Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಕರಾವಳಿ
  3. ‘ಪೆರ್ನಾಳ್’ ಆಚರಣೆಯಲ್ಲಿ ಗೊಂದಲ

‘ಪೆರ್ನಾಳ್’ ಆಚರಣೆಯಲ್ಲಿ ಗೊಂದಲ

ಕೆಲವೆಡೆ ರವಿವಾರವೂ ಉಪವಾಸ ಮುಂದುವರಿಕೆ

ವಾರ್ತಾಭಾರತಿವಾರ್ತಾಭಾರತಿ25 Jun 2017 10:40 AM IST
share
‘ಪೆರ್ನಾಳ್’ ಆಚರಣೆಯಲ್ಲಿ ಗೊಂದಲ

ಮಂಗಳೂರು, ಜೂ.25: ದ.ಕ. ಜಿಲ್ಲೆಯ ಉಳ್ಳಾಲ ಸಹಿತ ಕೆಲವು ಕಡೆ ಸುನ್ನಿ ವಲಯದಲ್ಲಿ ರವಿವಾರ ‘ಪೆರ್ನಾಳ್’ ಆಚರಣೆಗೆ ಸಂಬಂಧಿಸಿ ಗೊಂದಲ ಸೃಷ್ಟಿಯಾಗಿದೆ.

ಭಟ್ಕಳದಲ್ಲಿ ಶನಿವಾರ ಅಸ್ತಮಿಸಿದ ರವಿವಾರ ರಾತ್ರಿ ಚಂದ್ರದರ್ಶನವಾದ ಹಿನ್ನೆಲೆಯಲ್ಲಿ ಮಂಗಳೂರು ಮತ್ತು ಉಡುಪಿ ಜಿಲ್ಲಾ ಖಾಝಿಯವರು ಪರಸ್ಪರ ಸಮಾಲೋಚನೆ ನಡೆಸಿ ರವಿವಾರ ಪೆರ್ನಾಳ್ ಆಚರಿಸಲು ಕರೆ ನೀಡಿದ್ದರು.

ಅದರಂತೆ ದ.ಕ. ಜಿಲ್ಲೆಯ ಬಹುತೇಕ ಮಸೀದಿಗಳಲ್ಲಿ ತಕ್ದೀರ್(ಈದ್ ಪ್ರಯುಕ್ತ) ಮೊಳಗಿಸಲ್ಪಟ್ಟಿತು. ಆದರೆ ಉಳ್ಳಾಲ ಖಾಝಿ ಕೂರತ್ ತಂಙಳ್‌ರವರ ಕೆಲವು ಬೆಂಬಲಿಗರು ಕೂರತ್ ತಂಙಳ್‌ರವರು ಪೆರ್ನಾಳ್ ಆಚರಣೆಗೆ ಸಂಬಂಧಿಸಿ ಯಾವುದೇ ಘೋಷಣೆ ಹೊರಡಿಸದ ಕಾರಣ ರವಿವಾರ ಪೆರ್ನಾಳ್ ಆಚರಿಸುವಂತಿಲ್ಲ ಎಂದು ಹಠ ಹಿಡಿದರು.
 
ಈ ಮಧ್ಯೆ, ವಾಟ್ಸಾಪ್‌ನಲ್ಲಿ ಕೂರತ್ ತಂಙಳ್‌ರದ್ದು ಎಂದು ಹೇಳಲಾದ ಧ್ವನಿ ಸಂದೇಶವೊಂದು ನಿನ್ನೆ ರಾತ್ರಿ ಹರಿದಾಡತೊಡಗಿತ್ತು. ಎಲ್ಲಿಯೂ ಚಂದ್ರದರ್ಶನದ ಮಾಹಿತಿ ಇಲ್ಲದ ಕಾರಣ ರವಿವಾರ ಪೆರ್ನಾಳ್ ಆಚರಿಸಲಾಗದು ಎಂದು ಆ ಧ್ವನಿಯಲ್ಲಿ ಹೇಳಲಾಗಿತ್ತು. ಇದು ಉಳ್ಳಾಲ ಕೇಂದ್ರ ಜುಮ್ಮಾ ಮಸೀದಿ ಸಹಿತ ಕೆಲವು ಕಡೆ ಗೊಂದಲಕ್ಕೆ ಎಡೆ ಮಾಡಿಕೊಟ್ಟಿತು.

