ಅಶ್ರಫ್ ಕಲಾಯಿ ಕೊಲೆ ಪ್ರಕರಣ: ಕುಪ್ಪೆಪದವಿನಲ್ಲಿ ಕಪ್ಪು ಪಟ್ಟಿ ಧರಿಸಿ ಸಾಂಕೇತಿಕ ಪ್ರತಿಭಟನೆ

ಮಂಗಳೂರು, ಜೂ.25: ಬೆಂಜನಪದವಿನಲ್ಲಿ ಅಮಾಯಕ ಅಶ್ರಫ್ ಕಲಾಯಿ ಅವರ ಕೊಲೆ ಪ್ರಕರಣಕ್ಕೆ ಸಂಬಂಧಿಸಿ ಇಂದು ಈದುಲ್ ಫಿತರ್ ನಮಾಝ್‌ನ ಬಳಿಕ ಕಲ್ಲಾಡಿ (ಕುಪ್ಪೆಪದವು)ಯಲ್ಲಿ ಸ್ಥಳೀಯ ಯುವಕರಿಂದ ಕಪ್ಪು ಪಟ್ಟಿ ಧರಿಸಿ ಸಾಂಕೇತಿಕ ಪ್ರತಿಭಟನೆ ನಡೆಯಿತು.
ಬಾರ್ದಿಲ ಜಮಾಅತ್‌ಗೆ ಒಳಪಟ್ಟ ಯುವಕರು ಕೈಗಳಿಗೆ ಕಪ್ಪು ಪಟ್ಟಿ ಧರಿಸಿ ಅಶ್ರಫ್ ಕಲಾಯಿಯವರ ಕೊಲೆಯನ್ನು ಖಂಡಿಸಿದರು. ಅಶ್ರಫ್ ಬಾಳೆಮಾರ್, ಖಲೀಲ್ ಪೂವಾಣಿಬೆಟ್ಟು ಮೊದಲಾದವರು ಉಪಸ್ಥಿತರಿದ್ದರು.
Next Story





