ಕೆಪಿಸಿಸಿ ಅಧ್ಯಕ್ಷ ಡಾ. ಪರಮೇಶ್ವರ್ ಅವರಿಂದ ಈದುಲ್ ಫಿತ್ರ್ ಶುಭಾಷಯ

ಬೆಂಗಳೂರು, ಜೂ.25: ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಡಾ. ಜಿ. ಪರಮೇಶ್ವರ್ ಅವರು ಈದುಲ್ ಫಿತ್ರ್ ಪ್ರಯುಕ್ತ ಶುಭಾಶಯ ಹಂಚಿಕೊಂಡಿದ್ದಾರೆ.
"ಶಾಂತಿ ಮತ್ತು ಸಹೋದರ ಭಾವವನ್ನು ಸಂಭ್ರಮದದಿಂದ ವ್ಯಕ್ತಪಡಿಸುವ ರೀತಿಯಲ್ಲಿ ಆಚರಿಸಲಾಗುವ ರಂಜಾನ್ ಈದ್ ಉಲ್ಫಿತರ್ ಸಂದರ್ಭದಲ್ಲಿ ನಾಡಿನ ಎಲ್ಲಾ ಮುಸ್ಲಿಮ್ ರಿಗೆ ಶುಭಾಷಯ ತಿಳಿಯಬಯಸುತ್ತೇನೆ. ಎಲ್ಲ ಮತ, ಧರ್ಮಗಳ ಜನರು, ಒಗ್ಗಟ್ಟು ಮತ್ತು ಸೌಹಾರ್ದತೆಯಿಂದ ಒಂದೇ ಕುಟುಂಬದವರಂತೆ ಒಗ್ಗಟ್ಟಿನಿಂದ ಬದುಕಿ, ಅನೇಕತೆಯಲ್ಲಿ ಏಕತೆಯನ್ನು ಕಾಣುವ ಭಾರತದ ಭಾವಕ್ಯತೆ ಮತ್ತಷ್ಟು ಬಲಗೊಳ್ಳುವಂತಾಗಲೆಂದು ಈ ಸಂದರ್ಭದಲ್ಲಿ ಹೃತ್ಪೂರ್ವಕವಾಗಿ ಹಾರೈಸುತ್ತೇನೆ. ಜನರ ಬದುಕು ಹಸನಾಗಿ, ಸುಖ-ಶಾಂತಿ-ಸಮೃದ್ಧಿಯಿಂದ ಬದುಕುವಂತಾಗಲಿ ಎಂದು ಮತ್ತೊಮ್ಮೆ ಹಾರೈಸುತ್ತೇನೆ" ಎಂದು ಪ್ರಕಟನೆಯಲ್ಲಿ ತಿಳಿಸಿದ್ದಾರೆ.
Next Story





