ಹಾಲೆ ಓಪನ್: ಫೆಡರರ್‌ಗೆ 9ನೆ ಪ್ರಶಸ್ತಿ

ಹಾಲೆ, ಜೂ.25: ಸ್ವಿಸ್ ಸೂಪರ್‌ಸ್ಟಾರ್ ರೋಜರ್ ಫೆಡರರ್ ಹಾಲೆ ಓಪನ್ ಫೈನಲ್‌ನಲ್ಲಿ ನೇರ ಸೆಟ್‌ಗಳಿಂದ ಜಯ ಸಾಧಿಸುವ ಮೂಲಕ ಪ್ರಶಸ್ತಿಯನ್ನು ಬಾಚಿಕೊಂಡಿದ್ದಾರೆ.
9ನೆ ಬಾರಿ ಹಾಲೆ ಓಪನ್ ಪ್ರಶಸ್ತಿಯನ್ನು ಜಯಿಸಿರುವ ಫೆಡರರ್ ಸ್ಪೇನ್‌ನ ರಫೆಲ್ ನಡಾಲ್ ದಾಖಲೆಯನ್ನು ಸರಿದೂಗಿಸಿದರು. ಟೆನಿಸ್ ಓಪನ್ ಯುಗದಲ್ಲಿ ಫೆಡರರ್ ಹಾಗೂ ನಡಾಲ್ ಮಾತ್ರ ಒಂದೇ ಟೂರ್ನಿಯಲ್ಲಿ 8ಕ್ಕಿಂತ ಹೆಚ್ಚು ಪ್ರಶಸ್ತಿಗಳನ್ನು ಗೆದ್ದ ಸಾಧನೆ ಮಾಡಿದ್ದಾರೆ. ರವಿವಾರ ನಡೆದ ಪ್ರಶಸ್ತಿ ಸುತ್ತಿನ ಪಂದ್ಯದಲ್ಲಿ ಫೆಡರರ್ ಅವರು ಜರ್ಮನಿಯ ಅಲೆಕ್ಸಾಂಡರ್ ಝ್ವೆವೆರ್ ವಿರುದ್ಧ 6-1, 6-3 ಸೆಟ್‌ಗಳ ಅಂತರದಿಂದ ಜಯ ಸಾಧಿಸಿದ್ದಾರೆ.
ಜೂ.14 ರಂದು ಸ್ನೇಹಿತ ಟಾಮ್ ಹಾಸ್ ವಿರುದ್ಧ ಸ್ಟಟ್‌ಗರ್ಟ್ ಓಪನ್‌ನಲ್ಲಿ ಸೋತ ಬಳಿಕ ಫೆಡರರ್ ಸತತ 5 ಪಂದ್ಯಗಳಲ್ಲಿ ಜಯ ಸಾಧಿಸಿ ಮುಂಬರುವ ವಿಂಬಲ್ಡನ್ ಟೂರ್ನಿಗೆ ಭರ್ಜರಿ ಜಯ ಸಾಧಿಸಿದ್ದಾರೆ.
Next Story





