ದ.ಕ. : ಹಲವೆಡೆ ಇಂದೂ ರಂಝಾನ್ ಉಪವಾಸ
ಮಂಗಳೂರು, ಜೂ.25: ಉಳ್ಳಾಲ ಹಾಗೂ ಆಸುಪಾಸಿನ ಹಲವು ಕಡೆ ‘ಪೆರ್ನಾಳ್’ ಆಚರಣೆಗೆ ಸಂಬಂಧಿಸಿ ಉಂಟಾದ ಗೊಂದಲದ ಹಿನ್ನೆಲೆಯಲ್ಲಿ ಕೆಲವು ಮುಸ್ಲಿಂ ಬಾಂಧವರು ರವಿವಾರ ಉಪವಾಸ ಮುಂದುವರಿಸಿದ ಪ್ರಸಂಗ ನಡೆದಿದೆ.
ಅಲ್‌ಮದೀನಾ, ತೋಟಾಲ್, ಪಡಿಕ್ಕಲ್, ಕಾವಳಕಟ್ಟೆ, ಪೂಂಜಾಲಕಟ್ಟೆ ಚೆರಿಯ ಪಳ್ಳಿ, ಮಡಂತ್ಯಾರು, ಮದ್ದಡ್ಕದಲ್ಲಿ ಶೇ. 50ರಷ್ಟು, ಗುರುವಾಯನಕೆರೆ, ಬಾಳೆಪುಣಿ, ಬದಿಮಾಲೆ, ಮುದುಂಗಾರ್ ಕಟ್ಟೆ, ಮೀಮ್ ನಗರ, ಕಾಜೂರು, ಕುರ್ನಾಡು, ಪಾಣೇಲ, ಸಾಂಬರ್ ತೋಟ, ಮದ್ಯನಡ್ಕ, ಮಾಡೂರು, ಬೀರಿಯ ಮಸೀದಿ ವ್ಯಾಪ್ತಿಯಲ್ಲಿ ಇಂದು ಕೂಡಾ ಮುಸ್ಲಿಮರು ರಂಝಾನ್ ಉಪವಾಸ ಮುಂದುವರಿಸಿದರು.
ಉಳ್ಳಾಲ ವ್ಯಾಪ್ತಿಯ ಮಂಜನಾಡಿ, ಪೊಟ್ಟೊಳಿಕೆ, ತೌಡುಗೋಳಿ, ಮರಿಕ್ಕಳ, ಮೋಂಟುಗೋಳಿ, ಮೊಂಟೆಪದವು, ಎಚ್ ಕಲ್ಲು, ಕಣ್ಣೂರು, ಫರಂಗಿಪೇಟೆ, ಮಾರಿಪಳ್ಳ, ವಳಚ್ಚಿಲ್, ಮಿತ್ತಬೈಲ್, ಬಂಟ್ವಾಳ, ಅಗ್ರಹಾರ, ವಗ್ಗ, ಬಾಂಬಿಲ, ಪೂಂಜಾಲಕಟ್ಟೆ ಬೆಳಿಯ ೆಪಳ್ಳಿ, ಕುಲ್ಪತಬೆ2ಲ್, ಪಣಕಜೆ, ಸಬರಬೈಲ್, ಲಾಡಿ, ಕನ್ನಡಿಕಟ್ಟೆ, ವೇಣೂರು, ಶಿರ್ಲಾಲ್, ಸುನ್ನತ್ ಕೆರೆ, ಬೆಳ್ತಂಗಡಿ, ಪಾತೂರು ಸೇರಿದಂತೆ ದ.ಕ. ಜಿಲ್ಲೆಯ ಇತರ ಎಲ್ಲಾ ಕಡೆಗಳಲ್ಲಿ ಮುಸ್ಲಿಂ ಬಾಂಧವರು ಸಂಭ್ರಮದ ಪೆರ್ನಾಳ್ ಹಬ್ಬವನ್ನು ಆಚರಿಸಿದರು.







