Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ದಿಲ್ಲಿ ದರ್ಬಾರ್

ದಿಲ್ಲಿ ದರ್ಬಾರ್

ವಾರ್ತಾಭಾರತಿವಾರ್ತಾಭಾರತಿ25 Jun 2017 12:05 PM IST
share
ದಿಲ್ಲಿ ದರ್ಬಾರ್

ಮೀರಾ ಕಂಡ ಕನಸು ಮತ್ತು ವಾಸ್ತವ

ಮುಂಬರುವ ರಾಷ್ಟ್ರಪತಿ ಚುನಾವಣೆಗೆ ಅಭ್ಯರ್ಥಿಯಾಗಿ ಮೀರಾ ಕುಮಾರ್ ಅವರನ್ನು ವಿಪಕ್ಷಗಳು ಆಯ್ಕೆ ಮಾಡಿವೆ. ಆದರೆ ಲೋಕಸಭೆಯ ಮಾಜಿ ಸ್ಪೀಕರ್ ಮೀರಾಗೆ ಆಡಳಿತ ಪಕ್ಷದ ಬೆಂಬಲ ಪಡೆದು ಒಮ್ಮತದ ಅಭ್ಯರ್ಥಿಯಾಗಬೇಕು ಎಂಬ ನಿರೀಕ್ಷೆಯಿತ್ತು ಎನ್ನಲಾಗಿದೆ. ಆಡಳಿತ ಪಕ್ಷ ಒಮ್ಮತದ ಅಭ್ಯರ್ಥಿಯಾಗಿ ತನ್ನನ್ನು ಆಯ್ಕೆ ಮಾಡಿದರೆ ತನ್ನ ಅಭ್ಯಂತರವಿಲ್ಲ ಎಂದು ಬಿಜೆಪಿಗೆ ಸಂದೇಶ ರವಾನಿಸುವ ಕಾರ್ಯವನ್ನು ತೆರೆಮರೆಯಲ್ಲಿ ಮೀರಾ ಕುಮಾರ್ ಮಾಡಿದ್ದರು ಎಂದು ಹೇಳಲಾಗುತ್ತಿದೆ.

ಆದರೆ ಮೀರಾ ಜಾಟವ್ ದಲಿತ ವರ್ಗದವರಾದ ಕಾರಣ ಬಿಜೆಪಿಯಲ್ಲಿ ಕೆಲವರಿಗೆ ವಿರೋಧವಿತ್ತು. ದಲಿತರಲ್ಲಿ ಒಂದು ವರ್ಗವಾಗಿರುವ ಜಾಟವರು ಉತ್ತರ ಪ್ರದೇಶದಲ್ಲಿ ಮಾಯಾವತಿಯ ಕಟ್ಟಾ ಬೆಂಬಲಿಗರು. ಜಾಟವ್ ದಲಿತರು ಉ.ಪ್ರದೇಶದಲ್ಲಿ ಬಿಜೆಪಿಗೆ ಮತ ನೀಡಿಲ್ಲ. ಈ ಹಿನ್ನೆಲೆಯಲ್ಲಿ ಜಾಟವ್ ದಲಿತರನ್ನು ಹೊರತುಪಡಿಸಿ, ತಮ್ಮತ್ತ ಈಗಾಗಲೇ ಒಲವು ಹೊಂದಿರುವ ದಲಿತರ ಮತಬ್ಯಾಂಕ್ ಗಟ್ಟಿಯಾಗಬೇಕಾದರೆ ರಾಮನಾಥ್ ಕೋವಿಂದ್ ಅವರೇ ಸೂಕ್ತ ಅಭ್ಯರ್ಥಿ ಎಂಬುದು ನರೇಂದ್ರ ಮೋದಿ-ಅಮಿತ್ ಶಾ ಯೋಜನೆಯಾಗಿತ್ತು. ಕೋವಿಂದ್ ಅವರನ್ನು ಅಭ್ಯರ್ಥಿ ಎಂದು ಎನ್‌ಡಿಎ ಘೋಷಿಸಿದಾಗ ಮೀರಾ ಕುಮಾರ್ ಅಸಮಾಧಾನಗೊಂಡಿದ್ದರು. ಆದರೆ ಈಗ ವಿಪಕ್ಷಗಳ ಅಭ್ಯರ್ಥಿಯಾಗಿ ಕಣಕ್ಕಿಳಿಯುವ ಅವಕಾಶ, ಅದು ಸೋಲುವ ಯುದ್ಧವಾಗುವ ಸಾಧ್ಯತೆಯಿದ್ದರೂ, ದೊರಕಿರುವುದರಿಂದ ಒಂದಿಷ್ಟು ಸಮಾಧಾನ ದೊರಕಿರಬಹುದು.

