Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಸುಗ್ಗಿ
  3. ಮೊಬೈಲ್ ಗಳಲ್ಲಿ ಕನ್ನಡ ಮೂಡಿಸುವ ಸಂಕಷ್ಟ

ಮೊಬೈಲ್ ಗಳಲ್ಲಿ ಕನ್ನಡ ಮೂಡಿಸುವ ಸಂಕಷ್ಟ

ಡಿಜಿಟಲ್ ಕನ್ನಡ

ಸತ್ಯನಾರಾಯಣ .ಕೆ.ಸತ್ಯನಾರಾಯಣ .ಕೆ.25 Jun 2017 2:54 PM IST
share
ಮೊಬೈಲ್ ಗಳಲ್ಲಿ ಕನ್ನಡ ಮೂಡಿಸುವ ಸಂಕಷ್ಟ

ಮೊಬೈಲ್ ಫೋನ್ ಖರೀದಿಸುವಾಗ ‘ಕನ್ನಡ ಬಳಸಲು ಸಾಧ್ಯವಿರುವ ಸೆಟ್ ಇದೆಯಾ?’ ಎಂದು ಅಂಗಡಿಯವರಲ್ಲಿ ಕೇಳಬೇಕಿತ್ತು. ‘‘ಹೌದು, ಇದರಲ್ಲಿ ಕನ್ನಡ ಇದೆ’’ ಎಂದು ಹೇಳಿ ಆತ ನಮ್ಮ ಕೈಗಿಟ್ಟ ಆ ಸೆಟ್‌ನ ಬಟನ್‌ಗಳ ಮೇಲೆ ಕನ್ನಡದ ಅಕ್ಷರಗಳು ಕಂಡುಬಂದರೆ ಮಾತ್ರವೇ ಆತನ ಮಾತು ನಿಜ ಎಂದು ನಂಬುತ್ತಿದ್ದೆವು. ಕನ್ನಡದ ಮೆಸೇಜ್ ಕಳುಹಿಸಲು ಕಷ್ಟಪಟ್ಟು ಬಟನ್‌ಗಳ ಬಳಕೆಯನ್ನು ಅಭ್ಯಾಸ ಮಾಡಬೇಕಿತ್ತು.

 ಸತ್ಯನಾರಾಯಣ .ಕೆ.

ನಮ್ಮ ಮೊಬೈಲ್ ಫೋನುಗಳು ಇನ್ನೂ ಸ್ಮಾರ್ಟ್ ಆಗದಿದ್ದ ಕಾಲದಲ್ಲಿ ‘ಟಚ್‌ಸ್ಕ್ರೀನ್’ ಸೌಲಭ್ಯ ವಿರಲಿಲ್ಲ. ‘ಯೂಸರ್ ಇಂಟರ್‌ಫೇಸ್’ ಬಳಸಲು ಅಥವಾ ಟೆಕ್ಸ್ಟ್ ಮೂಡಿಸಿ ಎಸ್ಸೆಮ್ಮೆಸ್ ಕಳುಹಿಸಲು ಮೊಬೈಲ್‌ನ ಬಟನ್‌ಗಳನ್ನೇ ಒತ್ತಬೇಕಿತ್ತು.

