90 ನಿಮಿಷಗಳ ಕಾಲ ಥರಥರ ನಡುಗಿದ ವಿಮಾನ!

ಆಸ್ಟ್ರೇಲಿಯಾ, ಜೂ.26: ತಾಂತ್ರಿಕ ಕಾರಣದಿಂದ ಹಾರಾಟದಲ್ಲಿದ್ದ ವಿಮಾನವೊಂದು ಸುಮಾರು 90 ನಿಮಿಷಗಳ ಕಾಲ ಥರಥರ ನಡುಗಿದ ಘಟನೆ ಆಸ್ಪ್ರೇಲಿಯಾದಲ್ಲಿ ಸಂಭವಿಸಿದೆ.
ಕೌಲಾಲಂಪುರಕ್ಕೆ ತೆರಳುತ್ತಿದ್ದ ವಿಮಾನವೊಂದು ಇದ್ದಕ್ಕಿಂದ್ದಂತೆ ನಡುಗಲು ಪ್ರಾರಂಭಿಸಿದೆ. ಸುಮಾರು 90 ನಿಮಿಷಗಳ ಕಾಲ ವಿಮಾನದಲ್ಲಿ ಭಾರೀ ಸದ್ದಾಗುತ್ತಿತ್ತು ಎಂದು ಪ್ರಯಾಣಿಕರೊಬ್ಬರು ಪರ್ಥ್ ನೌ ಹಾಗೂ ಇತರ ಮಾಧ್ಯಮಗಳಿಗೆ ಮಾಹಿತಿ ನೀಡಿದ್ದಾರೆ. ವಿಮಾನದ ಎಡರೆಕ್ಕೆಯಲ್ಲಿ ಸ್ಫೋಟ ಸಂಭವಿಸಿತ್ತು. ಕ್ಯಾಬಿನ್ ನೊಳಗೆ ಕೆಟ್ಟ ವಾಸನೆ ಹಬ್ಬಿತ್ತು ಎಂದು ಮತ್ತೊರ್ವ ಪ್ರಯಾಣಿಕರು ವಿವರಿಸಿದ್ದಾರೆ.
ಅಲುಗಾಟದಿಂದ ವಿಮಾನ ಮೇಲೆ ಕೆಳಗೆ ಹೋಗುತ್ತಿತ್ತು. ವಾಷಿಂಗ್ ಮೆಷಿನ್ ಮೇಲೆ ಕುಳಿತ ಅನುಭವವಾಗುತ್ತಿತ್ತು ಎಂದವರು ಹೇಳಿದ್ದಾರೆ. ಕೊನೆಗೂ ಪ್ರಯಾಣಿಕರ ಅಳು, ಪ್ರಾರ್ಥನೆಯ ನಡುವೆ ವಿಮಾನ ಸುರಕ್ಷಿತವಾಗಿ ಲ್ಯಾಂಡ್ ಆಗಿದೆ.
Next Story