ಶರದ್ ಯಾದವ್ ‘ಮುಂದುವರಿದ’ ಪ್ರಯತ್ನ

ಜೆಡಿಯು ಮುಖಂಡ ಶರದ್ ಯಾದವ್ ಮತ್ತು ಪಕ್ಷದ ಮತ್ತೋರ್ವ ಮುಖಂಡ , ಬಿಹಾರದ ಮುಖ್ಯಮಂತ್ರಿ ನಿತೀಶ್ ಯಾದವ್ ಮಧ್ಯೆ ಈ ಹಿಂದಿನಿಂದಲೂ ಕೆಲವು ವಿಷಯಗಳಲ್ಲಿ ಭಿನ್ನಾಭಿಪ್ರಾಯವಿತ್ತು. ಮಹಿಳೆಯರಿಗೆ ಮೀಸಲಾತಿ ಅಥವಾ ನೋಟು ಅಮಾನ್ಯೀಕರಣದ ವಿಷಯವಿರಲಿ, ಶರದ್ ಯಾದವ್ ಇವೆರಡಕ್ಕೂ ವಿರೋಧ ಸೂಚಿಸಿದ್ದರೆ, ನಿತೀಶ್ ಈ ಎರಡೂ ವಿಷಯಗಳ ಬಗ್ಗೆ ಒಲವು ಹೊಂದಿದ್ದರು. ನಿತೀಶ್ ಕುಮಾರ್ ಎನ್‌ಡಿಎ ಅಭ್ಯರ್ಥಿ ರಾಮನಾಥ್ ಕೋವಿಂದ್‌ಗೆ ಬೆಂಬಲ ಸೂಚಿಸಿದ ಬಳಿಕವೂ ರಾಷ್ಟ್ರಪತಿ ಹುದ್ದೆಗೆ ವಿಪಕ್ಷಗಳು ಒಮ್ಮತದ ಅಭ್ಯರ್ಥಿಯನ್ನು ಕಣಕ್ಕಿಳಿಸಬೇಕು ಎಂದು ಶರದ್ ಯಾದವ್ ಪ್ರಯತ್ನ ಮುಂದುವರಿಸಿದ್ದರು. ಆದರೆ ನಿತೀಶ್ ಈ ಬಗ್ಗೆ ಶರದ್ ಯಾದವ್ ಜೊತೆ ಮಾತಾಡಿದಾಗ ಅವರು ತಮ್ಮ ಹಠ ಬಿಟ್ಟರು. ರಾಷ್ಟ್ರಪತಿ ಹುದ್ದೆಗೆ ಅಭ್ಯರ್ಥಿಗಳ ಸ್ಪರ್ಧೆಯಲ್ಲಿ ಕರಿಗುದುರೆ ಎನಿಸಿದ್ದ ಶರದ್ ಯಾದವ್, ವಿಪಕ್ಷಗಳನ್ನು ಒಗ್ಗೂಡಿಸುವ ಜಾದೂ ಈಗಲೂ ತಮ್ಮಲ್ಲಿದೆ ಎಂಬ ವಿಶ್ವಾಸ ಹೊಂದಿರುವಂತೆ ಕಾಣುತ್ತಿದೆ. ಅಲ್ಲದೆ, ನಿತೀಶ್ ನಾಯಕತ್ವದಲ್ಲಿ ಜೆಡಿಎಸ್ ವಿಪಕ್ಷಗಳ ಭಾಗವಾಗಿಯೇ ಉಳಿಯುತ್ತದೆ ಹಾಗೂ 2019ರ ಲೋಕಸಭಾ ಚುನಾವಣೆಯಲ್ಲಿ ಎನ್‌ಡಿಎ ಜೊತೆ ಹೋಗದು ಎಂದು ಹೇಳುತ್ತಿದ್ದಾರೆ. ಆದರೆ ಈ ಮಾತನ್ನು ದಿಲ್ಲಿಯ ಬಹುತೇಕ ಜನರು ಒಪ್ಪುವ ಸ್ಥಿತಿಯಲ್ಲಿಲ್ಲ. ನಿತೀಶ್ ಎನ್‌ಡಿಎ ಜೊತೆ ಹೋಗಲಿದ್ದಾರೆ ಎಂದು ಹೆಚ್ಚಿನವರು ಭಾವಿಸುತ್ತಿದ್ದಾರೆ. ಹಾಗಾದರೆ ಶರದ್ ಯಾದವ್ ಸ್ಥಿತಿ ಏನು ..ಎಂಬ ಪ್ರಶ್ನೆ ಉದ್ಭವಿಸುತ್ತದೆ.

