ಜಂತಕಲ್ ಮೈನಿಂಗ್ ಪ್ರಕರಣ ನ್ಯಾಯಾಲಯದಲ್ಲಿರುವುದರಿಂದ ಆ ಕುರಿತು ಮಾತನಾಡುವುದಿಲ್ಲ : ಮಾಜಿ ಪ್ರಧಾನಿ ದೇವೆಗೌಡ

ಕೋಲಾರ, ಜೂ.25: ಜಂತಕಲ್ ಮೈನಿಂಗ್ ವಿಚಾರ ನ್ಯಾಯಾಲಯದಲ್ಲಿರುವುದರಿಂದ ಆ ಕುರಿತು ಮಾತನಾಡುವುದಿಲ್ಲ ಎಂದು ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ ಹೇಳಿದ್ದಾರೆ.
ಕೋಲಾರ ಜಿಲ್ಲೆ ಮುಳಬಾಗಿಲು ತಾಲೂಕಿನ ಕುರುಡುಮಲೆ ಗಣಪತಿ ದೇವಸ್ಥಾನಕ್ಕೆಎಚ್.ಡಿ ದೇವೇಗೌಡ ಹಾಗು ಪತ್ನಿ ಚನ್ನಮ್ಮ ದೇವೇಗೌಡ ಆಗಮಿಸಿದ್ದರು.
ಆ ಬಳಿಕ ಮಾದ್ಯಮದವರೊಂದಿಗೆ ಮಾತನಾಡಿದ ದೇವೆಗೌಡ, ಕೋಲಾರದ ವಿಧಾನ ಸಭಾ ಕ್ಷೇತ್ರದ ಅಭ್ಯರ್ಥಿ ಆಯ್ಕೆ ವಿಚಾರ ಬಗ್ಗೆ ಈಗಾಗಲೇ ಏನು ಹೇಳಯುವುದಿಲ್ಲ. ಚುನಾವಣೆಗೆ ಇನ್ನೂ ಸಮಯವಿದೆ. ಒಬ್ಬ ಸೂಕ್ತ ಅಭ್ಯರ್ಥಿಯನ್ನು ಆಯ್ಕೆ ಮಾಡಲಾಗುವುದು ಎಂದು ಹೇಳಿದರು
ಕೋಲಾರದಿಂದ ನೇರವಾಗಿ ಮಂಡ್ಯ ಜಿಲ್ಲೆಯ ಮಳವಳ್ಳಿ ತಾಲೂಕಿನ ಕಾರ್ಯಕ್ರಮದಲ್ಲಿ ಭಾಗಿಯಾಗುವುದಾಗಿ ಇದೇ ವೇಳೆ ಮಾಜಿ ಪ್ರಧಾನಿ ಹೇಳಿದ್ದಾರೆ.
Next Story





