ಟಾಲಿವುಡ್ ನಟ ರವಿತೇಜರ ಸಹೋದರ ರಸ್ತೆ ಅಪಘಾತಕ್ಕೆ ಬಲಿ

ಹೈದರಾಬಾದ್, ಜೂ.25: ಟಾಲಿವುಡ್‌ನ ಖ್ಯಾತ ನಟ ರವಿ ತೇಜರ ಸಹೋದರ ಭರತ್ ಚಲಾಯಿಸುತ್ತಿದ್ದ ಕಾರು ನಿಂತಿದ್ದ ಲಾರಿಗೆ ಹಿಂಬದಿಯಿಂದ ಡಿಕ್ಕಿ ಹೊಡೆದ ಪರಿಣಾಮ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.
ಭರತ್ ಅತಿಯಾದ ವೇಗದಿಂದ ಕಾರು ಚಲಾಯಿಸುತ್ತಿದ್ದರು ಎನ್ನಲಾಗಿದೆ. ನಿಂತಿದ್ದ ಲಾರಿಗೆ ಹಿಂಬದಿಯಿಂದ ಢಿಕ್ಕಿಯಾದ ರಭಸಕ್ಕೆ ಕಾರಿನ ಮುಂದಿನ ಭಾಗ ಸಂಪೂರ್ಣ ನಜ್ಜುಗುಜ್ಜಾಗಿದೆ.
ರಾತ್ರಿ 10 ಗಂಟೆ ಸುಮಾರಿಗೆ ಶಂಶಾಬಾದ್ ಏರ್‌ಪೋರ್ಟ್‌ನ ಸಮೀಪ ಈ ಘಟನೆ ನಡೆದಿದೆ. ಮೃತ ವ್ಯಕ್ತಿ ಭರತ್ ಶಂಶಾಬಾದ್‌ನಿಂದ ಗಚ್ಚಿಬೌಲಿಗೆ ತೆರಳುತ್ತಿದ್ದ ವೇಳೆ ಕಾರು ಅಪಘಾತಕ್ಕೀಡಾಗಿದೆ.
ತೆಲುಗಿನ ಖ್ಯಾತ ನಟ ರವಿತೇಜರ ಸಹೋದರ ಭರತ್ ಈ ಹಿಂದೆಯೂ ಅಜಾಗರೂಕತೆ ಕಾರು ಚಾಲನೆಯಲ್ಲಿ ಪ್ರಕರಣ ಎದುರಿಸಿದ್ದರು. ಡ್ರಗ್ಸ್ ವ್ಯಸನಿಯಾಗಿದ್ದ ಅವರು ಇತ್ತೀಚೆಗಿನ ದಿನಗಳಲ್ಲಿ ಖಿನ್ನತೆಯಿಂದ ಬಳಲುತ್ತಿದ್ದರು ಎನ್ನಲಾಗಿದೆ.
Next Story