ನೀರವ ವರ್ಷ

ಸಾಧಾರಣವಾಗಿ ಈ ಸಂದರ್ಭ ರಾಷ್ಟ್ರದ ರಾಜಧಾನಿಯಲ್ಲಿ ಇಫ್ತಾರ್ ಪಾರ್ಟಿಗಳ ಭರಾಟೆ ಕಾಣುತ್ತದೆ. ಆದರೆ ಈ ವರ್ಷ ಉಪವಾಸದ ತಿಂಗಳು ಇನ್ನೇನು ಮುಗಿಯುತ್ತಾ ಬಂದರೂ ರಾಷ್ಟ್ರಪತಿ, ಉಪರಾಷ್ಟ್ರಪತಿ, ವಿದೇಶ ವ್ಯವಹಾರ ಸಚಿವರು, ಲೋಕ ಜನಶಕ್ತಿ ಪಕ್ಷದ ಮುಖಂಡ ರಾಮ್‌ವಿಲಾಸ್ ಪಾಸ್ವಾನ್‌ರಂತಹ ರಾಜಕೀಯ ಮುಖಂಡರು ಇಫ್ತಾರ್ ಪಾರ್ಟಿಯ ಬಗ್ಗೆ ಚಕಾರವೆತ್ತಿಲ್ಲ. ಉತ್ತರ ಪ್ರದೇಶದಲ್ಲಿ ಈ ಹಿಂದಿನ ಬಿಜೆಪಿ ಸರಕಾರದ ಅವಧಿಯಲ್ಲಿ ಮುಖ್ಯಮಂತ್ರಿಗಳಾಗಿದ್ದ ಕಲ್ಯಾಣ್ ಸಿಂಗ್ ಅಥವಾ ರಾಜನಾಥ್ ಸಿಂಗ್ ಅವರಂತೆ ತಾನು ಲಕ್ನೋದಲ್ಲಿ ಇಫ್ತಾರ್ ಕೂಟ ಆಯೋಜಿಸುವುದಿಲ್ಲ ಎಂದು ಮುಖ್ಯಮಂತ್ರಿ ಆದಿತ್ಯನಾಥ್ ಈಗಾಗಲೇ ಘೋಷಿಸಿದ್ದಾರೆ. ಆದರೆ ಗುಜರಾತ್ ರಾಜ್ಯಪಾಲ ಒ.ಪಿ.ಕೊಹ್ಲಿ ಮಾತ್ರ ಇದಕ್ಕೆ ಅಪವಾದವಾಗಿದ್ದಾರೆ. ಮಧ್ಯಪ್ರದೇಶದ ರಾಜ್ಯಪಾಲರಾಗಿಯೂ ಕಾರ್ಯನಿರ್ವಹಿಸುವ ಕೊಹ್ಲಿ, ಭೋಪಾಲ್‌ನಲ್ಲಿ ಇತ್ತೀಚೆಗೆ ಇಫ್ತಾರ್ ಕೂಟವೊಂದನ್ನು ಆಯೋಜಿಸಿದ್ದರು.

ರಾಧಾಮೋಹನ್ ಸಿಂಗ್ ಪೇಚಾಟ 
ಮಧ್ಯಪ್ರದೇಶದ ಮಂದ್‌ಸೋರ್‌ನಲ್ಲಿ ಇತ್ತೀಚೆಗೆ ನಡೆದ ರೈತರ ಪ್ರತಿಭಟನೆಯ ಕಾವು ತೀಕ್ಷ್ಣವಾಗಿ ತಗಲಿದ್ದು ಕೇಂದ್ರ ಕೃಷಿ ಸಚಿವ ರಾಧಾಮೋಹನ್ ಸಿಂಗ್ ಅವರಿಗೆ. ಈ ಪ್ರಕರಣದಲ್ಲಿ ತಮ್ಮನ್ನು ಗುರಿಯಾಗಿಸಲಾಗಿದೆ ಎಂಬ ಭಾವನೆಯಲ್ಲಿದ್ದ ಸಿಂಗ್ ಅವರನ್ನು ಪ್ರಶ್ನಿಸಲು ಮಾಧ್ಯಮದವರು ಬೆಂಬಿಡದೆ ಹಿಂಬಾಲಿಸುತ್ತಿದ್ದರು. ಇವರಿಂದ ತಪ್ಪಿಸಿಕೊಳ್ಳುವ ಉದ್ದೇಶದಿಂದ, ಮೋದಿ ಸರಕಾರದ ತೃತೀಯ ವರ್ಷಾಚರಣೆಯ ಅಂಗವಾಗಿ ಹಮ್ಮಿಕೊಂಡಿದ್ದ ಪತ್ರಿಕಾಗೋಷ್ಠಿಯನ್ನು ಸಚಿವರು ರದ್ದುಗೊಳಿಸಿದರು ಎನ್ನಲಾಗಿದೆ. ಸದ್ದಿಲ್ಲದೆ ದಿಲ್ಲಿಯಿಂದ ತಮ್ಮ ಸ್ವಕ್ಷೇತ್ರಕ್ಕೆ ತೆರಳಿದ್ದ ರಾಧಾಮೋಹನ್ ಸಿಂಗ್, ಅಲ್ಲಿ ನಡೆದ ಯೋಗ ಶಿಬಿರದಲ್ಲಿ ಪಾಲ್ಗೊಂಡು ಪತ್ರಕರ್ತರ ಕಣ್ಣಿಗೆ ಬಿದ್ದರು.