oota aaythaa? ಹಿಂದೆ, ಮೊಬೈಲ್ ಫೋನ್ ಖರೀದಿಸುವಾಗ ‘ಕನ್ನಡ ಬಳಸಲು ಸಾಧ್ಯವಿರುವ ಸೆಟ್ ಇದೆಯಾ?’ ಎಂದು ಅಂಗಡಿಯವರಲ್ಲಿ ಕೇಳಬೇಕಿತ್ತು. ‘‘ಹೌದು, ಇದರಲ್ಲಿ ಕನ್ನಡ ಇದೆ’’ ಎಂದು ಹೇಳಿ ಆತ ನಮ್ಮ ಕೈಗಿಟ್ಟ ಆ ಸೆಟ್‌ನ ಬಟನ್‌ಗಳ ಮೇಲೆ ಕನ್ನಡದ ಅಕ್ಷರಗಳು ಕಂಡುಬಂದರೆ ಮಾತ್ರವೇ ಆತನ ಮಾತು ನಿಜ ಎಂದು ನಂಬುತ್ತಿದ್ದೆವು. ಕನ್ನಡದ ಮೆಸೇಜ್ ಕಳುಹಿಸಲು ಕಷ್ಟಪಟ್ಟು ಬಟನ್‌ಗಳ ಬಳಕೆಯನ್ನು ಅಭ್ಯಾಸ ಮಾಡಬೇಕಿತ್ತು. ಒಂದೊಂದು ಕಂಪೆನಿಯವರು ಒಂದೊಂದು ರೀತಿಯಲ್ಲಿ ಪಠ್ಯ ಮೂಡಿಸುವ ತಂತ್ರಗಳನ್ನು ಅಳವಡಿಸಿದ್ದರು. ಕೆಲವೊಮ್ಮೆ ಈ ತಂತ್ರಗಳನ್ನು ಅರಿತು ಕನ್ನಡ ಮೂಡಿಸುವಷ್ಟರಲ್ಲಿ ಸುಸ್ತೋಸುಸ್ತು ಆಗಿಹೋಗುತ್ತಿತ್ತು. ಇಂಗ್ಲಿಷ್‌ನಲ್ಲಾದರೆ ಕೇವಲ 26 ಅಕ್ಷರಗಳು ಇವೆ. ಕನ್ನಡದಲ್ಲಿ ಸುಮಾರು 50 ಮೂಲ ಅಕ್ಷರಗಳನ್ನು ಬಳಸಿ ಒತ್ತಕ್ಷರಗಳು, ಗುಣಿತಾಕ್ಷರಗಳಂತಹ ಎಲ್ಲಾ ಸಾಧ್ಯತೆಗಳನ್ನು ಮೂಡಿಸಬೇಕು. ಇಂದಿಗೂ, ಮೊಬೈಲ್‌ಗಳಲ್ಲಿ ಕನ್ನಡ ಲಿಪಿಯ ಎಸ್ಸೆಮ್ಮೆಸ್ ಕಳುಹಿಸುವುದು ರೇಜಿಗೆಯ ಕೆಲಸವೇ ಸರಿ. ಇಷ್ಟೇಕೆ ಕಷ್ಟಪಡಬೇಕು ಎನ್ನುವವರು ಇಂಗ್ಲಿಷ್ ಲಿಪಿಯಲ್ಲಿಯೇ ಕನ್ನಡ ಬಳಕೆ ಮುಂದುವರಿಸಿದ್ದಾರೆ. ಮೊಬೈಲ್ ಫೋನ್‌ನಲ್ಲಿ ಚಾಟಿಂಗ್ ಮಾಡುವಾಗ ಎನ್ನುವ ಕಂಗ್ಲಿಷ್ ಲಿಪಿ ಸರ್ವೇಸಾಮಾನ್ಯ. ಇಂದಿಗೂ ಕಾಲೇಜು ಹುಡುಗ ಹುಡುಗಿಯರು ಮೊಬೈಲ್ ಚಾಟಿಂಗ್ ಮಾಡುವುದು ಕಂಗ್ಲಿಷ್‌ನಲ್ಲಿಯೇ.

ಕನ್ನಡವನ್ನು ಮೂಡಿಸಲು ಕಸರತ್ತು ಮಾಡುವ ಬದಲು ಹೀಗೆ ಕಂಗ್ಲಿಷ್ ಲಿಪಿಯನ್ನೇ ಬಳಸುವವರ ಸಂಖ್ಯೆಯೇ ಹೆಚ್ಚು. ಆದರೆ, ಇಂತಹ ಕಂಗ್ಲಿಷ್ ಬಳಕೆಯಿಂದಾಗಿ, ಕನ್ನಡವನ್ನು ಇಂಗ್ಲಿಷ್ ಲಿಪಿಯಲ್ಲಿ ಓದಬೇಕಾಗಿರುವುದು ದೌರ್ಭಾಗ್ಯ ಮತ್ತು ಕನ್ನಡಾಭಿಮಾನಿಗಳಿಗಂತೂ ಇದು ಮನಸ್ಸಿಗೆ ಕಿರಿಕಿರಿ ಉಂಟುಮಾಡುತ್ತಿದೆ. ಅಂದು ಅಗತ್ಯ ತಂತ್ರಜ್ಞಾನ ಲಭ್ಯವಿಲ್ಲದಿದ್ದ ಕಾರಣ ಕನ್ನಡ ಭಾಷಾ ಬಳಕೆಗಾಗಿ ಹಲವು ರಾಜಿಗಳನ್ನು ಮಾಡಿಕೊಳ್ಳುವುದು ಅನಿವಾರ್ಯವಾಗಿತ್ತು. ಪಠ್ಯವನ್ನು ಇಮೇಜ್‌ನ್ನಾಗಿಸಿ ತೋರಿಸುವ ಮೊಬೈಲ್ ಬ್ರೌಸರ್‌ಗಳು ಬಳಕೆಗೆ ಬಂದವು. ಕನ್ನಡವೂ ಸೇರಿದಂತೆ ಭಾರತೀಯ ಭಾಷೆಗಳನ್ನು ಮೊಬೈಲ್‌ನಲ್ಲಿ ನೋಡಲು, ಓದಲು ಒಪೇರಾ ಹೆಸರಿನ ಬ್ರೌಸರ್ ಇತ್ತು. ಅದರಲ್ಲಿ ಭಾಷಾ ಪಠ್ಯಗಳನ್ನು ಇಮೇಜ್‌ಗಳ ರೂಪದಲ್ಲಿರುತ್ತಿದ್ದವು. ಅವುಗಳನ್ನು ಎಡಿಟ್ ಮಾಡಿ ಇನ್ನೊಬ್ಬರಿಗೆ ಕಳುಹಿಸಲು ಆಗುತ್ತಿರಲಿಲ್ಲ. ಫಾಂಟ್ ತಂತ್ರಜ್ಞಾನವನ್ನು ಮೊಬೈಲ್‌ಗೆ ಅಳವಡಿಸಿದ ನಂತರವೇ, ಎಡಿಟ್ ಮಾಡಬಹುದಾದ ಕನ್ನಡ ಲಿಪಿ ಮೂಡಿಸುವ ಸೌಲಭ್ಯಗಳು ಬಳಕೆಗೆ ಬಂದವು, ಬಟನ್‌ಗಳ ಮೇಲೆ ಕನ್ನಡ ಅಕ್ಷರಗಳು ಕಾಣಿಸಿಕೊಂಡವು. ಕಷ್ಟಪಟ್ಟು ಹಲವು ಬಟನ್‌ಗಳನ್ನು ಒತ್ತಿ ಕನ್ನಡ ಪದಗಳನ್ನು ಮೂಡಿಸುವ ಕಸರತ್ತುಗಳು ಆರಂಭಗೊಂಡವು.

