ಬಂಟ್ವಾಳ: ಕಾರ್ -ಟ್ಯಾಂಕರ್ ಢಿಕ್ಕಿ, ಒಂದೇ ಕುಟುಂಬದ 6 ಜನರಿಗೆ ಗಾಯ

ಬಂಟ್ವಾಳ, ಜೂ. 25: ಟ್ಯಾಂಕರೊಂದು ಕಾರಿಗೆ ಢಿಕ್ಕಿ ಹೊಡೆದ ಘಟನೆ ತಾಲೂಕಿನ ಮಾಣಿ ಸಮೀಪದ ಬುಡೋಳಿಯಲ್ಲಿ ರವಿವಾರ ಸಂಭವಿಸಿದ್ದು, ಒಂದೇ ಕುಟುಂಬದ ಆರು ಮಂದಿ ಗಾಯಗೊಂಡಿದ್ದಾರೆ.
ಬಿ.ಸಿ.ರೋಡ್ ಶಾಂತಿಅಂಗಡಿ ನಿವಾಸಿಗಳಾದ ಮುಹಮ್ಮದ್, ಅವರ ಪತ್ನಿ ತಾಹಿರ, ಮಕ್ಕಳಾದ ಇರ್ಫಾನ್, ತಪ್ಸೀರ, ಇಸ್ಫಾಕ್ ಹಾಗೂ ಮುಹಮ್ಮದ್ ರವರ ತಂದೆ ಮೂಸಬ್ಬ ಗಾಯಾಳುಗಳು.
ಮುಹಮ್ಮದ್ ರವರ ಕುಟುಂಬ ಸಕಲೇಶಪುರದಲ್ಲಿ ವಾಸವಾಗಿದ್ದು ಈದುಲ್ ಫಿತ್ರ್ ಹಬ್ಬದ ಹಿನ್ನೆಲೆಯಲ್ಲಿ ಶಾಂತಿಅಂಗಡಿಗೆ ಕಾರಿನಲ್ಲಿ ಬರುತ್ತಿದ್ದಾಗ ಮಾಣಿಯಲ್ಲಿ ಬೆಂಗಳೂರಿಗೆ ಡೀಸೆಲ್ ಸಾಗಿಸುತ್ತಿದ್ದ ಟ್ಯಾಂಕರ್ ಢಿಕ್ಕಿ ಹೊಡೆದು ಅಪಘಾತ ಸಂಭವಿಸಿದೆ.
ಗಾಯಾಳುಗಳನ್ನು ತುಂಬೆ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದ್ದು ಸಣ್ಣ ಪುಟ್ಟ ಗಾಯಗಳೊಂದಿಗೆ ಅಪಾಯದಿಂದ ಪಾರಾಗಿದ್ದಾರೆ.
ಘಟನೆಯ ಬಳಿಕ ಟ್ಯಾಂಕರ್ ಚಾಲಕ ಮತ್ತು ಕ್ಲೀನರ್ ಪರಾರಿಯಾಗಿದ್ದಾರೆ.
Next Story





