ಕುಂದಾಪುರದಲ್ಲಿ ಸಂಭ್ರಮದ ಈದುಲ್ ಫಿತ್ರ್

ಕುಂದಾಪುರ, ಜೂ.25: ಪವಿತ್ರ ರಮ್ಝಾನ್ ಮಾಸದ ಉಪವಾಸ ಆಚರಣೆಯ ನಂತರದ ಈದುಲ್ ಫಿತ್ರ್ ಹಬ್ಬವನ್ನು ಕುಂದಾಪುರದಲ್ಲಿ ಮುಸ್ಲಿಮರು ಸಂಭ್ರಮದಿಂದ ಆಚರಿಸಿದರು.
“ಸ್ಥಳೀಯ ಜಾಮಿಯಾ ಮಸೀದಿಯಲ್ಲಿ ಬೆಳಗ್ಗೆ 8:30ಕ್ಕೆ ಈದ್ ನಮಾರ್ ನೆರವೇರಿಸಿದ ಧರ್ಮಗುರುಗಳಾದ ಮೌಲಾನ ಹಾಜಿ ಅಬ್ದುಲ್ ರಹೀಮ್ ಪವಿತ್ರ ರಮ್ಜಾನ್ ಬಗ್ಗೆ ಪ್ರವಚನ ನೀಡಿ ಇಸ್ಲಾಮ್ ತತ್ವಗಳಾದ ಶಾಂತಿ, ಸಹೋದರತೆ, ಸಹನೆಯ ಹಾದಿಯಲ್ಲಿಯೇ ಮುಂದುವರಿಯುವ ಹಾಗೂ ದೀನ ದಲಿತರ, ಬಡವರ, ಅಸಹಾಯಕರ ಹಸಿವಿನ ಸಂಕಟ, ನೋವನ್ನು ಸ್ವತ:, ನಮ್ಮ ಅನಭವಕ್ಕೆ ತರುವ ಪವಿತ್ರ ರಮ್ಜಾನ್ ಮಾಸದ ಪಾವಿತ್ಯ್ರತೆ ಮತ್ತು ದಾನ ಧರ್ಮದ ಬಗ್ಗೆ ಹೇಳಿದರು.
ನಮಾಜ್ ನಂತರ ನಗರದ ಪ್ರಮುಖ ಮಾರ್ಗದ ಮೂಲಕ ಸ್ವಲಾತ್ ಹೇಳುತ್ತಾ ಈದ್ಗಾಗೆ ಸಾಗಿದ ಮುಸ್ಲಿಮರು ದುವಾ ನೆರವೇರಿಸಿ ಪರಸ್ಪರ ಈದ್ ಶುಭಾಶಯಗಳನ್ನು ವಿನಿಮಯಿಸಿಕೊಂಡರು.
Next Story





