ಉಡುಪಿ ಜಿಲ್ಲೆಯಾದ್ಯಂತ ಸಂಭ್ರಮದ ಈದುಲ್ ಫಿತ್ರ್

ಉಡುಪಿ/ಕುಂದಾಪುರ, ಜೂ.26: ಈದುಲ್ ಫಿತ್ರ್ ಉಡುಪಿ ಜಿಲ್ಲೆಯಾದ್ಯಂತ ಸಂಭ್ರಮದಿಂದ ಆಚರಿಸಲಾಯಿತು.
ಉಡುಪಿಯ ಜಾಮಿಯಾ ಮಸೀದಿ, ಇಂದ್ರಾಳಿಯ ನೂರಾನಿ ಮಸೀದಿ ಸೇರಿದಂತೆ ವಿವಿಧ ಮಸೀದಿಗಳಲ್ಲಿ ನಿಗದಿತ ಸಮಯಕ್ಕೆ ಈದ್ ನಮಾಝ್ ಧರ್ಮಗುರುಗಳ ನೇತೃತ್ವದಲ್ಲಿ ನಡೆಯಿತು. ಬಳಿಕ ಪರಸ್ಪರ ಹಬ್ಬದ ಶುಭಾಶಯಗಳನ್ನು ವಿನಿಮಯ ವಾಡಿಕೊಂಡರು.
ಕುಂದಾಪುರದ ಜಾಮಿಯಾ ಮಸೀದಿಯಲ್ಲಿ ಬೆಳಿಗ್ಗೆ 8:30ಕ್ಕೆ ಈದ್ ನಮಾಝ್ ನೆರವೇರಿಸಿದ ಧರ್ಮಗುರುಗಳಾದ ಮೌಲಾನ ಹಾಜಿ ಅಬ್ದುಲ್ ರಹೀಮ್ ಪವಿತ್ರ ರಮಝಾನ್ ಬಗ್ಗೆ ಪ್ರವಚನ ನೀಡಿದರು.
ನಮಾಝ್ ನಂತರ ನಗರದ ಪ್ರಮುಖ ಮಾರ್ಗದ ಮೂಲಕ ಸ್ವಲಾತ್ ಹೇಳುತ್ತಾ ಈದ್ಗಾಗೆ ಸಾಗಿ ಅಲ್ಲಿ ದುವಾ ನೆರವೇರಿಸಿ ಪರಸ್ಪರ ಈದ್ ಶುಭಾಶಯಗಳ ವಿನಿಮಯ ಮಾಡಿಕೊಂಡರು.
Next Story





