನಲ್ಲಿ 22 ರನ್ ಮತ್ತು ವೆಸ್ಟ್‌ಇಂಡೀಸ್ ವಿರುದ್ಧದ ಮಳೆಗಾಹುತಿಯಾದ ಮೊದಲ ಪಂದ್ಯದಲ್ಲಿ 4 ರನ್ ಗಳಿಸಿ ಔಟಾಗಿದ್ದರು.
Next Story





