ಸುಳ್ಳು ಪತ್ತೆ ಪರೀಕ್ಷೆಗೆ ನಾನು ಸಿದ್ಧ : ನಟ ದಿಲೀಪ್

ಕಲ್ಲಿಕೋಟೆ, ಜೂ. 26: ನಟಿಯನ್ನು ಅಪಹರಿಸಿ ಲೈಂಗಿಕ ಕಿರುಕುಳಕ್ಕೆ ಯತ್ನಿಸಿದ ಪ್ರಕರಣಕ್ಕೆ ಸಂಬಂಧಿಸಿ ನಟ ದಿಲಿಪ್ ಪ್ರತಿಕ್ರಿಯಿಸಿದ್ದು, ಈಗ ನಡೆಯುತ್ತಿರುವ ಘಟನೆಗಳೆಲ್ಲವೂ ನನ್ನ ನಾಶಕ್ಕೆ ಪ್ರಯತ್ನಿಸುತ್ತಿರುವುದಾಗಿದೆ. ತನ್ನ ನಿರಪರಾಧಿತ್ವವವನ್ನು ಸಾಬೀತು ಪಡಿಸಲು ತಾನು ಸುಳ್ಳುಪತ್ತೆ ಪರೀಕ್ಷೆಗೆ ಒಳಪಡಲು ಸಿದ್ಧ ಎಂದು ಫೇಸ್‌ಬುಕ್ ಪೋಸ್ಟ್ ಮೂಲಕ ತಿಳಿಸಿದ್ದಾರೆ.
ದಿಲೀಪ್‌ರ ಫೇಸ್‌ಬುಕ್ ಪೋಸ್ಟ್:
ಸಲೀಂಕುಮಾರ್, ಅಜುವರ್ಗೀಸ್‌ರಿಗೆ ಕೃತಜ್ಞತೆಗಳು. ಈ ಸಂದರ್ಭದಲ್ಲಿ ನೀವು ನೀಡಿದ ಬೆಂಬಲ ಬಹುದೊಡ್ಡದು. ಜೀವನದಲ್ಲಿ ಈವರೆಗೆ ಎಲ್ಲರಿಗೂ ಒಳ್ಳೆಯದಾಗಲಿ ಎಂದೇ ಚಿಂತಿಸಿದ್ದೇನೆ, ಮತ್ತು ಕಾರ್ಯನಿರ್ವಹಿಸಿದ್ದೇನೆ. ಆದರೆ ಒಂದು ಪ್ರಕರಣದ ಹೆಸರಿನಲ್ಲಿ ಕಳೆದ ಕೆಲವು ದಿವಸಗಳಿಂದ ನನ್ನ ಮಾನಹಾನಿಗೆ ಕೆಲವರು ಸಾಮಾಜಿಕ ಮಾಧ್ಯಮಗಳಲ್ಲಿ ಸಂಚು ನಡೆಸುತ್ತಿದ್ದಾರೆ. ಕೆಲವು ಕಾಮಾಲೆ ಕಣ್ಣಿನ ಆನ್‌ಲೈನ್ ಮಾಧ್ಯಮಗಳು ನನ್ನ ಇಮೇಜ್ ಹಾಳುಗೆಡಹಲು ಶ್ರಮಿಸುತ್ತಿವೆ. ಪ್ರಮುಖ ಚ್ಯಾನೆಲ್‌ಚರ್ಚೆಗಳಲ್ಲಿಯೂ ನನ್ನನ್ನು ಅವಹೇಳಿಸಲು ಯತ್ನಿಸಲಾಗುತ್ತಿದೆ.
ಇವರೆಲ್ಲರ ಉದ್ದೇಶ ಒಂದಾಗಿದೆ. ನನ್ನನ್ನು ಪ್ರೀತಿಸುವ ಪ್ರೇಕ್ಷಕರನ್ನು ತನ್ನಿಂದ ದೂರಮಾಡುವುದು ಆಗಿದೆ. ನನ್ನ ಅಭಿಮಾನಿಗಳನ್ನು ನನ್ನಿಂದ ದೂರಮಾಡುವುದು ಇವರ ಉದ್ದೇಶವಾಗಿದೆ. ಆ ರೀತಿ ನನ್ನ ಹೊಸ ಚಿತ್ರ ರಾಮ್‌ಲೀಲಾ ಹಾಗೂ ಮುಂದಿನ ಸಿನೆಮಾಗಳನ್ನು ವಿಫಲಗೊಳಿಸಲು ಮತ್ತು ನನ್ನನ್ನು ಸಿನೆಮಾರಂಗದಿಂದಲೇ ಇಲ್ಲದಾಗಿಸಲು ಪ್ರಯತ್ನಿಸುವವರೊಡನೆ , ನನ್ನರಕ್ತಕ್ಕಾಗಿ ಹಾತೊರೆಯುವವರೊಂದಿಗೆ, ಇಲ್ಲಿನ ಮಾಧ್ಯಮಗಳೊಂದಿಗೆ,ಸಾರ್ವಜನಿಕರೊಂದಿಗೆ ನಾನು ಯಾವ ಕೇಸಿನಲ್ಲಿಯೂ ಶಾಮೀಲಾಗಿಲ್ಲ ಎಂದು ಹೇಳಲು ಇಚ್ಛಿಸುತ್ತೇನೆ. ಸಲೀಂಕುಮಾರ್ ಹೇಳಿರುವಂತೆ ಬ್ರೈನ್ ಮ್ಯಾಪಿಂಗ್, ನಾರ್ಕೋಲಜಿಸ್ಟ್ ಟೆಸ್ಟ್, ಸುಳ್ಳು ಪತ್ತೆ ಪರೀಕ್ಷೆ ಯಾವುದೇ ಇರಲಿ ಅದಕ್ಕೆಲ್ಲ ನಾನು ಸಿದ್ಧ. ಅದು ಇನ್ನಾರನ್ನೋ ಅಪರಾಧಿಯನ್ನಾಗಿಸಲಿಕ್ಕಲ್ಲ. ನನ್ನ ನಿರಪರಾಧಿತ್ವವನ್ನು ಸಾಬೀತುಪಡಿಸಲಿಕ್ಕಾಗಿದೆ. ಎಲ್ಲರಿಗೂ ಹೃತ್ಪೂರ್ವಕ ಈದ್ ಶುಭಾಶಯಗಳು.