ಮೊಬೈಲ್‌ಗಳಲ್ಲಿನ ಕನ್ನಡದ ಅಕ್ಷರಗಳು ಮುಕ್ಕಾಗಿರುವಂತೆ ತೋರುತ್ತಾ, ಅಕ್ಷರ ಭಾಗಗಳು ಖಾಲಿ ಜಾಗಗಳೊಂದಿಗೆ ಬಿಡಿಬಿಡಿಯಾಗಿ ಕಾಣಿಸಿಕೊಳ್ಳುತ್ತಿದ್ದವು. ಮೊಬೈಲ್‌ನಲ್ಲಿ ಕನ್ನಡ ಓದಲು ಕಷ್ಟಕರವಾಗಿತ್ತು. ಇವೆಲ್ಲಕ್ಕೂ ಮೊಬೈಲ್ ತಯಾರಕರೇ ಜವಾಬ್ದಾರರಾಗಿದ್ದರು. ಟಚ್‌ಸ್ಕ್ರೀನ್ ಆವಿಷ್ಕಾರವಾದ ಮೇಲೆ, ಮೊಬೈಲ್‌ಗಳು ಇನ್ನಷ್ಟು ಸ್ಮಾರ್ಟ್ ಆದವು. ಆ್ಯಪ್‌ಗಳನ್ನು ಅಳವಡಿಸಿಕೊಳ್ಳುವ ತಂತ್ರಜ್ಞಾನ ಬಂತು. ಆಗಲೇ ಮೊಬೈಲ್‌ಗಳಲ್ಲಿ ಕನ್ನಡ ಭಾಷಾ ಬಳಕೆಯೂ ಸಹ ಸಾಕಷ್ಟು ಸುಧಾರಿಸಿತು. ಭಾಷಾ ಲಿಪಿಗಳನ್ನು ಮೂಡಿಸಲು ‘‘ಕೀಬೋರ್ಡ್ ಇನ್‌ಪುಟ್ ಆ್ಯಪ್‌ಗಳು’’ ಲಭ್ಯವಾದವು. ಕನ್ನಡಕ್ಕಾಗಿ ನಿಜವಾದ ಬಟನ್‌ಗಳನ್ನು ಒತ್ತುವ ಬದಲಾಗಿ, ಟಚ್‌ಸ್ಕ್ರೀನ್ ಮೇಲಿನ ಬಟನ್ ಆಕಾರದ ಜಾಗವನ್ನು ಒತ್ತುವುದು ಆರಂಭವಾಯಿತೇ ಹೊರತು, ಬಟನ್ ಒತ್ತಿ ಕನ್ನಡ ಲಿಪಿಯನ್ನು ಮೂಡಿಸುವ ಕಸರತ್ತಿನ ಕೆಲಸ ತಪ್ಪಲಿಲ್ಲ. ಕನ್ನಡಕ್ಕೆ ‘ಹ್ಯಾಂಡ್ ರೈಟಿಂಗ್ ಇನ್‌ಪುಟ್’ ಸೌಲಭ್ಯ ಬರುವವರೆಗೂ ಕನ್ನಡ ಮೂಡಿಸಲು ಬಟನ್‌ಗಳನ್ನು ಒತ್ತುವ ಕಸರತ್ತಿಗೆ ಮುಕ್ತಿ ಸಿಕ್ಕಿರಲಿಲ್ಲ.

share
ಸತ್ಯನಾರಾಯಣ .ಕೆ.
ಸತ್ಯನಾರಾಯಣ .ಕೆ.
Next Story
X