ಕೆಲವರು ಉಪವಾಸ ಮುಂದುವರಿಸಲು ಪಟ್ಟುಹಿಡಿದರೆ ಮತ್ತೆ ಕೆಲವರು ಪೆರ್ನಾಳ್ ಆಚರಿಸಬೇಕೆಂದು ವಾದಿಸಿದರು. ಈ ವಿವಾದ ಉಳ್ಳಾಲ ಮತ್ತು ಆಸುಪಾಸಿನ ಕೆಲವು ಕಡೆ ತಡರಾತ್ರಿವರೆಗೂ ಮುಂದುವರಿಯಿತು. ಕೆಲವು ಕಡೆ ತಕ್ದೀರ್ ಮೊಳಗಿಸಿದ ಬಳಿಕ ರಂಝಾನ್‌ನ ತರಾವೀಹ್ ವಿಶೇಷ ನಮಾಝ್ ಮಾಡಲಾಯಿತು.

ಈತನ್ಮಧ್ಯೆ, ಆ ಬಳಿಕ ಮುಂಜಾನೆ ವೇಳೆಗೆ ರಾತ್ರಿ ತರಾವೀಹ್ ನಮಾಝ್ ನಿರ್ವಹಿಸಿದ ಮಸೀದಿಗಳಲ್ಲಿ ಪೆರ್ನಾಳ್ ಆಚರಣೆಗೆ ಸಂಬಂಧಿಸಿ ಮತ್ತೆ ತಕ್ದೀರ್ ಮೊಳಗಿತು.

ಉಳ್ಳಾಲಕ್ಕೆ ಕೂರತ್ ತಂಙಳ್ ಖಾಝಿಯಾಗಿರುವುದರಿಂದ ಅವರ ಮಾತೇ ಅಂತಿಮ ಎಂದು ಕೆಲವರು ವಾದ ಮುಂದುವರಿಸಿದರು. ಕೂರತ್ ತಂಙಳ್ ಕಳೆದೊಂದು ವರ್ಷದಿಂದ ಉಳ್ಳಾಲ ದರ್ಗಾ ಕಡೆಗೆ ಭೇಟಿ ನೀಡಿಲ್ಲ. ಶನಿವಾರ ಚಂದ್ರದರ್ಶನವಾದ ಸಂದರ್ಭವೂ ಅವರು ಯಾವುದೇ ಘೋಷಣೆ ಮಾಡಿಲ್ಲ. ಇದೀಗ ಪೆರ್ನಾಳ್ ಆಚರಣೆಗೆ ಸಂಬಂಧಿಸಿ ವಿವಾದ ಸೃಷ್ಟಿಸುವುದು ಸರಿಯಲ್ಲ ಎಂಬುದು ಇತರ ಕೆಲವರ ವಾದ ಮುಂದುವರಿಸಿದ್ದಾರೆ.

ಒಟ್ಟಿನಲ್ಲಿ ಕೆಲವು ಕಡೆ ರವಿವಾರ ಉಪವಾಸ ಮುಂದುವರಿದಿದ್ದರೆ, ದ.ಕ. ಜಿಲ್ಲೆಯ ಬಹುತೇಕ ಕಡೆಗಳಲ್ಲಿ ಪೆರ್ನಾಳ್ ಆಚರಿಸಲಾಗುತ್ತಿದೆ.

share
ವಾರ್ತಾಭಾರತಿ
ವಾರ್ತಾಭಾರತಿ
Next Story
X