ಚೀನಾದಲ್ಲಿ ನಡೆದ ‘ಬ್ರಿಕ್ಸ್’ ಸಮ್ಮೇಳನವನ್ನೂ ಇದೇ ಕಾರಣದಿಂದ ಸಚಿವರು ತಪ್ಪಿಸಿಕೊಂಡಿದ್ದರು. ಬಳಿಕ ‘ಪರಿಸ್ಥಿತಿಯನ್ನು ಸುಧಾರಿಸುವ’ ಪ್ರಯತ್ನವಾಗಿ ಕೃಷಿ ಭವನದ ಕಚೇರಿಯಲ್ಲಿ ಪತ್ರಕರ್ತರಿಗಾಗಿ ಔತಣಕೂಟ ಆಯೋಜಿಸಿದ್ದರು ಎನ್ನಲಾಗಿದೆ.

ಟ್ರಂಪ್‌ರನ್ನು ಭೇಟಿಯಾಗುವುದೆಂದರೆ...!

ಪ್ರಧಾನಿ ಮೋದಿ ಸೋಮವಾರ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್‌ರನ್ನು ಭೇಟಿಯಾಗುವ ಕಾರ್ಯಕ್ರಮವಿದೆ. ಅದಕ್ಕೂ ಮುನ್ನ ಭಾರತದ ವಿದೇಶಾಂಗ ವ್ಯವಹಾರ ಇಲಾಖೆಯ ಕಚೇರಿಯಲ್ಲಿ ಸಾಕಷ್ಟು ಪೂರ್ವ ತಯಾರಿ ನಡೆದಿದೆ ಎಂದು ಮೂಲಗಳು ತಿಳಿಸಿವೆ. ಇತರ ಜಾಗತಿಕ ನಾಯಕರನ್ನು ಭೇಟಿ ಮಾಡಿದಾಗ ಟ್ರಂಪ್ ಹೇಗೆ ವರ್ತಿಸಿದ್ದರು ಮತ್ತು ಟ್ರಂಪ್ ಭೇಟಿಗೂ ಮುನ್ನ ಯಾವ ರೀತಿ ಸಿದ್ಧರಾಗಿರಬೇಕು ಎಂಬ ಬಗ್ಗೆ ಮೋದಿಗೆ ವಿವರಿಸಿ ಹೇಳಲಾಯಿತು. ಟ್ರಂಪ್ ಭೇಟಿ ಸಂದರ್ಭ ಮಾಧ್ಯಮದ ಮಂದಿಯ ಗಮನ ಸೆಳೆಯುವಂತೆ ಮೋದಿಗೆ ಸೂಚಿಸಲಾಗಿದೆ. ಆದರೆ ಟ್ರಂಪ್ ಓರ್ವ ದುರಭಿಮಾನಿ ಆಗಿರುವ ಕಾರಣ ಅವರೊಡನೆ ತಾಳ್ಮೆಯಿಂದ ವರ್ತಿಸುವಂತೆ ಸೂಚಿಸಲಾಗಿದೆ. ಇದುವರೆಗೆ ಟ್ರಂಪ್ ಜೊತೆ ಮೋದಿ ಮೂರು ಬಾರಿ ಮಾತನಾಡಿರುವ ಕಾರಣ ಟ್ರಂಪ್ ನಡೆ-ನುಡಿಯ ಬಗ್ಗೆ ಸಾಕಷ್ಟು ತಿಳಿದುಕೊಂಡಿರಬಹುದು. ಆದರೂ ಇವರಿಬ್ಬರ ಮಾತುಕತೆ ಯಾವ ರೀತಿ ಸಾಗಲಿದೆ ಎಂಬುದರ ಬಗ್ಗೆ ಕುತೂಹಲ ಮೂಡಿದೆ 

share
ವಾರ್ತಾಭಾರತಿ
ವಾರ್ತಾಭಾರತಿ
Next Story
X