ಜುನೈದ್ ಹತ್ಯೆಗೆ ಖಟ್ಟರ್ ಖಂಡನೆ

ಚಂಡಿಗಡ,ಜೂ.26: ಜೂ.22ರಂದು ದಿಲ್ಲಿ-ಮಥುರಾ ರೈಲಿನಲ್ಲಿ ಮುಸ್ಲಿಂ ಬಾಲಕನ ಬರ್ಬರ ಹತ್ಯೆಯನ್ನು ಸೋಮವಾರ ಖಂಡಿಸಿದ ಹರ್ಯಾಣ ಮುಖ್ಯಮಂತ್ರಿ ಮನೋಹರಲಾಲ್ ಖಟ್ಟರ್ ಅವರು, ಪ್ರಕರಣದಲ್ಲಿಯ ಇನ್ನೋರ್ವ ಆರೋಪಿಯ ಬಂಧನಕ್ಕಾಗಿ ಪ್ರಯತ್ನಗಳು ಜಾರಿಯಲ್ಲಿವೆ ಎಂದು ತಿಳಿಸಿದರು. ಶಾಂತಿಯನ್ನು ಕಾಯ್ದುಕೊಳ್ಳುವಂತೆ ಇದೇ ವೇಳೆ ಅವರು ಜನತೆಯನ್ನು ಕೋರಿಕೊಂಡರು.
ಜುನೈದ್ ಹತ್ಯೆಗೆ ಖಂಡನೆ ಅಥವಾ ಸಂತಾಪಗಳನ್ನು ವ್ಯಕ್ತಪಡಿಸದ್ದಕ್ಕಾಗಿ ಖಟ್ಟರ್ ವಿರುದ್ಧ ತೀವ್ರ ಟೀಕೆಗಳು ಕೇಳಿಬಂದಿದ್ದವು.
ಜುನೈದ್ ಕುಟುಂಬಕ್ಕೆ ಜಿಲ್ಲಾ ರೆಡ್‌ಕ್ರಾಸ್ ರವಿವಾರ ಐದು ಲಕ್ಷ ರೂ.ಗಳ ಚೆಕ್ ನೀಡಿದ್ದರೆ,ಹೆಚ್ಚುವರಿಯಾಗಿ ಐದು ಲ.ರೂ ಮತ್ತು ಜುನೈದ್‌ನ ಸೋದರರಲ್ಲೋರ್ವನಿಗೆ ಉದ್ಯೋಗ ನೀಡುವುದಾಗಿ ವಕ್ಫ್ ಮಂಡಳಿ ಅಧ್ಯಕ್ಷರು ಘೋಷಿಸಿದ್ದಾರೆ
Next Story





